
ಮುಂಬೈ: ದೇಶದಲ್ಲಿ ಇತ್ತೀಚಿಗೆ ಸಂಭವಿಸಿದ ಅಹಮದಾಬಾದ್ ವಿಮಾನ ದುರಂತ ಸೇರಿದಂತೆ ಕೆಲ ವಿಮಾನ ತುರ್ತು ಲ್ಯಾಂಡಿಂಗ್, ಹುಸಿ ಬಾಂಬ್ ಬೆದರಿಕೆಯಂತಹ ಪ್ರಕರಣಗಳು ಮರು ಕಳಿಸುತ್ತಿದ್ದು, ಜನರು ವಿಮಾನದಲ್ಲಿ ಪ್ರಯಾಣಿಸಲು ಆತಂಕಪಡುವಂತಾಗಿದೆ.
ಇದೇ ರೀತಿ ಶನಿವಾರ ಚೆನ್ನೈಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ನಲ್ಲಿ ಸುಟ್ಟ ವಾಸನೆ ಕಂಡುಬಂದಿದೆ. ತದನಂತರ ಮುಂಬೈಗೆ ವಿಮಾನ ಮರಳಬೇಕಾಯಿತು. ಆದರೆ, ವಾಪಸ್ಸಾದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಮುಂಬೈಯಿಂದ ಚೆನ್ನೈ ಕಡೆಗೆ ತೆರಳುತ್ತಿದ್ದ AI 639 ವಿಮಾನದಲ್ಲಿ ಸುಟ್ಟ ವಾಸನೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಮುಂಬೈಗೆ ಮರಳಿದೆ ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ವಿಮಾನ ಬದಲಾವಣೆ ಪ್ರಾರಂಭಿಸಲಾಯಿತು. ಈ ಅನಿರೀಕ್ಷಿತ ಘಟನೆಯಿಂದ ಪ್ರಯಾಣಿಕರಿಗೆ ಆದ ಅನಾನುಕೂಲವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಬೆಂಬಲ ಒದಗಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
Advertisement