
ಶ್ರೀನಗರ: ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು (IWT) ಅಮಾನತುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಸಿಂಧೂ ನದಿ ಕಾಲುವೆ ಮೂಲಕ ಮೂರು ಪಶ್ಚಿಮ ನದಿಗಳಿಂದ ಹೆಚ್ಚುವರಿ ನೀರನ್ನು ಪಂಜಾಬ್‌ಗೆ ತಿರುಗಿಸುವ ಪ್ರಸ್ತಾಪವನ್ನು ವಿರೋಧಿಸಿದ್ದಾರೆ.
ನಮ್ಮ ನೀರನ್ನು ಯಾರೂ ತೆಗೆದುಕೊಳ್ಳಬಾರದು. ಅದನ್ನು ನಾನು ಅನುಮತಿಸುವುದಿಲ್ಲ. ಮೊದಲು, ನಮ್ಮ ನೀರನ್ನು ನಮಗಾಗಿ ಬಳಸೋಣ. ನಂತರ ಇತರರ ಬಗ್ಗೆ ಮಾತನಾಡೋಣ" ಎಂದು ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸಿಂಧೂ ಕಾಲುವೆಗಳಿಂದ ಮೂರು ನದಿಗಳಾದ ಸಿಂಧೂ, ಜೀಲಂ ಮತ್ತು ಚೆನಾಬ್‌ಗಳಿಂದ ಹೆಚ್ಚುವರಿ ನೀರನ್ನು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಕ್ಕೆ ತಿರುಗಿಸುವ ಉದ್ದೇಶಿಸಿತ 113-ಕಿಮೀ ದೂರದ ಕಾಲುವೆಗೆ ಸಂಬಂಧಿಸಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
"ಜಮ್ಮುವಿನಲ್ಲಿ ಬರಗಾಲವಿದ್ದು, ನಲ್ಲಿಗಳು ಬತ್ತಿ ಹೋಗುತ್ತಿವೆ. ಸಿಂಧೂ ನದಿ ಒಪ್ಪಂದಡಿ ಈಗಾಗಲೇ ಮೂರು (ಪೂರ್ವ) ನದಿಗಳನ್ನು ಹೊಂದಿರುವ ಪಂಜಾಬ್‌ಗೆ ನಾನೇಕೆ ನೀರನ್ನು ಕಳುಹಿಸಬೇಕು? ಪಂಜಾಬ್ ನಮಗೆ ನೀರು ನೀಡಿದೆಯೇ" ಎಂದು ಓಮರ್ ಪ್ರತಿವಾದಿಸಿದ್ದಾರೆ.
ವಿವಿಧೋದ್ದೇಶ ಯೋಜನೆ ಮತ್ತು ಶಹಪುರ್ ಕಂಡಿ ಬ್ಯಾರೇಜ್ ಪ್ರಾರಂಭವಾದಾಗ ಜಮ್ಮು ಮತ್ತು ಕಾಶ್ಮೀರ ನೀರಿಗಾಗಿ ಹಾತೊರೆಯುತ್ತಿತ್ತು. ಇಷ್ಟು ವರ್ಷ ನಮ್ಮನ್ನು ಅಳುವಂತೆ ಮಾಡಿದರು. ಸಾಕಷ್ಟು ಹೋರಾಟದ ನಂತರ ಶಹಪುರ ಕಂಡಿ (ಬ್ಯಾರೇಜ್) ಕೆಲಸ ಮಾಡಲಾಯಿತು. ಪಂಜಾಬ್‌ಗೆ ನೀರು ಬಿಡುವುದಿಲ್ಲ ಎಂದು ಹೇಳಿದ ಅಬ್ದುಲ್ಲಾ, ಈಗಿರುವ ನೀರನ್ನು ನಾವೇ ಬಳಸುತ್ತೇವೆ. ನಂತರ ಇತರರ ಬಗ್ಗೆ ನಿರ್ಧರಿಸುತ್ತೇವೆ ಎಂದರು.
ಪಶ್ಚಿಮ ನದಿಯ ಹೆಚ್ಚುವರಿ ನೀರನ್ನು ಜಮ್ಮು ಮತ್ತು ಕಾಶ್ಮೀರ ಹೇಗೆ ಬಳಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಕಾಶ್ಮೀರದ ತುಲ್ಬುಲ್ ನ್ಯಾವಿಗೇಷನ್ ಬ್ಯಾರೇಜ್ ಯೋಜನೆಯನ್ನು ಮತ್ತೆ ಪ್ರಾರಂಭಿಸುತ್ತೇವೆ. ಅಕ್ನೂರುನ ಚೆನಾಬ್ ನದಿಯಿಂದ ಜಮ್ಮ ನದಿಗೆ ತಿರುಗಿಸುತ್ತೇವೆ" ಎಂದು ಘೋಷಿಸಿದರು.
ವುಲ್ಲಾರ್ ಬ್ಯಾರೇಜ್ ಯೋಜನೆ ಉತ್ತರ ಕಾಶ್ಮೀರದ ವುಲರ್ ಸರೋವರದ ನ್ಯಾವಿಗೇಷನ್ ಲಾಕ್-ಕಮ್-ಕಂಟ್ರೋಲ್ ರಚನೆಯಾಗಿದೆ. ಕಡಿಮೆ ಚಳಿಗಾಲದ ತಿಂಗಳುಗಳಲ್ಲಿ ಝೀಲಂ ನದಿಯಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ವುಲರ್ ಬ್ಯಾರೇಜ್ ಯೋಜನೆಗೆ ಶೀಘ್ರದಲ್ಲೇ ಪುನಶ್ಚೇತನ: ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಕಳೆದ ವಾರ ಶ್ರೀನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸಿಂಧೂ ನದಿ ಜಲ ಒಪ್ಪಂದದಿಂದ ಪಾಕಿಸ್ತಾನದ ಆಕ್ಷೇಪಣೆಯಿಂದಾಗಿ 1987 ರಲ್ಲಿ ಸ್ಥಗಿತಗೊಂಡಿದ್ದ ವುಲರ್ ಬ್ಯಾರೇಜ್ ಯೋಜನೆಯನ್ನು ಶೀಘ್ರದಲ್ಲೇ ಪುನಶ್ಚೇತನಗೊಳಿಸಲಾಗುವುದು ಎಂದು ಹೇಳಿದ್ದಾರೆ.
1960 ರ ಸಿಂಧೂ ನದಿ ಜಲ ಒಪ್ಪಂದಡಿ ಪೂರ್ವ ನದಿಗಳಾದ ರವಿ, ಬಿಯಾಸ್ ಮತ್ತು ಸಟ್ಲೆಜ್ ಅನ್ನು ಭಾರತಕ್ಕೆ ನೀಡಲಾಯಿತು ಮತ್ತು ಪಶ್ಚಿಮ ನದಿಗಳಾದ ಸಿಂಧೂ, ಜೀಲಂ ಮತ್ತು ಚೆನಾಬ್ ಅನ್ನು ಪಾಕಿಸ್ತಾನಕ್ಕೆ ನೀಡಲಾಯಿತು, ಭಾರತ ಸೀಮಿತ ಪ್ರಮಾಣದಲ್ಲಿ ಮಾತ್ರ ನೀರನ್ನು ಪಡೆದಿತ್ತು. ಈ ಯೋಜನೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನೀರಿನ ತಾತ್ವರವಿದೆ. ಏಕೆಂದರೆ ನೀರನ್ನು ಸಂಗ್ರಹಿಸಲು ಯಾವುದೇ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಿಲ್ಲ. ಈ ಪ್ರದೇಶದಲ್ಲಿ 13 ಲಕ್ಷ ಎಕರೆ ಕೃಷಿ ಭೂಮಿಗೆ ಮಾತ್ರ ನೀರುಣಿಸಬಹುದು.
‘ತುಲ್‌ಬುಲ್ ನ್ಯಾವಿಗೇಷನ್ ಯೋಜನೆ ಕಾಮಗಾರಿ ಆರಂಭ: ಪಂಜಾಬ್‌ಗೆ ನೀರು ಬಿಡುವುದಿಲ್ಲ ಎಂದು ಪ್ರತಿಪಾದಿಸಿದ ಒಮರ್, "ಈಗಿರುವ ನೀರನ್ನು ನಮಗಾಗಿ ಬಳಸುತ್ತೇವೆ ಮತ್ತು ನಂತರ ಇತರರ ಬಗ್ಗೆ ನಿರ್ಧರಿಸುತ್ತೇವೆ" ಎಂದು ಹೇಳಿದರು. ಉತ್ತರ ಕಾಶ್ಮೀರದಲ್ಲಿ ತುಲ್ ಬುಲ್ ನ್ಯಾವಿಗೇಷನ್ ಬ್ಯಾರೇಜ್ ಕಾಮಗಾರಿ ಆರಂಭಿಸುತ್ತೇವೆ. ಅಖ್ನೂರ್‌ನಿಂದ ಜಮ್ಮುವಿಗೆ ಚೆನಾಬ್ ನದಿಯಿಂದ ನೀರನ್ನು ತಿರುಗಿಸುತ್ತೇವೆ" ಎಂದು ಅವರು ಘೋಷಿಸಿದರು.
Advertisement