
ಬುಲ್ಧಾನಾ: 2020 ರಲ್ಲಿ ಮಹಾರಾಷ್ಟ್ರ ಸರ್ಕಾರದ 'ಯುವ ಶೇತ್ಕರಿ' ಪ್ರಶಸ್ತಿ ಪಡೆದಿದ್ದ ರೈತನೊಬ್ಬರು ಬೆಳೆ ನಷ್ಟ ಮತ್ತು ನೀರಾವರಿ ಸಮಸ್ಯೆಗಳಿಂದ ಬೇಸತ್ತು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಲ್ಧಾನಾ ಜಿಲ್ಲೆಯ ದೆಯುಲ್ಗಾಂವ್ರಾಜ ತಹಸಿಲ್‌ನ ಶಿವನಿ ಆರ್ಮಲ್ ಗ್ರಾಮದ ರೈತ ಕೈಲಾಶ್ ನಾಗ್ರೆ(42) ಅವರು ಇಂದು ಬೆಳಗ್ಗೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಧೇರಾ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.
"ನಾಲ್ಕು ಪುಟಗಳ ಆತ್ಮಹತ್ಯೆ ಪತ್ರ ಬರೆದಿರುವ ರೈತ, ಬೆಳೆ ನಷ್ಟ ಮತ್ತು ನೀರಾವರಿಗಾಗಿ ನೀರಿನ ಪೂರೈಕೆಯ ಕೊರತೆಯ ಬಗ್ಗೆ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರವು ಜಮೀನುಗಳಿಗೆ ನೀರು ಹರಿಸುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಬಯಸಿದ್ದರು. ಅವರ ಆತ್ಮಹತ್ಯೆ ಪತ್ರದಲ್ಲಿ ತಮ್ಮ ಸಾವಿಗೆ ಯಾರನ್ನೂ ದೂರಿಲ್ಲ. ನಾಗ್ರೆ ಅವರು 2020 ರಲ್ಲಿ ಯುವ ಶೇತ್ಕರಿ ಪ್ರಶಸ್ತಿ ಪಡೆದಿದ್ದರೆ" ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement