Ahmedabad Plane Crash: ವಿಮಾನ ನಿರ್ವಹಣೆಯ ಲೋಪಕ್ಕೆ ಟರ್ಕಿ ಸಂಸ್ಥೆ ಕಾರಣ?

ಟರ್ಕಿಯ ಸಂವಹನ ನಿರ್ದೇಶನಾಲಯ ಕೇಂದ್ರದ ತಪ್ಪು ಮಾಹಿತಿ ನಿಗ್ರಹ ಇಲಾಖೆ, ಬೋಯಿಂಗ್ 787-8 ಪ್ರಯಾಣಿಕ ವಿಮಾನದ ನಿರ್ವಹಣೆಯನ್ನು ಟರ್ಕಿಶ್ ಟೆಕ್ನಿಕ್ ನಿರ್ವಹಿಸಿದೆ ಎಂಬ ಹೇಳಿಕೆಯು "ಸುಳ್ಳು" ಎಂದು ಹೇಳಿದೆ.
Air India Plane crash
ಏರ್ ಇಂಡಿಯಾ ವಿಮಾನ ಅಪಘಾತonline desk
Updated on

ನವದೆಹಲಿ: ಈ ವಾರ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ನಿರ್ವಹಣೆಯಲ್ಲಿ ತನ್ನ ಸಂಸ್ಥೆ ಭಾಗಿಯಾಗಿದೆ ಎಂಬ ಆರೋಪವನ್ನು ಟರ್ಕಿ ನಿರಾಕರಿಸಿದೆ. ಟರ್ಕಿಯ ಸಂವಹನ ನಿರ್ದೇಶನಾಲಯ ಕೇಂದ್ರದ ತಪ್ಪು ಮಾಹಿತಿ ನಿಗ್ರಹ ಇಲಾಖೆ, ಬೋಯಿಂಗ್ 787-8 ಪ್ರಯಾಣಿಕ ವಿಮಾನದ ನಿರ್ವಹಣೆಯನ್ನು ಟರ್ಕಿಶ್ ಟೆಕ್ನಿಕ್ ನಿರ್ವಹಿಸಿದೆ ಎಂಬ ಹೇಳಿಕೆಯು "ಸುಳ್ಳು" ಎಂದು ಹೇಳಿದೆ.

"ಅಪಘಾತಕ್ಕೊಳಗಾದ ವಿಮಾನವನ್ನು ಟರ್ಕಿಶ್ ಟೆಕ್ನಿಕ್ ನಿರ್ವಹಿಸಿದೆ ಎಂಬ ಹೇಳಿಕೆಯು ಟರ್ಕಿ-ಭಾರತ ಸಂಬಂಧಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ದಾರಿ ತಪ್ಪಿಸುವ ಗುರಿಯನ್ನು ಹೊಂದಿರುವ ತಪ್ಪು ಮಾಹಿತಿಯಾಗಿದೆ" ಎಂದು X ನಲ್ಲಿ ಪೋಸ್ಟ್ ಮಾಡಿದೆ.

ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 241 ಜನರು ಮತ್ತು ವೈದ್ಯಕೀಯ ಹಾಸ್ಟೆಲ್ ನಲ್ಲಿದ್ದ ಹಲವಾರು ಜನರು ಸಾವನ್ನಪ್ಪಿದ ಒಂದು ದಿನದ ನಂತರ ಸಂಸ್ಥೆಯಿಂದ ಈ ಹೇಳಿಕೆ ಬಂದಿದೆ.

ಗುರುವಾರ ಮಧ್ಯಾಹ್ನ ಅಹಮದಾಬಾದ್‌ನಿಂದ ಬಂದ ವಿಮಾನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಸಂಕೀರ್ಣದ ಆವರಣಕ್ಕೆ ಅಪ್ಪಳಿಸಿತು. ಒಬ್ಬ ಪ್ರಯಾಣಿಕ ಪವಾಡಸದೃಶವಾಗಿ ಬದುಕುಳಿದರು.

"2024 ಮತ್ತು 2025 ರಲ್ಲಿ ಏರ್ ಇಂಡಿಯಾ ಮತ್ತು ಟರ್ಕಿಶ್ ಟೆಕ್ನಿಕ್ ನಡುವೆ ಮಾಡಿಕೊಳ್ಳಲಾದ ಒಪ್ಪಂದಗಳ ಅಡಿಯಲ್ಲಿ, B777 ಮಾದರಿಯ ವೈಡ್-ಬಾಡಿ ವಿಮಾನಗಳಿಗೆ ಮಾತ್ರ ನಿರ್ವಹಣಾ ಸೇವೆಗಳನ್ನು ಒದಗಿಸಲಾಗುತ್ತದೆ. ಅಪಘಾತದಲ್ಲಿ ಸಿಲುಕಿರುವ ಬೋಯಿಂಗ್ 787-8 ಡ್ರೀಮ್‌ಲೈನರ್ ಈ ಒಪ್ಪಂದದ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿಯವರೆಗೆ, ಟರ್ಕಿಶ್ ಟೆಕ್ನಿಕ್ ಈ ರೀತಿಯ ಯಾವುದೇ ಏರ್ ಇಂಡಿಯಾ ವಿಮಾನಗಳ ನಿರ್ವಹಣೆಯನ್ನು ನಡೆಸಿಲ್ಲ" ಎಂದು ಸಂಸ್ಥೆ ಹೇಳಿದೆ.

ಅಪಘಾತಕ್ಕೀಡಾದ ವಿಮಾನದ ಇತ್ತೀಚಿನ ನಿರ್ವಹಣೆಯನ್ನು ನಿರ್ವಹಿಸಿದ ಕಂಪನಿಯ ಬಗ್ಗೆ ತನಗೆ "ಅರಿವಿದೆ" ಎಂದು ಅದು ಹೇಳಿಕೊಂಡಿದೆ, ಆದರೆ "ಹೆಚ್ಚಿನ ಊಹಾಪೋಹಗಳನ್ನು ತಪ್ಪಿಸಲು ಈ ವಿಷಯದ ಬಗ್ಗೆ ಹೇಳಿಕೆ ನೀಡುವುದು ತನ್ನ ವ್ಯಾಪ್ತಿಯನ್ನು ಮೀರಿದೆ" ಎಂದು ಅದು ಹೇಳಿದೆ.

"ತಪ್ಪು ಮಾಹಿತಿ ನಿಗ್ರಹ ಕೇಂದ್ರ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಟರ್ಕಿಯನ್ನು ಪ್ರತಿನಿಧಿಸುವ ನಮ್ಮ ಪ್ರಮುಖ ಬ್ರ್ಯಾಂಡ್‌ಗಳ ಖ್ಯಾತಿಯನ್ನು ಗುರಿಯಾಗಿಸುವ ಪ್ರಯತ್ನಗಳ ವಿರುದ್ಧ ಮೇಲ್ವಿಚಾರಣೆ ಮಾಡುವುದನ್ನು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ. ಟರ್ಕಿಯ ಜನರಾಗಿ, ಈ ದುರಂತ ವಿಮಾನ ಅಪಘಾತದ ಬಗ್ಗೆ ಭಾರತೀಯ ಜನರ ದುಃಖವನ್ನು ನಾವು ಪ್ರಾಮಾಣಿಕವಾಗಿ ಹಂಚಿಕೊಳ್ಳುತ್ತೇವೆ" ಎಂದು ಅದು ಹೇಳಿದೆ.

Air India Plane crash
ಏರ್ ಇಂಡಿಯಾ ಅಪಘಾತದ ಹಿಂದೆ ಟರ್ಕಿ ಕೈವಾಡ? ವಿಧ್ವಂಸಕ ಕೃತ್ಯದ ಸುಳಿವು ನೀಡಿದ Baba Ramdev!

ಭಾರತದ ಒಂಬತ್ತು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸೇವೆಗಳನ್ನು ನಿರ್ವಹಿಸುತ್ತಿದ್ದ ಟರ್ಕಿಶ್ ಸಂಸ್ಥೆಯೊಂದು, ಆಪರೇಷನ್ ಸಿಂಧೂರ್ ವಿಚಾರದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿದ ನಂತರ ತನ್ನ ಭದ್ರತಾ ಅನುಮತಿಯನ್ನು ಕಳೆದುಕೊಂಡ ಸುಮಾರು ಒಂದು ತಿಂಗಳ ನಂತರ ಈ ಹೇಳಿಕೆ ಬಂದಿದೆ.

ಮೇ 15 ರಂದು ನಾಗರಿಕ ವಿಮಾನಯಾನ ಸಚಿವಾಲಯದ ಆದೇಶ, ಸೆಲೆಬಿ ಗ್ರೌಂಡ್ ಹ್ಯಾಂಡ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಭದ್ರತಾ ಅನುಮತಿಯನ್ನು "ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ" ಎಂದು ಹೇಳಿದೆ.

ಮೇ 8 ರಂದು ಭಾರತದ ಮೇಲೆ ಪಾಕಿಸ್ತಾನ ಹಾರಿಸಿದ ಡ್ರೋನ್‌ಗಳಲ್ಲಿ ಹೆಚ್ಚಿನವು ಟರ್ಕಿ ನಿರ್ಮಿತ ಆಸಿಸ್‌ಗಾರ್ಡ್ ಸೋಂಗಾರ್ ಮತ್ತು ಮಾನವರಹಿತ ಯುದ್ಧ ವೈಮಾನಿಕ ವಾಹನವಾದ ಬೇರಕ್ತಾರ್ ಟಿಬಿ 2 ನ್ನು ಒಳಗೊಂಡಿವೆ ಎಂದು ಕಂಡುಬಂದ ನಂತರ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com