ಲಕ್ನೋ: ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಿಮಾನದಲ್ಲಿ ಹೊಗೆ; ಎಲ್ಲಾ ಪ್ರಯಾಣಿಕರು ಸುರಕ್ಷಿತ

ಭಾನುವಾರ ಬೆಳಗ್ಗೆ ಸೌದಿ ಅರೇಬಿಯಾ ಏರ್​ಲೈನ್ಸ್​ ವಿಮಾನ ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅದರ ಎಡ ಚಕ್ರದಿಂದ ಹೊಗೆ ಹೊರಹೊಮ್ಮುತ್ತಿರುವುದು ಕಂಡುಬಂದಿದೆ.
Saudia Airlines Jeddah-Lucknow flight
ಸೌದಿ ಅರೇಬಿಯಾ ಏರ್​ಲೈನ್ಸ್​ ವಿಮಾನ
Updated on

ಲಕ್ನೋ: ಸೌದಿ ಅರೇಬಿಯಾದಿಂದ ಹಜ್ ಯಾತ್ರಿಕರು ಸೇರಿದಂತೆ ಸುಮಾರು 250 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಉತ್ತರ ಪ್ರದೇಶದ ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಭಾನುವಾರ ಬೆಳಗ್ಗೆ ಸೌದಿ ಅರೇಬಿಯಾ ಏರ್​ಲೈನ್ಸ್​ ವಿಮಾನ ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅದರ ಎಡ ಚಕ್ರದಿಂದ ಹೊಗೆ ಹೊರಹೊಮ್ಮುತ್ತಿರುವುದು ಕಂಡುಬಂದಿದೆ. ಚಕ್ರದಲ್ಲಿನ ದೋಷವು ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ಸೋರಿಕೆಯಿಂದಾಗಿರಬಹುದು ಎಂದು ಅಂದಾಜಿಸಲಾಗಿದೆ.

ವಿಮಾನ ರಕ್ಷಣಾ ಮತ್ತು ಅಗ್ನಿಶಾಮಕ ದಳ (ARFF) ತಂಡವು ಸ್ಥಳಕ್ಕೆ ಧಾವಿಸಿತು. ಸೌದಿಯ ತಂಡದೊಂದಿಗೆ ಕೆಲಸ ಮಾಡಿ, ಹೊಗೆಯನ್ನು ನಿಯಂತ್ರಿಸಲಾಯಿತು ಮತ್ತು ವಿಮಾನಕ್ಕೆ ಆಗಬಹುದಾದ ಹಾನಿಯನ್ನು ತಪ್ಪಿಸಲಾಯಿತು" ಎಂದು ಅವರು ಹೇಳಿದರು.

ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ, "ಖಾಲಿ ವಿಮಾನವು ಇಂದು ತನ್ನ ಗಮ್ಯಸ್ಥಾನಕ್ಕೆ ಮರಳುತ್ತದೆ" ಎಂದು ಅವರು ಹೇಳಿದರು. ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ. "ಜೆಡ್ಡಾದಿಂದ 242 ಹಜ್ ಯಾತ್ರಿಕರನ್ನು ಕರೆತರುತ್ತಿದ್ದ ಸೌದಿ ವಿಮಾನದ ಚಕ್ರಗಳಿಂದ ಹೊಗೆ ಪತ್ತೆಯಾಗಿದೆ" ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

Saudia Airlines Jeddah-Lucknow flight
Air India Crash: No Power.. Going Down; ನಡುಕ ಹುಟ್ಟಿಸುತ್ತೆ 5 ಸೆಕೆಂಡುಗಳ ಪೈಲಟ್ ಸುಮಿತ್‌ರ ಕೊನೆಯ ಮಾತು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com