
ಲಖನೌ: ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅಥವಾ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸುತ್ತಿರುವ ಶಂಕೆಯ ಮೇಲೆ ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಗಂಗಾಯಣ ಬಾಹ್ಯಾಕಾಶ ಯೋಜನೆ ಮತ್ತು ಮಿಲಿಟರಿ ಲಾಜಿಸ್ಟಿಕ್ಸ್-ವಿತರಣಾ ಡ್ರೋನ್‌ಗೆ ಸಂಬಂಧಿಸಿದ ಮಾಹಿತಿ ಸೇರಿದಂತೆ ಗೌಪ್ಯ ಡೇಟಾವನ್ನು ಹಂಚಿಕೊಂಡ ರವೀಂದ್ರ ಕುಮಾರ್ ನನ್ನು ಬಂಧಿಸಲಾಗಿದೆ ಎಂದು ಯುಪಿ ಎಟಿಎಸ್ ಮುಖ್ಯಸ್ಥ ನೀಲಬ್ಜಾ ಚೌಧರಿ ಶುಕ್ರವಾರ ತಿಳಿಸಿದ್ದಾರೆ.
ರವೀಂದ್ರ ಕುಮಾರ್ ಅವರ ಸಹಚರನನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರವೀಂದ್ರ ಕುಮಾರ್, ಐಎಸ್‌ಐಗಾಗಿ ಕೆಲಸ ಮಾಡುತ್ತಿರುವ ನೇಹಾ ಶರ್ಮಾ ಎಂಬ ಕೋಡ್ ನೇಮ್‌ಗೆ ಡೇಟಾವನ್ನು ಸೋರಿಕೆ ಮಾಡಿದ್ದಾರೆ ಎಂದು ಯುಪಿ ಎಟಿಎಸ್ ಮುಖ್ಯಸ್ಥರು ತಿಳಿಸಿದ್ದಾರೆ.
ರವೀಂದ್ರ ಕುಮಾರ್ ಫಿರೋಜಾಬಾದ್‌ನ ಹಜ್ರತ್‌ಪುರ್‌ನಲ್ಲಿರುವ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಚಾರ್ಜ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಈ ಫ್ಯಾಕ್ಟರಿಯು ಭಾರತೀಯ ಸೇನೆಗೆ ಡ್ರೋನ್‌ಗಳು, ಪ್ಯಾರಾಚೂಟ್‌ಗಳು ಮತ್ತು ಇತರ ಪ್ರಮುಖ ಸಾಮಗ್ರಿಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊಂದಿದೆ. ರವೀಂದ್ರ ಕುಮಾರ್‌ಗೆ ಈ ಸಂಸ್ಥೆಯಲ್ಲಿ ಸೂಕ್ಷ್ಮ ದಾಖಲೆಗಳಿಗೆ ಪ್ರವೇಶವಿತ್ತು.
ತನಿಖೆಯ ಪ್ರಕಾರ, ಬಂಧಿತ ಆರೋಪಿ, ಫೇಸ್‌ಬುಕ್ ಮೂಲಕ "ನೇಹಾ ಶರ್ಮಾ" ಎಂಬ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾನೆ. ಈ ಸಂಪರ್ಕವು 2024ರಲ್ಲಿ ಆರಂಭವಾಗಿದ್ದು, ಬಳಿಕ ಇದು ಒಂದು "ಹನಿ ಟ್ರ್ಯಾಪ್" (Honey Trap) ಆಗಿ ಪರಿಣಮಿಸಿದೆ. "ನೇಹಾ ಶರ್ಮಾ" ಎಂಬುವವಳು ಪಾಕಿಸ್ತಾನದ ಐಎಸ್‌ಐಗೆ ಕೆಲಸ ಮಾಡುತ್ತಿದ್ದ ಏಜೆಂಟ್ ಎಂದು ತಿಳಿದುಬಂದಿದೆ.
Advertisement