ಸಿಖ್ಖರ ನಾಡಿನಲ್ಲಿ ಅವ್ಯಾಹತ ಮತಾಂತರ, ಮಹಿಳೆಗೆ ಥಳಿಸುತ್ತಿರುವ ಪಾದ್ರಿ ಬಜಿಂದರ್ ಸಿಂಗ್ ವಿಡಿಯೋ ವೈರಲ್!

ಜಲಂಧರ್ ಮೂಲದ ಸಿಂಗ್ 'ದಿ ಚರ್ಚ್ ಆಫ್ ಗ್ಲೋರಿ& ವಿಸ್ಡಮ್' ನ್ನು ಮುನ್ನಡೆಸುತ್ತಿದ್ದಾರೆ ಮತ್ತು ತಮ್ಮನ್ನು "ಪ್ರವಾದಿ ಬಜಿಂದರ್" ಎಂದು ಕರೆದುಕೊಳ್ಳುತ್ತಾರೆ.
Self-styled pastor Bajinder Singh is seen throwing objects and slapping a man and a woman
ಪಂಜಾಬ್ ಪಾದ್ರಿಯಿಂದ ಮಹಿಳೆ ಮೇಲೆ ಹಲ್ಲೆ online desk
Updated on

ಪಂಜಾಬ್: ಪಂಜಾಬ್ ಪೊಲೀಸರು ಸ್ವಯಂ ಘೋಷಿತ ಪಾದ್ರಿ ಬಜಿಂದರ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ವಾರಗಳ ನಂತರ, ಆತ ತನ್ನ ಕಚೇರಿಯಲ್ಲಿ ಪುರುಷ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ಮನಕಲಕುವ ವೀಡಿಯೊ ವೈರಲ್ ಆಗತೊಡಗಿದೆ.

ಜಲಂಧರ್ ಮೂಲದ ಸಿಂಗ್ 'ದಿ ಚರ್ಚ್ ಆಫ್ ಗ್ಲೋರಿ& ವಿಸ್ಡಮ್' ನ್ನು ಮುನ್ನಡೆಸುತ್ತಿದ್ದಾರೆ ಮತ್ತು ತಮ್ಮನ್ನು "ಪ್ರವಾದಿ ಬಜಿಂದರ್" ಎಂದು ಕರೆದುಕೊಳ್ಳುತ್ತಾರೆ.

ಕಳೆದ ತಿಂಗಳಿನ ಸಿಸಿಟಿವಿ ದೃಶ್ಯಾವಳಿಗಳು ಈಗ ವೈರಲ್ ಆಗಿದ್ದು, ಸಿಂಗ್ ತಮ್ಮ ಕಚೇರಿಯಲ್ಲಿ ವಸ್ತುಗಳನ್ನು ಎಸೆದು ಜನರನ್ನು ಕಪಾಳಮೋಕ್ಷ ಮಾಡುತ್ತಿರುವುದನ್ನು ತೋರಿಸುತ್ತವೆ. ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸಿಂಗ್ ಅವರ ಸಿಬ್ಬಂದಿಯ ಭಾಗವೆಂದು ಹೇಳಿಕೊಳ್ಳುತ್ತವೆ. ಮೊದಲಿಗೆ, ಅವರು ಪದೇ ಪದೇ ಒಬ್ಬ ವ್ಯಕ್ತಿಯನ್ನು ಕಪಾಳಮೋಕ್ಷ ಮಾಡುತ್ತಾರೆ. ನಂತರ ಅವರು ಒಬ್ಬ ಮಹಿಳೆಯೊಂದಿಗೆ ಜಗಳವಾಡಲು ಪ್ರಾರಂಭಿಸುತ್ತಾರೆ ಮತ್ತು ತುಂಬಾ ಉದ್ರೇಕಗೊಂಡಂತೆ ಕಾಣುತ್ತಾರೆ. ಇದ್ದಕ್ಕಿದ್ದಂತೆ, ಅವರು ಪುಸ್ತಕದಂತೆ ಕಾಣುವದನ್ನು ಅವಳ ಮೇಲೆ ಎಸೆಯುತ್ತಾರೆ. ಆಕೆ ಆತನನ್ನು ಎದುರಿಸಿದಾಗ, ಸಿಂಗ್ ಕಪಾಳಮೋಕ್ಷ ಮಾಡುತ್ತಾನೆಈ ವೇಳೆ ಕೋಣೆಯಲ್ಲಿರುವ ಇತರರು ಮಧ್ಯಪ್ರವೇಶಿಸಿ ಅವನನ್ನು ತಡೆಯಲು ಪ್ರಯತ್ನಿಸುತ್ತಾರೆ.

ಇದಕ್ಕೂ ಮೊದಲು, ಸ್ವಯಂ ಘೋಷಿತ ದೇವಮಾನವ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. 2017 ರಲ್ಲಿ ಸಿಂಗ್ ಅವರ ಚರ್ಚ್‌ಗೆ ಸೇರಿದ್ದ ಆ ಮಹಿಳೆ 2023 ರಲ್ಲಿ ಅಲ್ಲಿಂದ ಹೊರಟುಹೋದರು ಎಂದು ತಿಳಿದುಬಂದಿದೆ. 2022 ರಲ್ಲಿ, ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

"ನಾನು ಕಾಲೇಜಿಗೆ ಹೋದಾಗ ಅವರು ನನ್ನ ಹಿಂದೆ ಕಾರುಗಳನ್ನು ಕಳುಹಿಸುತ್ತಿದ್ದರು, ಅದು ಮನೆಯವರೆಗೂ ನನ್ನನ್ನು ಹಿಂಬಾಲಿಸುತ್ತಿತ್ತು. ನನ್ನ ತಂದೆ ಎಂದಿಗೂ ಮನೆಗೆ ಹಿಂತಿರುಗಬಾರದು ಮತ್ತು ನನ್ನ ತಾಯಿ ಚರ್ಚ್ ನಿಂದ ಜೀವಂತವಾಗಿ ಹೊರಬರಬಾರದು ಎಂದು ಬಯಸುತ್ತೀಯಾ? ಎಂದು ಅವರು ನನಗೆ ಬೆದರಿಕೆ ಹಾಕಿದ್ದರು. ನಾನು ಖಿನ್ನತೆಗೆ ಒಳಗಾಗಿದ್ದೆ ಮತ್ತು ಆ ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಮಹಿಳೆ ಮೊಹಾಲಿಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ. ಸಿಂಗ್ ಅಫೀಮು ವ್ಯಾಪಾರ ಮತ್ತು ಮಹಿಳೆಯರ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. "ಅವರು ಮಹಿಳೆಯರೊಂದಿಗೆ ತಪ್ಪು ಕೃತ್ಯಗಳನ್ನು ಎಸಗುತ್ತಾರೆ ಮತ್ತು ಮಾತನಾಡುವವರನ್ನು ಕೊಲ್ಲಲಾಗುತ್ತದೆ ಅಥವಾ ಬೆದರಿಸಲಾಗುತ್ತದೆ" ಎಂದು ಅವರು ಆರೋಪಿಸಿದ್ದಾರೆ.

ಸಹಾಯಕ ಪೊಲೀಸ್ ಆಯುಕ್ತ ಬಬನ್‌ದೀಪ್ ಸಿಂಗ್ ಮಾತನಾಡಿ ಆರೋಪಿ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ, ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಸಿಂಗ್ ಅವರನ್ನು ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಒತ್ತಾಯಿಸಿದೆ.

ಸಿಂಗ್ ಆರೋಪಗಳನ್ನು ತಳ್ಳಿಹಾಕಿದ್ದಾರೆ. "ನಾನು ಚಿಕ್ಕ ಮಕ್ಕಳ ತಂದೆ, ನಾನು ಎಂದಿಗೂ ಅಂತಹ ತಪ್ಪು ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ. ತನಗೆ ಅನ್ಯಾಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ತಪ್ಪು ಕಾರಣಗಳಿಗಾಗಿ ಸಿಂಗ್ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, 2018 ರಲ್ಲಿ, ಪಂಜಾಬ್‌ನ ಜಿರಾಕ್‌ಪುರದ ಮಹಿಳೆಯೊಬ್ಬರು ಸಿಂಗ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 2022 ರಲ್ಲಿ, ದೆಹಲಿಯ ಕುಟುಂಬವೊಂದು ಸಿಂಗ್ ತಮ್ಮ ಮಗಳ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿ ಅವರಿಂದ ಹಣ ಪಡೆದಿದ್ದರು ಎಂದು ಆರೋಪಿಸಿತು. ಆ ಬಳಿಕ ಅವರ ಮಗಳು ನಂತರ ನಿಧನರಾದರು. 2023 ರಲ್ಲಿ ಆದಾಯ ತೆರಿಗೆ ಇಲಾಖೆಯ ತಂಡ ಅವರ ಮನೆಯ ಮೇಲೆ ದಾಳಿ ನಡೆಸಿತ್ತು.

ಹರಿಯಾಣದಲ್ಲಿ ಜಾಟ್ ಕುಟುಂಬದಲ್ಲಿ ಜನಿಸಿದ ಸಿಂಗ್, 10 ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಜಲಂಧರ್ ಮತ್ತು ಮೊಹಾಲಿಯಲ್ಲಿ ಚರ್ಚ್‌ಗಳನ್ನು ನಡೆಸುತ್ತಿದ್ದಾರೆ. ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಅನುಯಾಯಿಗಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು ಸ್ವಯಂ ಘೋಷಿತ ಪಾದ್ರಿಗೆ ಹೆಚ್ಚಿನ ಸಂಕಷ್ಟ ತರುವ ಸಾಧ್ಯತೆಯಿದೆ ಮತ್ತು ಹೊಸ ದೂರು ಬಂದರೆ ತನಿಖೆಯನ್ನು ವಿಸ್ತರಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com