
ಚಂಡೀಗಢ: ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಬಾಡಿಗೆದಾರನನ್ನು 7 ಅಡಿ ಆಳದ ಗುಂಡಿಯಲ್ಲಿ ಜೀವಂತ ಸಮಾಧಿ ಮಾಡಿರುವ ಘಟನೆ ಹರ್ಯಾಣದ ರೋಹ್ಟಕ್ನಲ್ಲಿ ನಡೆದಿದೆ.
ರೋಹ್ಟಕ್‌ನ ಬಾಬಾ ಮಸ್ತ್‌ನಾಥ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿರುವ ಜಗದೀಪ್ (45) ಮೂರು ವರ್ಷಗಳಿಂದ ಜನತಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪೊಲೀಸರ ಪ್ರಕಾರ, ಪ್ರಮುಖ ಆರೋಪಿ ರಾಜ್‌ಕರನ್ (40) ಜಗದೀಪ್ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಿದ್ದಾನೆ.
ಜಗದೀಪ್ ಫೋನ್‌ನಲ್ಲಿ ತನ್ನ ಪತ್ನಿಯ ಫೋಟೋ ಕಂಡುಬಂದಾಗ, ಆತನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲು ಜಗದೀಪ್ನನ್ನು ಸ್ನೇಹಿತರ ಸಹಾಯದಿಂದ ಅಪಹರಿಸಿದ್ದ, ನಂತರ ಹೊಲದಲ್ಲಿ 7 ಅಡಿ ಆಳದ ಗುಂಡಿ ತೋಡಿ ಜೀವಂತವಾಗಿ ಹೂತು ಹಾಕಿದ್ದ. ಕಳೆದ ವರ್ಷ ಡಿಸೆಂಬರ್ನಲ್ಲಿ ಯೋಗ ಶಿಕ್ಷಕರನ್ನು ಕೊಲೆ ಮಾಡಲಾಗಿತ್ತು.
ಆದರೆ ಸುದೀರ್ಘ ತನಿಖೆ ನಂತರ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ. ಯೋಗ ಶಿಕ್ಷಕರ ಮೃತದೇಹವನ್ನು ಸೋಮವಾರ ಹೊಲದಿಂದ ವಶಪಡಿಸಿಕೊಳ್ಳಲಾಗಿದೆ. ಹೊಲದಲ್ಲಿ ಗುಂಡಿ ತೋಡಿ ಶಿಕ್ಷನನ್ನು ಜೀವಂತ ಸಮಾಧಿ ಮಾಡಿದ್ದ, ಆದರೆ ಕೊಳವೆ ಬಾವಿಗಾಗಿ ಗುಂಡಿ ತೋಡಲಾಗಿದೆ ಎಂದು ಸಬೂಬು ಹೇಳಿದ್ದ.
ಡಿಸೆಂಬರ್ 24 ರಂದು, ಹರ್ದೀಪ್ ಮತ್ತು ಅವನ ಕೆಲವು ಸ್ನೇಹಿತರು ಜಗದೀಪ್ ನನ್ನು ಅಪಹರಿಸಿ, ಕೈಕಾಲುಗಳನ್ನು ಕಟ್ಟಿ, ಚಾರ್ಕಿ ದಾದ್ರಿಯಲ್ಲಿರುವ ಗುಂಡಿ ಬಳಿ ಕರೆದೊಯ್ದು ಥಳಿಸಿದ್ದಾರೆ. ಜಮೀನಿನ ಬಳಿ ಹೋಗಿ ಜೀವಂತವಾಗಿ ಹೂತುಹಾಕಿ ಗುಂಡಿಯನ್ನು ಮಣ್ಣಿನಿಂದ ಮುಚ್ಚಿದ್ದಾರೆ. ಕೊಲೆಯಾದ 10 ದಿನಗಳ ನಂತರ ಜನವರಿ 3 ರಂದು, ಶಿವಾಜಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಜಗದೀಪ್ ನಾಪತ್ತೆ ದೂರು ದಾಖಲಾಗಿತ್ತು.
ಸ್ವಲ್ಪ ಸಮಯದ ಹಿಂದೆ ಜಗದೀಪ್ ಅವರ ಕರೆ ದಾಖಲೆಗಳನ್ನು ಪರಿಶೀಲಿಸುವವರೆಗೂ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಇದಾದ ನಂತರ, ಹರ್ದೀಪ್ ಮತ್ತು ಅವನ ಸ್ನೇಹಿತ ಧರ್ಮಪಾಲ್ ರನ್ನು ಬಂಧಿಸಲು ಸಾಕಷ್ಟು ಪುರಾವೆಗಳು ದೊರೆತವು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದ ನಂತರ, ಪೊಲೀಸ್ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯ ಸಮಯದಲ್ಲಿ, ಇಬ್ಬರೂ ಕೊಲೆಯ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದರು.
Advertisement