Vantara ಉದ್ಘಾಟನೆ: ಒರಾಂಗುಟನ್ ಸಿಂಹದ ಮರಿಯೊಂದಿಗೆ PM Modi; Anant Ambani ಒಡೆತನದ ಪ್ರಾಣಿಗಳ ರಕ್ಷಣೆ ಪುನರ್ವಸತಿ ಕೇಂದ್ರದ ವಿಶೇಷತೆಗಳ ವಿಡಿಯೋ...

ಬಹ್ರೇನ್‌ನಲ್ಲಿ ಪ್ರಾಣಿ ಸಂಗ್ರಾಹಲಯದಲ್ಲಿ ಪ್ರಾಣಿಗಳನ್ನು ಸಾಕಲು ಸಾಧ್ಯವಾಗದೆ ಕೈಬಿಡಲಾಗಿತ್ತು. 200 ಪ್ರಾಣಿಗಳಿಗೆ ಜಾಮ್ ನಗರದಲ್ಲಿರುವ ವಂತಾರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
Modi at vantara
ವಂತಾರದಲ್ಲಿ ಮೋದಿonline desk
Updated on

ಜಾಮ್ ನಗರ್: ಮೂರು ದಿನಗಳ ಪ್ರವಾಸಕ್ಕಾಗಿ ಗುಜರಾತ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಮಾ.04 ರಂದು ಅನಂತ್ ಅಂಬಾನಿಯವರ ಪ್ರಾಣಿಗಳ ರಕ್ಷಣೆ, ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂತಾರಕ್ಕೆ ಭೇಟಿ ನೀಡಿ ಉದ್ಘಾಟಿಸಿದರು.

ನಂತ್ ಅಂಬಾನಿ ಒಡೆತನದ ವಂತಾರ ಪ್ರಾಣಿ ರಕ್ಷಣಾ ಕೇಂದ್ರವಾಗಿದ್ದು, ಅನಾಥ ಪ್ರಾಣಿಗಳನ್ನು ಪ್ರಾಣಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ರಿಲಯನ್ಸ್ ಫೌಂಡೇಶನ್ ವಂತರಾ ಎಂಬ ಸಮಗ್ರ ಯೋಜನೆಯನ್ನು ಪ್ರಾರಂಭಿಸಿದೆ.

ಬಹ್ರೇನ್‌ನಲ್ಲಿ ಪ್ರಾಣಿ ಸಂಗ್ರಾಹಲಯದಲ್ಲಿ ಪ್ರಾಣಿಗಳನ್ನು ಸಾಕಲು ಸಾಧ್ಯವಾಗದೆ ಕೈಬಿಡಲಾಗಿತ್ತು. 200 ಪ್ರಾಣಿಗಳಿಗೆ ಜಾಮ್ ನಗರದಲ್ಲಿರುವ ವಂತಾರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

ಪ್ರಧಾನಿ ಈ ಕೇಂದ್ರಕ್ಕೆ ಭೇಟಿ ನೀಡಿ ಸಮಯ ಕಳೆದಿದ್ದಾರೆ. ವಂತಾರದಲ್ಲಿ 2,000 ಕ್ಕೂ ಹೆಚ್ಚು ಪ್ರಭೇದಗಳ ಪ್ರಾಣಿಗಳಿದ್ದು, ರಕ್ಷಿಸಲಾಗಿದೆ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳು 1.5 ಲಕ್ಷ ಪ್ರಾಣಿಗಳಿಗೆ ಆಶ್ರಯ ಕಲ್ಪಿಸಲಾಗಿದೆ.

ಇದು ರಿಲಯನ್ಸ್ ಜಾಮ್‌ನಗರ ಸಂಸ್ಕರಣಾಗಾರ ಸಂಕೀರ್ಣದಲ್ಲಿ 3000 ಎಕರೆಗಳಷ್ಟು ವಿಸ್ತಾರವಾಗಿದ್ದು, ಅತ್ಯಾಧುನಿಕ ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾಗಿದೆ.

ಪ್ರಧಾನಿ ಮೋದಿ ಪುನರ್ವಸತಿ ಕಲ್ಪಿಸಲಾದ ವಿವಿಧ ಜಾತಿಯ ಪ್ರಾಣಿಗಳೊಂದಿಗೆ ನಿಕಟವಾಗಿ ಒಡನಾಡುತ್ತಿರುವ ಮತ್ತು ಸಮಯ ಕಳೆಯುತ್ತಿರುವುದನ್ನು ಕಾಣಬಹುದಾಗಿದೆ.

ಪ್ರಧಾನಿ ಮೋದಿ ಒರಾಂಗುಟನ್‌ಗಳು, ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ ಮತ್ತು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದವಾಗಿರುವ ಮೋಡದ ಚಿರತೆ ಮರಿ ಸೇರಿದಂತೆ ಇತರ ಪ್ರಾಣಿಗಳೊಂದಿಗೆ ಆಟವಾಡುವುದನ್ನು ಮತ್ತು ಆಹಾರ ನೀಡುವ ವಿಡಿಯೋ ವೈರಲ್ ಆಗತೊಡಗಿದೆ.

ಪ್ರಧಾನಿ ಮೋದಿ ಅವರು ವಂಟಾರಾದ ಕೇಂದ್ರದಲ್ಲಿ ವಿವಿಧ ಸೌಲಭ್ಯಗಳನ್ನು ಅನ್ವೇಷಿಸಿದರು. ಅವರು ವಂಟಾರಾದ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದರು ಮತ್ತು MRI, CT ಸ್ಕ್ಯಾನ್‌ಗಳು, ICU ಗಳು ಸೇರಿದಂತೆ ಇತರವುಗಳನ್ನು ಹೊಂದಿರುವ ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು ಮತ್ತು ವನ್ಯಜೀವಿ ಅರಿವಳಿಕೆ, ಹೃದ್ರೋಗ, ನೆಫ್ರಾಲಜಿ, ಎಂಡೋಸ್ಕೋಪಿ, ದಂತಚಿಕಿತ್ಸೆ, ಆಂತರಿಕ ಔಷಧ ಇತ್ಯಾದಿಗಳನ್ನು ಒಳಗೊಂಡ ಬಹು ವಿಭಾಗಗಳನ್ನು ಸಹ ವೀಕ್ಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com