Match is fixed: ಚುನಾವಣಾ ಆಯೋಗ ಉತ್ತರ ನೀಡುವ ಬದಲು ಸಾಕ್ಷ್ಯಗಳನ್ನು ನಾಶಪಡಿಸುತ್ತಿದೆ; ರಾಹುಲ್ ಗಾಂಧಿ ಆರೋಪ
ನವದೆಹಲಿ: ಭಾರತೀಯ ಚುನಾವಣಾ ಆಯೋಗ ಪಾರದರ್ಶಕತೆ ಒದಗಿಸಬೇಕಾದಾಗ ಸಂದರ್ಭದಲ್ಲಿ "ಸಾಕ್ಷ್ಯಗಳನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ಫಲಿತಾಂಶ ಪ್ರಕಟವಾದ 45 ದಿನಗಳ ನಂತರ ಚುನಾವಣಾ ಪ್ರಕ್ರಿಯೆಯ ಸಿಸಿಟಿವಿ, ವೆಬ್‌ಕಾಸ್ಟಿಂಗ್ ಮತ್ತು ವೀಡಿಯೊ ತುಣುಕನ್ನು ನಾಶಪಡಿಸುವಂತೆ ಚುನಾವಣಾ ಸಂಸ್ಥೆ ತನ್ನ ರಾಜ್ಯ ಅಧಿಕಾರಿಗಳಿಗೆ ಸೂಚಿಸಿದ ನಂತರ ಅವರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗದ ನಡೆಯನ್ನು ಟೀಕಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಹೊಣೆಗಾರಿಕೆಯನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ.
"ಮತದಾರರ ಪಟ್ಟಿ? ಯಂತ್ರ ಓದಬಹುದಾದ ಸ್ವರೂಪ ನೀಡುವುದಿಲ್ಲ. ಸಿಸಿಟಿವಿ ದೃಶ್ಯಾವಳಿ? ಕಾನೂನು ಬದಲಿಸಿ ಮರೆಮಾಡಲಾಗಿದೆ. ಚುನಾವಣಾ ಫೋಟೋಗಳು ಮತ್ತು ವೀಡಿಯೊಗಳು? ಈಗ ಅವುಗಳನ್ನು 45 ದಿನಗಳಲ್ಲಿ ಡಿಲೀಟ್ ಮಾಡಲಾಗುತ್ತಿದೆ. 1 ವರ್ಷ ಅಲ್ಲ. ಉತ್ತರಗಳನ್ನು ನೀಡಬೇಕಾದವರು - ಸಾಕ್ಷ್ಯವನ್ನು ನಾಶಪಡಿಸುತ್ತಿದ್ದಾರೆ ಎಂದು ಗಾಂಧಿ ಆರೋಪಿಸಿದ್ದಾರೆ.
ಇದು 'ಮ್ಯಾಚ್ ಫಿಕ್ಸಿಂಗ್' ಎಂಬುದು ಸ್ಪಷ್ಟವಾಗಿದೆ. ಫಿಕ್ಸಿಂಗ್ ಚುನಾವಣೆಯು ಪ್ರಜಾಪ್ರಭುತ್ವಕ್ಕೆ ವಿಷವಾಗಿದೆ" ಎಂದು ಅವರು ಹೇಳಿದ್ದಾರೆ. ಚುನಾವಣಾ ಕ್ರಮಗಳು ತೀವ್ರ ಕಳವಳಕಾರಿಯಾಗಿವೆ ಎಂದು ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ, ಮತದಾನದ ಡೇಟಾ ಮತ್ತು ವೀಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಲು ಗಾಂಧಿ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿದ್ದಾರೆ.
ಚುನಾವಣಾ ಅರ್ಜಿಯನ್ನು ಸಲ್ಲಿಸದಿದ್ದಲ್ಲಿ 45 ದಿನಗಳ ನಂತರ ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳ ಸಿಸಿಟಿವಿ ರೆಕಾರ್ಡಿಂಗ್‌ಗಳು, ವೆಬ್‌ಕಾಸ್ಟಿಂಗ್ ದೃಶ್ಯಗಳು ಮತ್ತು ಛಾಯಾಗ್ರಹಣವನ್ನು ನಾಶಪಡಿಸಬಹುದು ಎಂದು ಮೇ 30 ರಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಭಾರತೀಯ ಚುನಾವಣಾ ಆಯೋಗ ಪತ್ರ ಬರೆದಿದೆ.
ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಕಾನೂನುಬದ್ಧವಾಗಿ ಅನುಮತಿಸಲಾದ 45 ದಿನಗಳ ಅವಧಿಯಲ್ಲಿ ಯಾವುದೇ ಚುನಾವಣಾ ಅರ್ಜಿಯನ್ನು ಸಲ್ಲಿಸದಿದ್ದರೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.
ಭಾರತೀಯ ಚುನಾವಣಾ ಕಾನೂನಿನ ಅಡಿಯಲ್ಲಿ ಯಾವುದೇ ವ್ಯಕ್ತಿಯು ಈ ಕಾಲಮಿತಿಯೊಳಗೆ ಸಂಬಂಧಿತ ಉಚ್ಚ ನ್ಯಾಯಾಲಯದಲ್ಲಿ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಬಹುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ