ತಪಾಸಣೆ ವೇಳೆ ತಾಂತ್ರಿಕ ಸಮಸ್ಯೆ ಪತ್ತೆ: ಏರ್ ಇಂಡಿಯಾ ದೆಹಲಿ-ಪ್ಯಾರಿಸ್ ವಿಮಾನ ರದ್ದು

ಜೂನ್ 18 ರಂದು ಪ್ಯಾರಿಸ್ ನಿಂದ ದೆಹಲಿಗೆ ಹಿಂತಿರುಗಬೇಕಿದ್ದ AI142 ವಿಮಾನವನ್ನು ಸಹ ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
Air India Plane
ಏರ್ ಇಂಡಿಯಾ ವಿಮಾನ
Updated on

ನವದೆಹಲಿ: ವಿಮಾನ ಹಾರಾಟ ಪೂರ್ವ ತಪಾಸಣೆಯ ಸಮಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಕಂಡುಬಂದ ನಂತರ, ಏರ್ ಇಂಡಿಯಾ ಮಂಗಳವಾರ ತನ್ನ ದೆಹಲಿ-ಪ್ಯಾರಿಸ್ ವಿಮಾನವನ್ನು ರದ್ದುಗೊಳಿಸಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಅಲ್ಲದೆ "ಸಮಸ್ಯೆಯನ್ನು" ಪರಿಹರಿಸಲಾಗುತ್ತಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

ಜೂನ್ 18 ರಂದು ಪ್ಯಾರಿಸ್ ನಿಂದ ದೆಹಲಿಗೆ ಹಿಂತಿರುಗಬೇಕಿದ್ದ AI142 ವಿಮಾನವನ್ನು ಸಹ ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.

ಜೂನ್ 17 ರಂದು ದೆಹಲಿಯಿಂದ ಪ್ಯಾರಿಸ್ ಗೆ(ಏ143) ಹಾರಾಟ ನಡೆಸಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ. ಕಡ್ಡಾಯ ಪೂರ್ವ ವಿಮಾನ ತಪಾಸಣೆಯಲ್ಲಿ ಪ್ರಸ್ತುತ ಪರಿಹರಿಸಲಾಗುತ್ತಿರುವ ಸಮಸ್ಯೆಯನ್ನು ಗುರುತಿಸಲಾಗಿದೆ.

Air India Plane
ಅಹ್ಮದಾಬಾದ್-ಲಂಡನ್ ಮಾರ್ಗದ ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ, ತಪ್ಪಿದ ಅನಾಹುತ!

ಆದಾಗ್ಯೂ, ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ (CDG) ವಿಮಾನ ನಿಲ್ದಾಣದಲ್ಲಿ ರಾತ್ರಿ ಕಾರ್ಯಾಚರಣೆಗಳ ಮೇಲಿನ ನಿರ್ಬಂಧಗಳ ಅಡಿಯಲ್ಲಿ ವಿಮಾನ ಹಾರಾಟ ನಡೆಯುವುದರಿಂದ, ಈ ವಿಮಾನವನ್ನು ರದ್ದುಗೊಳಿಸಲಾಗಿದೆ” ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ಹೋಟೆಲ್ ವಸತಿ ಸೌಕರ್ಯವನ್ನು ಒದಗಿಸುತ್ತಿದೆ ಮತ್ತು ಪ್ರಯಾಣಿಕರು ರದ್ದತಿ ಅಥವಾ ಉಚಿತ ಮರುಹೊಂದಿಕೆಯನ್ನು ಆಯ್ಕೆ ಮಾಡಿದರೆ ಸಂಪೂರ್ಣ ಮರುಪಾವತಿಯನ್ನು ನೀಡುತ್ತಿದೆ ಎಂದು ಏರ್ ಇಂಡಿಯಾ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com