Sajjad Gani Lone
ಸಜ್ಜದ್ ಗನಿ ಲೋನ್

'ಪೀಪಲ್ಸ್ ಅಲೈಯನ್ಸ್ ಫಾರ್ ಚೇಂಜ್': ಕಾಶ್ಮೀರದಲ್ಲಿ ಹೊಸ ರಾಜಕೀಯ ಮೈತ್ರಿಕೂಟ ಘೋಷಣೆ

ಇಂದು ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಫ್ ಅಧ್ಯಕ್ಷ ಶಮೀಮ್ ಅಹ್ಮದ್ ಥೋಕರ್ ಈ ಹೊಸ ಮೈತ್ರಿಕೂಟವನ್ನು ಘೋಷಣೆ ಮಾಡಿದರು.
Published on

ಶ್ರೀನಗರ: ಕಾಶ್ಮೀರ ಮೂಲದ ಮೂರು ಪ್ರಾದೇಶಿಕ ರಾಜಕೀಯ ಪಕ್ಷಗಳು ಪೀಪಲ್ಸ್ ಅಲೈಯನ್ಸ್ ಫಾರ್ ಚೇಂಜ್ ಎಂಬ ಹೊಸ ರಾಜಕೀಯ ಮೈತ್ರಿಕೂಟವನ್ನು ರಚಿಸಲು ಒಗ್ಗೂಡಿವೆ.

ಈ ಮೈತ್ರಿಕೂಟದಲ್ಲಿ ಶಾಸಕ ಸಜ್ಜದ್ ಗನಿ ಲೋನ್ ನೇತೃತ್ವದ ಪೀಪಲ್ಸ್ ಕಾನ್ಫರೆನ್ಸ್; ಮಾಜಿ ಶಾಸಕ ಹಕೀಮ್ ಮೊಹಮ್ಮದ್ ಯಾಸಿನ್ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್(ಪಿಡಿಎಫ್) ಮತ್ತು ಈಗ ನಿಷೇಧಿತ ಜಮಾತ್-ಇ-ಇಸ್ಲಾಮಿಯ ಮಾಜಿ ಸದಸ್ಯರನ್ನು ಒಳಗೊಂಡ ಹೊಸದಾಗಿ ರಚಿಸಲಾದ ರಾಜಕೀಯ ಪಕ್ಷ ಜಸ್ಟೀಸ್ & ಡೆವಲಪ್‌ಮೆಂಟ್ ಫ್ರಂಟ್(ಜೆಡಿಎಫ್) ಸೇರಿವೆ.

ಇಂದು ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಫ್ ಅಧ್ಯಕ್ಷ ಶಮೀಮ್ ಅಹ್ಮದ್ ಥೋಕರ್ ಈ ಹೊಸ ಮೈತ್ರಿಕೂಟವನ್ನು ಘೋಷಣೆ ಮಾಡಿದರು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಾಮೂಹಿಕವಾಗಿ ಕೆಲಸ ಮಾಡುವ ಮೈತ್ರಿಕೂಟದ ಗುರಿಯ ಬಗ್ಗೆ ಅವರು ಒತ್ತಿ ಹೇಳಿದರು.

"ಜನರಿಗೆ ಸೇವೆ ಸಲ್ಲಿಸಲು ನಾವು ಒಂದಾಗಬೇಕು" ಎಂದ ಥೋಕರ್, ಈ ಪ್ರದೇಶದಲ್ಲಿ ರಾಜಕೀಯ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು.

 Sajjad Gani Lone
ಒಮರ್ ಅಬ್ದುಲ್ಲಾ ನೇತೃತ್ವದ ಪೀಪಲ್ಸ್ ಅಲೈಯನ್ಸ್ ನಿಯೋಗ ಕಾರ್ಗಿಲ್‌ಗೆ ಭೇಟಿ

"ಹೊಸ ಮೈತ್ರಿಕೂಟ ರಚನೆಯಾಗಿದೆ. ಇದು ಆರಂಭ, ಅಂತ್ಯವಲ್ಲ. ಬದಲಾವಣೆಗಾಗಿ ನಮ್ಮೊಂದಿಗೆ ಸೇರುವಂತೆ ನಾವು ಇತರ ಸಮಾನ ಮನಸ್ಕ ಪಕ್ಷಗಳನ್ನು ಸಂಪರ್ಕಿಸುತ್ತೇವೆ. ಈ ವೇದಿಕೆಯು ನೋವು ಸಹಿಸಿಕೊಂಡವರನ್ನು ಒಂದುಗೂಡಿಸಲು ಮತ್ತು ನೋವು ಉಂಟುಮಾಡಿದವರನ್ನು ಹೊರಗಿಡಲು ಯತ್ನಿಸುತ್ತದೆ" ಎಂದರು.

ಹೊಸ ಮೈತ್ರಿಕೂಟ ಘೋಷಣೆಯ ಸಮಯದಲ್ಲಿ, ಮೂರು ಪಕ್ಷಗಳ ನಾಯಕರು 'ಪೀಪಲ್ಸ್ ಅಲೈಯನ್ಸ್ ಫಾರ್ ಚೇಂಜ್' ಎಂಬ ಶೀರ್ಷಿಕೆಯ ಮೈತ್ರಿಕೂಟದ ಸ್ಥಾಪಕ ದಾಖಲೆಯನ್ನು ಬಿಡುಗಡೆ ಮಾಡಿದರು.

ಘೋಷಣೆಯ ಪ್ರಕಾರ, ಈ ಮೈತ್ರಿಕೂಟವು 370ನೇ ವಿಧಿ, 35A ವಿಧಿ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಬದ್ಧವಾಗಿದೆ. ಈ ಉದ್ದೇಶ ಸಾಧಿಸಲು ಎಲ್ಲಾ ರಾಜಕೀಯ ರೀತಿಯ ಮಾರ್ಗಗಳನ್ನು ಅನ್ವೇಷಿಸಲು ಪ್ರತಿಜ್ಞೆ ಮಾಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com