
ನವದೆಹಲಿ: ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ತನ್ನ ಮೂವರು ಅಧಿಕಾರಿಗಳನ್ನು ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಹುದ್ದೆಗಳಿಂದ ತೆಗೆದುಹಾಕುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಏರ್ ಇಂಡಿಯಾಗೆ ಆದೇಶ ಮಾಡಿದೆ.
ಜೂನ್ 20 ರಂದು ಹೊರಡಿಸಿದ ತನ್ನ ಆದೇಶದಲ್ಲಿ, ವಿಮಾನಯಾನ ಕಣ್ಗಾವಲು ಸಂಸ್ಥೆಯಾದ ಡಿಜಿಸಿಎ, ಈ ಅಧಿಕಾರಿಗಳ ವಿರುದ್ಧ ಕೂಡಲೇ ಆಂತರಿಕ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯನ್ನು ಸೂಚಿಸಿದೆ.
ಡಿಜಿಸಿಎ ಆದೇಶ ಪ್ರಕಾರ, ಮೂವರು ಅಧಿಕಾರಿಗಳಲ್ಲಿ ವಿಮಾನಯಾನ ವಿಭಾಗದ ಉಪಾಧ್ಯಕ್ಷರೂ ಸೇರಿದ್ದಾರೆ. ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ವೇಳೆ ಏರ್ ಇಂಡಿಯಾ ವಿಮಾನ - ಬೋಯಿಂಗ್ 787 -8 ಡ್ರೀಮ್‌ಲೈನರ್ - ಅಪಘಾತಕ್ಕೀಡಾಗಿ ಸುಮಾರು 300 ಜನರು ಮೃತಪಟ್ಟ ಘಟನೆ ನಂತರ ಈ ಆದೇಶ ಬಂದಿದೆ.
ಏರ್ ಇಂಡಿಯಾ ವಿಮಾನ ಅಪಘಾತ ನಂತರ, ಏರ್ ಇಂಡಿಯಾದ ಬೋಯಿಂಗ್ 787 ವಿಮಾನದ ಕಣ್ಗಾವಲು ಹೆಚ್ಚಿಸಲು ಡಿಜಿಸಿಎ ಆದೇಶಿಸಿದೆ.
ಈ ಮಧ್ಯೆ, ತುರ್ತು ವ್ಯವಸ್ಥೆಗಳ ಭದ್ರತಾ ಪರಿಶೀಲನೆಗಳು ಬಾಕಿ ಉಳಿದಿದ್ದರೂ ಏರ್‌ಬಸ್‌ನ ಮೂರು ವಿಮಾನಗಳು ಕಾರ್ಯಾಚರಣೆಯನ್ನು ಮುಂದುವರಿಸಿದ ನಂತರ ಡಿಜಿಸಿಎ ಸುರಕ್ಷತಾ ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ಏರ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.
Advertisement