
ಜುನಾಗಢ: ಈ ವರ್ಷದ ಮೇ ತಿಂಗಳಲ್ಲಿ ಏಷ್ಯಾಟಿಕ್ ಸಿಂಹಗಳ ಗಣತಿ ನಡೆಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಘೋಷಿಸಿದ್ದಾರೆ.
ಇಂದು ವಿಶ್ವ ವನ್ಯಜೀವಿ ದಿನದ ಅಂಗವಾಗಿ ಗುಜರಾತ್‌ನ ಜುನಾಗಢ ಜಿಲ್ಲೆಯ ಸಸಾನ್‌ನಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಏಳನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ವರ್ಷದ ಮೇ ತಿಂಗಳಲ್ಲಿ 16ನೇ ಏಷ್ಯಾಟಿಕ್ ಸಿಂಹಗಳ ಗಣತಿ ನಡೆಸುವುದಾಗಿ ತಿಳಿಸಿದರು.
ಇದೇ ವೇಳೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ಶ್ರೇಷ್ಠತೆಯ ಕೇಂದ್ರ, SACON ಅನ್ನು ಸ್ಥಾಪಿಸುವುದಾಗಿಯೂ ಪ್ರಧಾನಿ ಘೋಷಿಸಿದರು ಮತ್ತು ನದಿ ಡಾಲ್ಫಿನ್‌ಗಳ ಕುರಿತು ಪುಸ್ತಕವನ್ನು ಬಿಡುಗಡೆ ಮಾಡಿದರು.
ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಏಳನೇ ಸಭೆಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಮತ್ತು ಇತರ ಸದಸ್ಯರು ಭಾಗವಹಿಸಿದ್ದರು.
ಇದಕ್ಕು ಮುನ್ನ ಪ್ರಧಾನಿ ಮೋದಿ ಅವರು ಗಿರ್ ಅಭಯಾರಣ್ಯದಲ್ಲಿ ಸಿಂಹ ಸಫಾರಿ ನಡೆಸಿದರು. ಬಳಿಕ ಸಫಾರಿಯ ಸಮಯದಲ್ಲಿ ತಾವು ನೋಡಿದ ಸಿಂಹಗಳ ಚಿತ್ರಗಳನ್ನು ಪ್ರಧಾನಿಯವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement