ಸುಧಾ ಮೂರ್ತಿ
ದೇಶ
ಪ್ರತಿಯೊಂದು ಹಬ್ಬವನ್ನು ಸಂಭ್ರಮಿಸಬೇಕು: ಇಫ್ತಾರ್ ಕೂಟದಲ್ಲಿ ಸುಧಾ ಮೂರ್ತಿ ಭಾಗಿ
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರು ಸಹ ಐಯುಎಂಎಲ್ ಆಯೋಜಿಸಿದ್ದ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.
ನವದೆಹಲಿ: ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಸಹ ಸಂಸ್ಥಾಪಕಿ ಸುಧಾ ಮೂರ್ತಿ ಅವರು ಗುರುವಾರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಸುಧಾ ಮೂರ್ತಿ, "ನಾನು ದೇಶದ ಜನರಿಗೆ ತುಂಬಾ ಸಂತೋಷದ, ಶಾಂತಿಯುತ ರಂಜಾನ್ ಶುಭಾಶಯ ಕೋರುತ್ತೇನೆ. ನಾವೆಲ್ಲರೂ ಪ್ರತಿಯೊಂದು ಹಬ್ಬವನ್ನು ಸಂಭ್ರಮಿಸಬೇಕು..." ಎಂದು ಹೇಳಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರು ಸಹ ಐಯುಎಂಎಲ್ ಆಯೋಜಿಸಿದ್ದ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.