
ನವದೆಹಲಿ: ಬಿಲಿಯನೇರ್ ಎಲೋನ್ ಮಸ್ಕ್-ಮಾಲೀಕತ್ವದ X ಸೇವೆಯಲ್ಲಿ ಸೋಮವಾರ ವ್ಯತ್ಯಯ ಕಂಡುಬಂದಿತು. ಜಾಗತಿಕವಾಗಿ ಸಹಸ್ರಾರು ಬಳಕೆದಾರರು ಈ ವ್ಯತ್ಯಯದಿಂದ ಪರದಾಡಿದ್ದಾರೆ.
Downdetector ಪ್ರಕಾರ, ಮಧ್ಯಾಹ್ನ 3:30 ರ ಸುಮಾರಿಗೆ ಭಾರತೀಯ ಬಳಕೆದಾರರಿಂದ ವ್ಯತ್ಯಯ ಬಗ್ಗೆ ಸುಮಾರು 2,200 ವರದಿಗಳು ಬಂದಿತ್ತು. ರಾತ್ರಿ 7-30ರ ಸುಮಾರಿಗೆ ಇಂತಹ1,500ವರದಿಗಳು ಬಂದಿದ್ದವು.
ಸ್ವಲ್ಪ ಸಮಯದ ನಂತರ ಸೇವೆಗಳು ಸಹಜ ಸ್ಥಿತಿಗೆ ಮರಳುತ್ತಿರುವಂತೆ ತೋರಿತ್ತು. ಆದರೆ, ಮತ್ತೆ ಸೇವೆಯಲ್ಲಿ ವ್ಯತ್ಯಯವಾಯಿತು. ಅಮೆರಿಕದಲ್ಲಿ 20,000 ಮತ್ತು ಯುಕೆಯಲ್ಲಿ 10, 000 ವರದಿಗಳೊಂದಿಗೆ ಇದರ ಪ್ರಭಾವ ಜಾಗತಿಕವಾಗಿಯೂ ಹೆಚ್ಚಾಗಿತ್ತು.
ಶೇ.53 ರಷ್ಟು ಸಮಸ್ಯೆಗಳು ವೆಬ್‌ಸೈಟ್‌ಗೆ ಸಂಬಂಧಿಸಿವೆ. ಶೇ. 41 ರಷ್ಟು APP ಗೆ ಮತ್ತು ಶೇ. 6 ರಷ್ಟು ಸರ್ವರ್ ಸಂಪರ್ಕ ಸಮಸ್ಯೆಗಳಿಗೆ ಸಂಬಂಧಿಸಿದೆ ಎಂದು Downdetector ತಿಳಿಸಿದೆ.
ಸೇವೆಯಲ್ಲಿ ವ್ಯತ್ಯಯವಾದ ಸಂದರ್ಭದಲ್ಲಿ ಬಳಕೆದಾರರಿಗೆ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ ಮತ್ತು 'ಏನೋ ತಪ್ಪಾಗಿದೆ, ಮರುಲೋಡ್ ಮಾಡಲು ಪ್ರಯತ್ನಿಸಿ' ಎಂಬ ಸಂದೇಶ ಕಾಣಿಸುತಿತ್ತು.
Advertisement