ಕೊಚ್ಚಿ: ಬಂದೂಕಿನ ಬುಲೆಟ್ ಗಳನ್ನು ಬಾಣಲೆಗೆ ಹಾಕಿ ಹುರಿದ PSI; ನಂತರ ಆಗಿದ್ದೇನು?

ಮೃತ ಪೊಲೀಸ್ ಸಿಬ್ಬಂದಿಯ ಅಂತ್ಯಕ್ರಿಯೆ ಇತ್ತು. ಅದಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಗಿತ್ತು. ಅಧಿಕಾರಿ ಸಿವಿ ಸಜೀವ್ ಅಂತ್ಯಕ್ರಿಯೆ ಸಮಾರಂಭಕ್ಕಾಗಿ ಬಂದೂಕಿನ ಗುಂಡುಗಳನ್ನು ಸಿದ್ಧಪಡಿಸುತ್ತಿದ್ದರು.
Representational image
ಸಾಂದರ್ಭಿಕ ಚಿತ್ರ
Updated on

ಕೊಚ್ಚಿ: ಕೊಚ್ಚಿ ನಗರ ಪೊಲೀಸ್ ಸಶಸ್ತ್ರ ಮೀಸಲು ಪಡೆ (ಎಆರ್) ಶಿಬಿರದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಬಂದೂಕಿನ ಬುಲೆಟ್ ಗಳನ್ನು ಬಾಣಲೆಗೆ ಹಾಕಿ ಹುರಿದಿರುವ ವಿಲಕ್ಷಣ ಘಟನೆ ನಡೆದಿದೆ, ಅದೃಷ್ಟ ವಶಾತ್ ಯಾವುದೇ ರೀತಿಯ ಅಪಾಯವಾಗಿಲ್ಲ.

ಮಾರ್ಚ್ 10 ರಂದು ಮೃತ ಪೊಲೀಸ್ ಸಿಬ್ಬಂದಿಯ ಅಂತ್ಯಕ್ರಿಯೆ ಇತ್ತು. ಅದಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಗಿತ್ತು. ಅಧಿಕಾರಿ ಸಿವಿ ಸಜೀವ್ ಅಂತ್ಯಕ್ರಿಯೆ ಸಮಾರಂಭಕ್ಕಾಗಿ ಬಂದೂಕಿನ ಗುಂಡುಗಳನ್ನು ಸಿದ್ಧಪಡಿಸುತ್ತಿದ್ದರು. ಗನ್‌ಪೌಡರ್ ಹೊಂದಿರುವ ಆದರೆ ಯಾವುದೇ ಸ್ಪೋಟಕವಿಲ್ಲದ ಖಾಲಿ ಗುಂಡುಗಳನ್ನು ಗೌರವ ಸೇವೆಗಳಲ್ಲಿ ಬಳಸಲಾಗುತ್ತದೆ.

ಮದ್ದುಗುಂಡು ಘಟಕದ ಉಸ್ತುವಾರಿ ವಹಿಸಿದ್ದ ಸಜೀವ್, ಶಿಬಿರದ ಶಸ್ತ್ರಾಗಾರದಲ್ಲಿ ಸಂಗ್ರಹಿಸಲಾದ ಖಾಲಿ ಗುಂಡುಗಳು ತುಕ್ಕು ಹಿಡಿದಿರುವುದನ್ನು ಗಮನಿಸಿದ್ದಾರೆ. ಸಾಮಾನ್ಯವಾಗಿ, ಅಂತಹ ಗುಂಡುಗಳನ್ನು ಬಳಕ್ಗೆ ಯೋಗ್ಯವಾಗಿಸಲು ಸೂರ್ಯನ ಬೆಳಕಿನಲ್ಲಿ ಒಣಗಿಸಲಾಗುತ್ತದೆ. ಆದರೆ ಕಡಿಮೆ ಸಮಯದ ಕಾರಣ, ಶಿಬಿರದ ಅಡುಗೆಮನೆಯಲ್ಲಿರುವ ಬಾಣಲೆಯಲ್ಲಿ ಅವುಗಳನ್ನು ಬಿಸಿ ಮಾಡಲು ನಿರ್ಧರಿಸಿದರು. ಹೀಗೆ ಮಾಡುವಾಗ, ಎರಡು ಗುಂಡುಗಳು ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡವು. ಇದರಿಂದ ಎಲ್ಲರೂ ಭಯಭೀತರಾಗಿದ್ದರು.

ಖಾಲಿ ಗುಂಡುಗಳ ಒಳಗೆ ಇದ್ದ ಗನ್‌ಪೌಡರ್ ಸ್ಫೋಟಕ್ಕೆ ಕಾರಣವಾಗಬಹುದು ಎಂಬುದನ್ನು ಅಧಿಕಾರಿ ಸಂಪೂರ್ಣವಾಗಿ ಮರೆತಿದ್ದಾರೆ. ಅದೃಷ್ಟವಶಾತ್, ಅಡುಗೆಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳು ಇರಲಿಲ್ಲ. ಒಂದು ವೇಳೆ ಅಲ್ಲಿ ಸಿಲಿಂಡರ್ ಇದ್ದಿದ್ದರೇ ದೊಡ್ಡ ದುರಂತ ಸಂಭವಿಸುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ನಂತರ, ಕೊಚ್ಚಿ ನಗರ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಅವರು ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಎಆರ್ ಶಿಬಿರದ ಕಮಾಂಡೆಂಟ್‌ಗೆ ವರದಿ ಸಲ್ಲಿಸಲು ತಿಳಿಸಲಾಗಿದ್ದು, ತನಿಖೆ ನಂತರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Representational image
Video: ಬರ್ತ್ ಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು, ಬೆಂಗಳೂರು CCB ಪೊಲೀಸರಿಂದ ಉದ್ಯಮಿ ಬಂಧನ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com