

ಲಖನೌ: ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಸಹೋದರಿ ಮತ್ತು ಆಕೆಯ ಪತಿಯ ಕುಟುಂಬ ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ನೀಡುವ ಮನ್ರೇಗಾ (MGNREGA) ಯೋಜನೆಯಡಿ ಕೂಲಿ ಪಡೆದು ವಂಚನೆ ಎಸಗಿರುವ ಆರೋಪ ಎದುರಿಸುತ್ತಿದೆ.
ಶಮಿಯ ಸಹೋದರಿ ಶಬೀನಾ ಅವರು 2021 ರಿಂದ 2024 ರ ವರೆಗೆ ಮನ್ರೇಗಾ ಯೋಜನೆಯಡಿ ಕಾರ್ಮಿಕರಾಗಿ ನೋಂದಾಯಿಸಿಕೊಂಡಿದ್ದು ಹಣ ಪಡೆದಿರುವುದನ್ನು ತೋರಿಸುವ ದಾಖಲೆಗಳಿವೆ. ಶಬೀನಾ ಮಾತ್ರವಲ್ಲದೆ ಅವರ ಪತಿ ಘಜ್ನವಿ ಮತ್ತು ಅವರ ಇಬ್ಬರು ಕಿರಿಯ ಸಹೋದರರಾದ ಅಮೀರ್ ಸುಹೇಲ್, ಶೇಖು ಹೆಸರು ಕೂಡಾ ಅಮ್ರೋಹಾ ಜಿಲ್ಲೆ ಪಲೋಲಾ ಹಳ್ಳಿಯಲ್ಲಿ ಮನ್ರೇಗಾ ಯೋಜನೆಯ ಕೂಲಿ ಕಾರ್ಮಿಕರ ಪಟ್ಟಿಯಲ್ಲಿದೆ. ಅಮೀರ್ ಸುಹೇಲ್ MBBS ಮಾಡುತ್ತಿದ್ದರೆ, ಶೇಖು ವಕೀಲರಾಗಿದ್ದಾರೆ.
ಶಬೀನಾ ಅವರ ಅತ್ತೆ ಗುಲ್ ಆಯಿಷಾ ಪಾಲೋವಾಲಾ ಗ್ರಾಮದ ಮುಖಂಡರಾಗಿದ್ದಾರೆ. ಈ ಹಿಂದೆ ಈಗ ದೆಹಲಿಯಲ್ಲಿ ಚೇತರಿಸಿಕೊಳ್ಳುತ್ತಿರುವ ಶಬಿನ್ ಅವರ ಮಾವ ಶಕೀಲ್ ಕೂಡಾ ಸತತ ನಾಲ್ಕು ಅವಧಿಗೆ ಪಲೋಲಾ ಗ್ರಾಮದ ಮುಖ್ಯಸ್ಥರಾಗಿದ್ದರು. ಶಬೀನಾ, ಘಜ್ನವಿ, ಅಮೀರ್ ಸುಹೇಲ್ ಮತ್ತು ಶೇಖು ಎಂಬ ಹೆಸರಿನ ಎಲ್ಲಾ ನಾಲ್ಕು ಜಾಬ್ ಕಾರ್ಡ್‌ಗಳನ್ನು ಜನವರಿ 2021 ರಲ್ಲಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಆಗಸ್ಟ್ 2024 ರವರೆಗೆ ಶಬೀನಾ ಬ್ಯಾಂಕ್ ಖಾತೆಗೆ MNREGA ಕೂಲಿ ರೂ. 71,013, ಘಜ್ನವಿ ಖಾತೆಗೆ ರೂ. 65 ಸಾವಿರ ರೂ., ಅಮೀರ್ ಸುಹೇಲ್ ಖಾತೆಗೆ 63,851 ರೂ., ವಕೀಲ ಶೇಖು ಅವರ ಖಾತೆಗೆ 67 ಸಾವಿರ ರೂ. ವರ್ಗಾವಣೆಯಾಗಿದೆ.
ವಂಚನೆಯು ಆಗಸ್ಟ್ 2024 ರಲ್ಲಿ ಬೆಳಕಿಗೆ ಬಂದಿದ್ದು, ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಜೇಂದ್ರ ತ್ಯಾಗಿ ಅವರು ಎಲ್ಲಾ ನಾಲ್ಕು ಜಾಬ್ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಶಬೀನಾ ಮತ್ತು ಸಂಬಂಧಿಕರಿಗೆ ಜಾಬ್ ಕಾರ್ಡ್ ನೀಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ ಅಥವಾ ಕುಟುಂಬದಿಂದ ಪಡೆದ ಹಣವನ್ನು ವಸೂಲಿ ಮಾಡಿಲ್ಲ.ಆಗಸ್ಟ್ 2024 ರಲ್ಲಿ ಜಾಬ್ ಕಾರ್ಡ್‌ಗಳನ್ನು ರದ್ದುಗೊಳಿಸುವುದರೊಂದಿಗೆ, ನಾಲ್ಕು ಫಲಾನುಭವಿಗಳ ಹೆಸರನ್ನು MNREGA ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.
ಮಾರ್ಚ್ 25 ರಂದು ಗ್ರಾಮಸ್ಥರು ಕುಟುಂಬದ ವಿರುದ್ಧ ನೀಡಿದ ದೂರಿನ ನಂತರ ಅಮ್ರೋಹಾ DM ನಿಧಿ ವತ್ಸಾ ಅವರು ಯೋಜನಾ ನಿರ್ದೇಶಕ ಅಮರೇಂದ್ರ ಪ್ರತಾಪ್ ಅವರನ್ನು ವಿಚಾರಣಾ ಅಧಿಕಾರಿಯನ್ನಾಗಿ ನೇಮಿಸಿ, ತನಿಖೆಗೆ ಆದೇಶಿಸಿದ್ದಾರೆ.
Advertisement