ಪೂರ್ವ ಲಡಾಕ್ ರಕ್ಷಣೆಗೆ ಹೊಸ ಸೇನಾ ವಿಭಾಗ: ಗಡಿ ವಾಸ್ತವ ರೇಖೆಯಲ್ಲಿ ನಿಯೋಜನೆ

ಇದನ್ನು ಒರ್ಬಾಟ್ ನ ಪ್ರಮುಖ ಮರು-ಪುನರ್ನಿರ್ಮಾಣ ಕ್ರಮ ಎಂದು ಕರೆಯಲಾಗುತ್ತಿದ್ದು, ಹೊಸ ರಚನೆಯನ್ನು 72 ವಿಭಾಗ ಎಂದು ಕರೆಯಲಾಗುತ್ತದೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪೂರ್ವ ಲಡಾಖ್ ನ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತವಾಗಿ ಇರಿಸಲು ವಿಭಾಗ ಮಟ್ಟದ ರಚನೆಯನ್ನು ರಚಿಸುವ ಪ್ರಕ್ರಿಯೆಯಲ್ಲಿ ಭಾರತೀಯ ಸೇನೆ ಮುಂದಾಗಿದೆ ಎಂದು ಖಚಿತ ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿದುಬಂದಿದೆ. ಇದು ಸಂಪೂರ್ಣ ವಾಸ್ತವಿಕ ನಿಯಂತ್ರಣ ರೇಖೆಗೆ (LAC)ಹೊಣೆಯಾಗಿರುವ 3 ವಿಭಾಗಕ್ಕೆ ಹೆಚ್ಚುವರಿಯಾಗಿರುತ್ತದೆ.

ಇದನ್ನು ಒರ್ಬಾಟ್ ನ ಪ್ರಮುಖ ಮರು-ಪುನರ್ನಿರ್ಮಾಣ ಕ್ರಮ ಎಂದು ಕರೆಯಲಾಗುತ್ತಿದ್ದು, ಹೊಸ ರಚನೆಯನ್ನು 72 ವಿಭಾಗ ಎಂದು ಕರೆಯಲಾಗುತ್ತದೆ. ORBAT ಎಂದರೆ 'ಯುದ್ಧದ ಕ್ರಮ' ಮತ್ತು RE-ORBAT ಈಗಿರುವ ಸೇನಾ ಪಡೆಗಳನ್ನು ಮರುಸಂಘಟಿಸಿ ಮರು-ಪುನರ್ನಿರ್ಮಾಣ ಮಾಡುತ್ತಿದೆ.

ಭಾರತೀಯ ಸೇನೆಯಲ್ಲಿ, ಒಂದು ವಿಭಾಗದಲ್ಲಿ ಸುಮಾರು 10,000-15,000 ಯುದ್ಧ ಪಡೆಗಳು ಮತ್ತು 8,000 ಬೆಂಬಲ ಪಡೆಗಳನ್ನು ಒಳಗೊಂಡಿವೆ, ಇವುಗಳನ್ನು ಮೇಜರ್ ಜನರಲ್ ನೇತೃತ್ವದಲ್ಲಿ ಮತ್ತು 3 ರಿಂದ 4 ಬ್ರಿಗೇಡ್‌ಗಳಿಂದ ಮಾಡಲ್ಪಟ್ಟಿದೆ. ಒಂದು ಬ್ರಿಗೇಡ್ 3,500-4,000 ಸೈನಿಕರ ಗಾತ್ರವನ್ನು ಹೊಂದಿದ್ದು, ಬ್ರಿಗೇಡಿಯರ್ ಕಮಾಂಡರ್ ಆಗಿರುತ್ತಾರೆ.

Representational image
ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯ ಬೆಟಾಲಿಯನ್ ನ ಮೊದಲ ಮಹಿಳಾ ಕಮಾಂಡರ್ ಕರ್ನಲ್ ಗೀತಾ ರಾಣಾ ನೇಗಿ

ಏನೇನಿರುತ್ತದೆ?

ಪೂರ್ವ ಲಡಾಕ್ ನಲ್ಲಿ ಪ್ರಧಾನ ಕಚೇರಿಯನ್ನು ನಿರ್ಮಿಸಲಾಗುತ್ತಿದೆ; ಒಂದು ಬ್ರಿಗೇಡ್ ಪ್ರಧಾನ ಕಚೇರಿಯನ್ನು ಈಗಾಗಲೇ ಪೂರ್ವ ಲಡಾಖ್‌ನಲ್ಲಿ ನಿಯೋಜಿಸಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ನಿರ್ದಿಷ್ಟ ಕಾರ್ಯದ ಪ್ರಕಾರ ಸಿಬ್ಬಂದಿ, ಉಪಕರಣಗಳು ಮತ್ತು ಸಂಘಟನೆಯನ್ನು ಹೊಂದಾಣಿಕೆ ಮಾಡಲು ದೇಶದ ಪಶ್ಚಿಮ ಭಾಗಗಳಲ್ಲಿ ರಚನೆಯ ದೊಡ್ಡ ಘಟಕಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

72 ನೇ ವಿಭಾಗವನ್ನು ಶಾಶ್ವತವಾಗಿ ಲೇಹ್ ಮೂಲದ 14 ಫೈರ್ & ಫ್ಯೂರಿ ಕಾರ್ಪ್ಸ್ ಅಡಿಯಲ್ಲಿ ಇರಿಸಲಾಗುತ್ತದೆ, ಇದನ್ನು ಕಾರ್ಗಿಲ್ ಯುದ್ಧದ ನಂತರ 1999ರ ಸೆಪ್ಟೆಂಬರ್ ತಿಂಗಳಲ್ಲಿ ಸ್ಥಾಪಿಸಲಾಯಿತು. ಈ ಕಾರ್ಪ್ಸ್ ವಿಶ್ವದ ಅತ್ಯಂತ ಸೂಕ್ಷ್ಮ ಗಡಿನಾಡುಗಳು ಮತ್ತು ಯುದ್ಧಭೂಮಿಗಳನ್ನು ನಿರ್ವಹಿಸುತ್ತದೆ.

72 ನೇ ವಿಭಾಗದ ನಿಯಂತ್ರಣದಲ್ಲಿರುವ ಪ್ರದೇಶವನ್ನು ಪ್ರಸ್ತುತ ಯೂನಿಫಾರ್ಮ್ ಫೋರ್ಸ್ ಎಂದು ಕರೆಯಲ್ಪಡುವ ದಂಗೆ ನಿಗ್ರಹ ವಿಭಾಗ ನೋಡಿಕೊಳ್ಳುತ್ತಿದೆ. ಯೂನಿಫಾರ್ಮ್ ಫೋರ್ಸ್ ಶೀಘ್ರದಲ್ಲೇ ಜಮ್ಮು ವಿಭಾಗದ ರಿಯಾಸಿಯಲ್ಲಿರುವ ತನ್ನ ಹಳೆಯ ಸ್ಥಳಕ್ಕೆ ಹಿಂತಿರುಗಲಿದೆ. 832-ಕಿಮೀ ಗಡಿ ವಾಸ್ತವ ರೇಖೆ ಉದ್ದಕ್ಕೂ ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಪೂರ್ವ ಲಡಾಖ್‌ನಲ್ಲಿ ಶಾಶ್ವತ ವಿಭಾಗವನ್ನು ರಚಿಸುವ ಸೇನೆಯ ನಿರ್ಧಾರವು ಮುಖ್ಯವಾಗಿದೆ,

2020 ರ ಮೇ ತಿಂಗಳಲ್ಲಿ ಪಾಂಗಾಂಗ್ ಸರೋವರದ ಬಳಿಯ ಫಿಂಗರ್ -4 ನಲ್ಲಿ ಚೀನಾ ಮತ್ತು ಭಾರತೀಯ ಪಡೆಗಳ ನಡುವೆ ಘರ್ಷಣೆ ನಡೆಯಿತು. ನಂತರ ಅದೇ ವರ್ಷ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ ಸಂಭವಿಸಿತು. ಹಲವಾರು ಸುತ್ತಿನ ಮಾತುಕತೆಗಳ ನಂತರ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳು ಹಿಂತೆಗೆದುಕೊಂಡವು. ನಂತರ ಗಸ್ತು ತಿರುಗುವಿಕೆ ಅಲ್ಲಿ ಪುನಾರಂಭವಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com