
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲಲ್ಲಿ ದ್ವಿಚಕ್ರ ವಾಹನ ಸವಾರರು ಸಹ ಟೋಲ್ ಶುಲ್ಕ ಪಾವತಿಸಬೇಕು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಇದು ಸುಳ್ಳು ಸುದ್ದಿ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುವಾರ ಸ್ಪಷ್ಟೀಕರಣ ನೀಡಿದೆ.
ಬೈಕ್‌ಗಳಿಗೂ ಯಾವುದೇ ಟೋಲ್ ಶುಲ್ಕ ವಿಧಿಸುತ್ತಿಲ್ಲ. ಕೆಲವು ಮಾಧ್ಯಮಗಳಲ್ಲಿ ಬಂದ ಎಲ್ಲಾ ವರದಿಗಳು ಸುಳ್ಳು ಎಂದು NHAI ಪರಿಗಣಿಸಿದೆ. ಇದಲ್ಲದೆ, ಅಂತಹ ಯಾವುದೇ ಪ್ರಸ್ತಾಪ ಸಹ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇದನ್ನೇ ಹೇಳಿ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ತಮ್ಮ ಪೋಸ್ಟ್‌ನಲ್ಲಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, "ಕೆಲವು ಮಾಧ್ಯಮಗಳು ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುವ ಬಗ್ಗೆ ದಾರಿತಪ್ಪಿಸುವ ಸುದ್ದಿಗಳನ್ನು ಹರಡುತ್ತಿವೆ. ಅಂತಹ ಯಾವುದೇ ನಿರ್ಧಾರ ಸರ್ಕಾರದ ಮುಂದೆ ಇಲ್ಲ. ದ್ವಿಚಕ್ರ ವಾಹನಗಳಿಗೆ ಟೋಲ್ ವಿನಾಯಿತಿ ಸಂಪೂರ್ಣವಾಗಿ ಮುಂದುವರಿಯುತ್ತದೆ. ಸತ್ಯವನ್ನು ಪರಿಶೀಲಿಸದೆ ದಾರಿತಪ್ಪಿಸುವ ಸುದ್ದಿ ಹರಡುವುದು ಆರೋಗ್ಯಕರ ಪತ್ರಿಕೋದ್ಯಮದ ಸಂಕೇತವಲ್ಲ. ನಾನು ಇದನ್ನು ಖಂಡಿಸುತ್ತೇನೆ" ಎಂದು ಹೇಳಿದ್ದಾರ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್-ಮುಕ್ತ ಪ್ರಯಾಣ ಕೊನೆಗೊಳ್ಳಬಹುದು. ಜುಲೈ 15, 2025 ರಿಂದ ರಾಷ್ಟ್ರೀಯ ಹೆದ್ದಾರಿಳಲ್ಲಿ ಬೈಕ್ ಗಳಿಗೆ ಟೋಲ್ ಶುಲ್ಕ ವಿಧಿಸಬಹುದು ಎಂದು ಕೆಲವು ಮಾಧ್ಯಮ ವರದಿ ಮಾಡಿದ್ದವು.
ಪ್ರಸ್ತುತ, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಿಗೆ ಯಾವುದೇ ಟೋಲ್ ಶುಲ್ಕ ಇಲ್ಲ.
Advertisement