
ನವದೆಹಲಿ: 45 ವರ್ಷಗಳ ಸರ್ಕಾರಿ ಸೇವೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಅಮಿತಾಭ್ ಕಾಂತ್ ಅವರು ಸೋಮವಾರ ಭಾರತದ G20 ಶೆರ್ಪಾ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಕೇರಳ ಕೇಡರ್‌ನ 1980ನೇ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಅಮಿತಾಬ್ ಕಾಂತ್ ಅವರನ್ನು ಭಾರತವು G20 ಅಧ್ಯಕ್ಷತೆ ವಹಿಸಿಕೊಳ್ಳುವ ಕೆಲವೇ ತಿಂಗಳುಗಳ ಮೊದಲು ಜುಲೈ 2022 ರಲ್ಲಿ ಭಾರತದ G20 ಶೆರ್ಪಾ ಆಗಿ ನೇಮಿಸಲಾಗಿತ್ತು.
'ನನ್ನ ಹೊಸ ಪ್ರಯಾಣ' ಎಂಬ ಶೀರ್ಷಿಕೆಯ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಅಮಿತಾಬ್ ಕಾಂತ್ ಹೀಗೆ ಹೇಳಿದ್ದಾರೆ.... "45 ವರ್ಷಗಳ ಸಮರ್ಪಿತ ಸರ್ಕಾರಿ ಸೇವೆಯ ನಂತರ, ನಾನು ಹೊಸ ಅವಕಾಶಗಳನ್ನು ಸ್ವೀಕರಿಸಲು ಮತ್ತು ಜೀವನದಲ್ಲಿ ಅಧ್ಯಾಯವನ್ನು ಆರಂಭಿಸಲು ನಿರ್ಧರಿಸಿದ್ದೇನೆ. G20 ಶೆರ್ಪಾ ಹುದ್ದೆಗೆ ನನ್ನ ರಾಜೀನಾಮೆ ಸ್ವೀಕರಿಸಿದ್ದಕ್ಕಾಗಿ ಮತ್ತು ಹಲವಾರು ಅಭಿವೃದ್ಧಿ ಉಪಕ್ರಮಗಳನ್ನು ಮುನ್ನೆಡೆಸಲು ಮತ್ತು ಭಾರತದ ಬೆಳವಣಿಗೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕೊಡುಗೆ ನೀಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಪೋಸ್ಟ್ ಮಾಡಿದ್ದಾರೆ.
Advertisement