ಇದೇ ಅಂಬೇಡ್ಕರ್ ಗೆ ಸಲ್ಲಿಸುವ ನಿಜವಾದ ಗೌರವ: ಪ್ರಧಾನಿ ಮೋದಿ

ಸೋಮವಾರ ನಾಗ್ಪುರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, 1956 ರಲ್ಲಿ ಅಂಬೇಡ್ಕರ್ ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ ದೀಕ್ಷಾಭೂಮಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು
PM Modi
ಪ್ರಧಾನಿ ಮೋದಿ
Updated on

ನಾಗ್ಪುರ: ‘ಅಭಿವೃದ್ಧಿ ಹೊಂದಿದ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತ ನಿರ್ಮಿಸುವುದೇ ಭಾರತ ಸಂವಿಧಾನದ ಮುಖ್ಯ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಇಂದು ನಾಗ್ಪುರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, 1956 ರಲ್ಲಿ ಅಂಬೇಡ್ಕರ್ ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ ದೀಕ್ಷಾಭೂಮಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ದೀಕ್ಷಾಭೂಮಿಯಲ್ಲಿರುವ ಸ್ತೂಪದ ಒಳಗೆ ತೆರಳಿ ಅಲ್ಲಿ ಇರಿಸಲಾಗಿದ್ದ ಅಂಬೇಡ್ಕರ್ ಅವರ ‘ಅಸ್ತಿ’ಗೆ ನಮನ ಸಲ್ಲಿಸಿದರು.

ಸ್ಥಳದಲ್ಲಿದ್ದ ಸಂದರ್ಶಕರ ದಿನಚರಿಯಲ್ಲಿ ಹಿಂದಿಯಲ್ಲಿ ಬರೆದಿರುವ ಮೋದಿ, “ನಾಗ್ಪುರದಲ್ಲಿರುವ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಐದು ಪಂಚತೀರ್ಥಗಳಲ್ಲಿ ಒಂದಾದ ದೀಕ್ಷಾಭೂಮಿಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿದ್ದು ನನಗೆ ಅತೀವ ಸಂತಸ ತಂದಿದೆ ಎಂದಿದ್ದಾರೆ.

PM Modi
ನಾಗ್ಪುರ: RSS ಸಂಸ್ಥಾಪಕರ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ

ಬಾಬಾಸಾಹೇಬರ ಸಾಮಾಜಿಕ ಸಾಮರಸ್ಯ, ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಇಲ್ಲಿ ಅನುಭವಿಸಬಹುದು ಎಂಬ ಸಂದೇಶ ಬರೆದಿದ್ದಾರೆ.

ಬಡವರು, ಹಿಂದುಳಿದವರು ಮತ್ತು ನಿರ್ಗತಿಕರಿಗೆ ಸಮಾನ ಹಕ್ಕುಗಳು ಮತ್ತು ನ್ಯಾಯದ ವ್ಯವಸ್ಥೆಯೊಂದಿಗೆ ಮುಂದುವರಿಯಲು ದೀಕ್ಷಾಭೂಮಿ ಜನರಿಗೆ ಶಕ್ತಿ ತುಂಬುತ್ತದೆ. ಈ ಅಮೃತ ಕಾಲದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೌಲ್ಯಗಳು ಮತ್ತು ಬೋಧನೆಗಳೊಂದಿಗೆ ನಾವು ದೇಶವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂಬ ಸಂಪೂರ್ಣ ನಂಬಿಕೆ ಇದೆ ನನಗೆ ಇದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಕೊನೆಯದಾಗಿ 2017 ರಲ್ಲಿ ದೀಕ್ಷಾಭೂಮಿಗೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com