ಪ್ರಧಾನಿ, ಸಚಿವರು ಮಾತ್ರ ಮಾತನಾಡಿದರೆ ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ: ಗೊಗೋಯ್

"ಇಂದು ವಿಪಕ್ಷಗಳಿಗೆ ಕುಂಭದ ಕುರಿತು ಮಾತನಾಡಲು ಅವಕಾಶ ನೀಡಿದ್ದರೆ ಸಂಸತ್ತನ್ನು ಮುಂದೂಡಲಾಗುತ್ತಿರಲಿಲ್ಲ. ಆದರೆ ಕಲಾಪ ಮುಂದೂಡಿಕೆಗೆ ಸರ್ಕಾರ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಅಚಲವಾಗಿದ್ದರು
Congress leader Gaurav Gogoi
ಗೌರವ್ ಗೊಗೋಯ್
Updated on

ನವದೆಹಲಿ: ಸಂಸತ್ತು ಭಾರತದ ಜನತೆಗೆ ಸೇರಿದ್ದು, ಎಲ್ಲಾ ಪಕ್ಷಗಳು ತಮ್ಮ ಅಭಿಪ್ರಾಯವನ್ನು ಹೇಳಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್ ಅವರು ಮಂಗಳವಾರ ಹೇಳಿದ್ದಾರೆ. ಪ್ರಧಾನಿ, ಸಚಿವರು ಮಾತ್ರ ಮಾತನಾಡಿದರೆ ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದಿದ್ದಾರೆ.

ಮಹಾಕುಂಭದ ಕುರಿತು ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಿದ್ದರೆ, ಕೆಳಮನೆಯನ್ನು ಮುಂದೂಡುತ್ತಿರಲಿಲ್ಲ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್‌ನ ಉಪನಾಯಕ ಹೇಳಿದ್ದಾರೆ. ಮಹಾಕುಂಭದ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ಕುರಿತು ಪ್ರಶ್ನೆ ಕೇಳಲು ಪ್ರತಿಪಕ್ಷಗಳ ಸದಸ್ಯರು ಗದ್ದಲ, ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಿದ ನಂತರ ಗೊಗೊಯ್ ಈ ಹೇಳಿಕೆ ನೀಡಿದ್ದಾರೆ.

"ಇಂದು ವಿಪಕ್ಷಗಳಿಗೆ ಕುಂಭದ ಕುರಿತು ಮಾತನಾಡಲು ಅವಕಾಶ ನೀಡಿದ್ದರೆ ಸಂಸತ್ತನ್ನು ಮುಂದೂಡಲಾಗುತ್ತಿರಲಿಲ್ಲ. ಆದರೆ ಕಲಾಪ ಮುಂದೂಡಿಕೆಗೆ ಸರ್ಕಾರ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಅಚಲವಾಗಿದ್ದರು ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Congress leader Gaurav Gogoi
ನವ ಭಾರತದಲ್ಲಿ ಲೋಕಸಭೆ ವಿಪಕ್ಷ ನಾಯಕನಿಗೆ ಮಾತನಾಡಲು ಅವಕಾಶವೇ ಇಲ್ಲ: ರಾಹುಲ್ ಗಾಂಧಿ

ಪ್ರಧಾನಿ, ಸಚಿವರು ಮಾತ್ರ ಮಾತನಾಡಿದರೆ ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸಂಸತ್ ದೇಶದ ಜನತೆಗೆ ಸೇರಿದ್ದು, ಎಲ್ಲಾ ಪಕ್ಷಗಳು ಮಾತನಾಡಲು ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ. ಇದು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಸದ್ದಡಗಿಸಿದ ಮತ್ತೊಂದು ದಿನವಾಗಿದೆ. ನಮ್ಮ ಗಂಗಾ ಮಾತೆ ಬಗ್ಗೆ ಮಾತನಾಡದಂತೆ ಧ್ವನಿ ಅಡಗಿಸಲಾಗಿದೆ. ಭಾರತದ ಶ್ರೀಮಂತ ನಾಗರಿಕತೆ, ಸಂಸ್ಕೃತಿ ಬಗ್ಗೆ ಮಾತನಾಡದಂತೆ ತಡೆಯಲಾಗಿದೆ. ಕುಂಭಮೇಳದ ವೇಳೆ ಕಾಲ್ತುಳಿತದಲ್ಲಿ ಮಡಿದವರನ್ನೆಲ್ಲ ಸ್ಮರಿಸದೆ ಮೌನವಾಗಿರಿಸಲಾಗಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಕುಂಭ ಮೇಳಕ್ಕೆ ಹೋಗಿದ್ದ ಲಕ್ಷಾಂತರ ಯುವಕರ ಉದ್ಯೋಗಕ್ಕೆ ನೀಡಿಕೆ ಅಗತ್ಯದ ಬಗ್ಗೆ ಮಾತನಾಡದಂತೆ ಮಾಡಲಾಗಿದೆ. ತದನಂತರ ಪ್ರಧಾನಿ ಮೋದಿ ಪಾಡ್ ಕಾಸ್ಟ್ ಗೆ ಹೋಗಿ ಪ್ರಜಾಪ್ರಭುತ್ವದ ಆತ್ಮದ ಮೇಲೆ ತಿಳುವಳಿಕೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಸಂಸತ್ತಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಗ್ಗೆ ಚರ್ಚೆಗೆ ಪ್ರಯತ್ನಿಸುತ್ತಿದೆ. ಬಜೆಟ್ ಅಧಿವೇಶನದ ವೇಳೆ ವಿದೇಶಾಂಗ ವ್ಯವಹಾರಗಳಿಗೆ ಅನುದಾನದ ಬೇಡಿಕೆಯ ಚರ್ಚೆ ಸೂಕ್ತ ವೇದಿಕೆಯಾಗಿದೆ. ಪ್ರಧಾನಿ ಮೋದಿ ಸರ್ಕಾರ ಈ ಸಚಿವಾಲಯದ ಬಗ್ಗೆ ಎಷ್ಟು ಬಾರಿ ಚರ್ಚಿಸಿದೆ? ಎಂಬುದಕ್ಕೆ ಶೂನ್ಯ ಉತ್ತರವಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಏಕೆ ಹೆದರುತ್ತಿದೆ?" ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com