
ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಬಿಡುಗಡೆ ಮಾಡಬೇಕೆಂಬ ಕೂಗು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿರುವಾಗಲೇ ಇಸ್ಲಾಮ್ ಧರ್ಮದ ಮೌಲ್ವಿಯೊಬ್ಬರು ದೇವಾಲಯದ ಸಂಪತ್ತಿನ ಮೇಲೆ ಕಣ್ಣು ಹಾಕಿದ್ದಾರೆ.
ಮಜ್ಲಿಸ್ ಉಲೇಮಾ-ಎ-ಹಿಂದ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಇಸ್ಲಾಮಿಕ್ ಧರ್ಮಗುರು ಆಗಿರುವ ಮೌಲಾನ ಕಲ್ಬೆ ಜವಾದ್ ದೇವಾಲಯಗಳಲ್ಲಿರುವ ಸಂಪತ್ತು, ಚಿನ್ನದ ಬಗ್ಗೆ ಮಾತನಾಡಿದ್ದಾರೆ.
ರಾಷ್ಟ್ರೀಯ ಸುದ್ದಿ ವಾಹಿನಿ ರಿಪಬ್ಲಿಕ್ ವರದಿಯ ಪ್ರಕಾರ ಮಾಧ್ಯಮಗಳೆದುರು ಮಾತನಾಡಿರುವ ಮೌಲಾನ ಕಲ್ಬೆ ದೇವಾಲಯಗಳಲ್ಲಿ ಟನ್ ಗಟ್ಟಲೆ ಚಿನ್ನ ಇದೆ. ಅದನ್ನು ಹೊರತೆಗೆದು ಎಲ್ಲರಿಗೂ ಹಂಚಿ ಎಂದು ಹೇಳಿದ್ದಾರೆ. ಅಂಕಿ-ಅಂಶಗಳನ್ನೂ ಉಲ್ಲೇಖಿಸಿರುವ ಈ ಇಸ್ಲಾಮಿಕ್ ಧರ್ಮಗುರು, ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚಿನ ಹಿಂದೂ ದೇವಾಲಯಗಳಿವೆ, ಅದರಲ್ಲಿ ಸಾವಿರಾರು ಟನ್ ಚಿನ್ನ ಇದೆ. ಅದನ್ನು ಹೊರತೆಗೆದು ಸಾರ್ವಜನಿಕರಿಗೆ ಹಂಚಬೇಕು ಎಂದು ಹೇಳಿದ್ದಾರೆ.
ಈ ಸುದ್ದಿ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ವಿವಾದದ ಸ್ವರೂಪವನ್ನೂ ಪಡೆದುಕೊಳ್ಳುತಿದೆ. ಹಿಂದೂ ದೇವಾಲಯಗಳ ವಿಷಯದಲ್ಲಿ ಮಾತನಾಡುವುದಕ್ಕೆ ಉಲೇಮಾ ಹಿಂದ್ ಮೌಲ್ವಿ ಯಾರು ಎಂಬ ಪ್ರಶ್ನೆಯನ್ನೂ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಗಮನಿಸಿದ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
Advertisement