ಔರಂಗಜೇಬ್ ಹಿಂದೂ ವಿರೋಧಿಯಾಗಿದ್ದರೆ ಶೇ.34 ರಷ್ಟು ಹಿಂದೂಗಳು ಆತನ ಪರ ಇರುತ್ತಿರಲಿಲ್ಲ: ಶಾಸಕ ಅಬು ಅಜ್ಮಿ ಸಮರ್ಥನೆ

ಔರಂಗಜೇಬ್ ಒಬ್ಬ ಉತ್ತಮ ಆಡಳಿತಗಾರ ಮತ್ತು ಶಂಭಾಜಿ ಮಹಾರಾಜರೊಂದಿಗಿನ ಜಗಳವು ರಾಜಕೀಯ ಯುದ್ಧವಾಗಿತ್ತು ಎಂದು ಅಬು ಅಜ್ಮಿ ಹೇಳಿದ್ದಾರೆ.
Abu Azmi
ಅಬು ಅಜ್ಮಿonline desk
Updated on

ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಸ್ತುತಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರನ್ನು ಮಹಾರಾಷ್ಟ್ರ ವಿಧಾನಸಭೆಯಿಂದ ಅಮಾನತುಗೊಳಿಸಬೇಕೆಂದು ಆಡಳಿತಾರೂಢ ಮಹಾಯುತಿಯ ಸದಸ್ಯರು ಪಟ್ಟು ಹಿಡಿದಿದ್ದಾರೆ.

ಔರಂಗಜೇಬ್ ಒಬ್ಬ ಉತ್ತಮ ಆಡಳಿತಗಾರ ಮತ್ತು ಶಂಭಾಜಿ ಮಹಾರಾಜರೊಂದಿಗಿನ ಜಗಳವು ರಾಜಕೀಯ ಯುದ್ಧವಾಗಿತ್ತು ಎಂದು ಅಬು ಅಜ್ಮಿ ಹೇಳಿದ್ದಾರೆ.

ವ್ಯಾಪಕ ವಿರೋಧದ ನಡುವೆಯೂ ಅಬು ಅಜ್ಮಿ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. "ಆಗ ರಾಜರು ಅಧಿಕಾರ ಮತ್ತು ಆಸ್ತಿಗಾಗಿ- ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿದ್ದರು, ಆದರೆ ಅದು ಧಾರ್ಮಿಕ್ಕೆ ಸಂಬಂಧಿಸಿರಲಿಲ್ಲ. ಅವರು (ಔರಂಗಜೇಬ್) 52 ವರ್ಷಗಳ ಕಾಲ ಆಳಿದರು ಮತ್ತು ಅವರು ನಿಜವಾಗಿಯೂ ಹಿಂದೂಗಳನ್ನು ಮತಾಂತರಿಸಿದ್ದರೆ ಎಷ್ಟು ಸಂಖ್ಯೆಯಲ್ಲಿ ಹಿಂದೂಗಳನ್ನು ಮತಾಂತರಿಸುತ್ತಿದ್ದರು ಎಂದು ಊಹಿಸಿಕೊಳ್ಳಿ.

ಔರಂಗಜೇಬ್ ದೇವಾಲಯಗಳನ್ನು ನಾಶಪಡಿಸಿದ್ದರೆ, ಅವರು ಮಸೀದಿಗಳನ್ನು ಸಹ ನಾಶಪಡಿಸಿದ್ದರು... ಅವರು ಹಿಂದೂಗಳ ವಿರುದ್ಧವಾಗಿದ್ದರೆ, 34% ಹಿಂದೂಗಳು ಆತನೊಂದಿಗೆ ಇರುತ್ತಿರಲಿಲ್ಲ ಮತ್ತು ಅವರ ಸಲಹೆಗಾರರು ಹಿಂದೂಗಳಾಗುತ್ತಿರಲಿಲ್ಲ... ಔರಂಗಜೇಬ್ ವಿಷಯಕ್ಕೆ ಹಿಂದೂ-ಮುಸ್ಲಿಂ ಕೋನಗಳನ್ನು ನೀಡುವ ಅಗತ್ಯವಿಲ್ಲ. ಈ ದೇಶವು ಸಂವಿಧಾನದ ಪ್ರಕಾರ ನಡೆಯುತ್ತದೆ ಮತ್ತು ನಾನು ಹಿಂದೂ ಸಹೋದರರ ವಿರುದ್ಧ ಒಂದು ಮಾತನ್ನೂ ಹೇಳಿಲ್ಲ." ಎಂದು ಹೇಳಿದ್ದಾರೆ.

ಈ ವಿಷಯದ ಕುರಿತಾದ ಗದ್ದಲದಿಂದಾಗಿ ಸದನವನ್ನು ಎರಡು ಬಾರಿ ಮುಂದೂಡಲು ಕಾರಣವಾಯಿತು. ಸದನದ ಕಲಾಪ ಆರಂಭವಾದ ಕೂಡಲೇ, ಆಡಳಿತ ಮೈತ್ರಿಕೂಟದ ಸದಸ್ಯರು, ಅಜ್ಮಿ ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜರನ್ನು ಹಿಂಸಿಸಿ ಕ್ರೂರವಾಗಿ ಕೊಂದ ಔರಂಗಜೇಬನ ವಂಶಸ್ಥ ಎಂದು ಆರೋಪಿಸಿದ್ದಾರೆ.

ಅತುಲ್ ಭಟ್ಕಲ್ಕರ್ (ಬಿಜೆಪಿ) ಅವರು ಅಜ್ಮಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಜೆಟ್ ಅಧಿವೇಶನಕ್ಕೆ ವಿಧಾನಸಭೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು. ಶಿವಸೇನಾ ಸಚಿವ ಗುಲಾಬ್ರಾವ್ ಪಾಟೀಲ್ ಅವರು ಅಜ್ಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Abu Azmi
ಔರಂಗಜೇಬ್ ಕಾಲದಲ್ಲಿ ಭಾರತದ ನಕ್ಷೆ ಅಫ್ಘಾನ್, ಮ್ಯಾನ್ಮಾರ್ ವರೆಗೂ ವಿಸ್ತರಿಸಿತ್ತು: SP ಶಾಸಕ ಅಬು ಅಜ್ಮಿ ಹೇಳಿಕೆ, FIR

ಸುಧೀರ್ ಮುಂಗಂಟಿವಾರ್ (ಬಿಜೆಪಿ) ಔರಂಗಜೇಬನ ಸಮಾಧಿಯನ್ನು ಕೆಡವಬೇಕೆಂದು ಒತ್ತಾಯಿಸಿದ್ದಾರೆ. ಸದಸ್ಯರ ಗದ್ದಲದಿಂದಾಗಿ ಸ್ಪೀಕರ್ ರಾಹುಲ್ ನಾರ್ವೇಕರ್ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು. ನಂತರ, ಸದನ ಮತ್ತೆ ಸೇರಿದಾಗ, ಕೈಗಾರಿಕಾ ಸಚಿವ ಉದಯ್ ಸಮಂತ್ (ಶಿವಸೇನೆ) ಅವರು ಅಜ್ಮಿ ಅವರನ್ನು ಸದನದಿಂದ ಅಮಾನತುಗೊಳಿಸಿ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದರು.

"ಛತ್ರಪತಿ ಶಿವಾಜಿ ಮಹಾರಾಜರಿಗೆ ಕಿರುಕುಳ ನೀಡಿದ ಮತ್ತು ಅವರ ಮಗ ಛತ್ರಪತಿ ಸಂಭಾಜಿ ಮಹಾರಾಜರಿಗೆ ಹಿಂಸೆ ನೀಡಿದ ವ್ಯಕ್ತಿಯ ಹೊಗಳಿಕೆಯನ್ನು ನಾವು ಸಹಿಸುವುದಿಲ್ಲ" ಎಂದು ಅವರು ಹೇಳಿದರು. ಗದ್ದಲದ ನಡುವೆಯೇ, ಶಿವಸೇನೆ (ಯುಬಿಟಿ) ಸದಸ್ಯ ಭಾಸ್ಕರ್ ಜಾಧವ್ ಸದನದಲ್ಲಿ ನಡೆಯುತ್ತಿರುವುದನ್ನು "ನಾಟಕ" ಎಂದು ಬಣ್ಣಿಸಿದರು. ಗದ್ದಲದ ನಂತರ, ಸ್ಪೀಕರ್ ಮತ್ತೆ ಸದನವನ್ನು 30 ನಿಮಿಷಗಳ ಕಾಲ ಮುಂದೂಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com