ಭಾರತವೇನಾದರೂ ಪಾಕ್ ವಿರುದ್ಧ ದಾಳಿ ಮಾಡಿದರೆ, ಚೀನಾ ಜೊತೆಗೂಡಿ ಬಾಂಗ್ಲಾದೇಶ...: ಭಾರತಕ್ಕೆ ಯೂನಸ್ ಸರ್ಕಾರ ವಾರ್ನಿಂಗ್?

ಬಾಂಗ್ಲಾ ಸರ್ಕಾರದ ಮುಖ್ಯಸ್ಥರಾಗಿರುವ ಮುಹಮ್ಮದ್ ಯೂನಸ್ ಆವರ ಆಪ್ತ ಎಂದು ಗುರುತಿಸಿಕೊಂಡಿರುವ ನಿವೃತ್ತ ಮೇಜರ್ ಜನರಲ್ ಎಎಲ್‌ಎಂ ಫಜ್ಲುರ್ ರೆಹಮಾನ್ ಭಾರತ ಪಾಕ್ ಮೇಲೆ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ.
National Independent Investigation Commission head ALM Fazlur Rahman with Chief Adviser of Bangladesh's interim government Muhammad Yunus.
ರಾಷ್ಟ್ರೀಯ ಸ್ವತಂತ್ರ ತನಿಖಾ ಆಯೋಗದ ಮುಖ್ಯಸ್ಥ ಎಎಲ್ಎಂ ಫಜ್ಲುರ್ ರೆಹಮಾನ್ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರೊಂದಿಗೆ ಮಾತನಾಡುತ್ತಿರುವುದು... online desk
Updated on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನವದೆಹಲಿ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಸಾಧ್ಯತೆಗಳ ಬಗ್ಗೆ ಬಾಂಗ್ಲಾದೇಶ ಮಾತನಾಡಿದ್ದು ಭಾರತಕ್ಕೆ ಎಚ್ಚರಿಕೆ ನೀಡುವ ಧ್ವನಿಯಲ್ಲಿ ಹೇಳಿಕೆ ನೀಡಿದೆ.

ಬಾಂಗ್ಲಾ ಸರ್ಕಾರದ ಮುಖ್ಯಸ್ಥರಾಗಿರುವ ಮುಹಮ್ಮದ್ ಯೂನಸ್ ಆವರ ಆಪ್ತ ಎಂದು ಗುರುತಿಸಿಕೊಂಡಿರುವ ನಿವೃತ್ತ ಮೇಜರ್ ಜನರಲ್ ಎಎಲ್‌ಎಂ ಫಜ್ಲುರ್ ರೆಹಮಾನ್ ಭಾರತ ಪಾಕ್ ಮೇಲೆ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದು, ಒಂದು ವೇಳೆ ಭಾರತವೇನಾದರೂ ಪಾಕ್ ಮೇಲೆ ದಾಳಿ ನಡೆಸಿದರೆ, ಚೀನಾ ಜೊತೆ ಸೇರಿಕೊಂಡು ಬಾಂಗ್ಲಾ ಭಾರತಕ್ಕೆ ಹಾನಿ ಮಾಡಲಿದೆ ಎಂಬ ಅರ್ಥದ ಹೇಳಿಕೆ ನೀಡಿದ್ದಾರೆ.

ಭಾರತವೇನಾದರೂ ಪಾಕ್ ವಿರುದ್ಧ ದಾಳಿ ನಡೆಸಿದರೆ, ಚೀನಾದೊಂದಿಗೆ ಸೇರಿಕೊಂಡು ಬಾಂಗ್ಲಾದೇಶ ಭಾರತದ ಏಳು ಈಶಾನ್ಯ ರಾಜ್ಯಗಳನ್ನು ಆಕ್ರಮಿಸಿ ಆಕ್ರಮಿಸಿಕೊಳ್ಳಬೇಕು ಎಂದು ಬಾಂಗ್ಲಾದೇಶದ ನಿವೃತ್ತ ಮೇಜರ್ ಜನರಲ್ ಎಎಲ್‌ಎಂ ಫಜ್ಲುರ್ ರೆಹಮಾನ್ ಸಲಹೆ ನೀಡಿದ್ದಾರೆ.

National Independent Investigation Commission head ALM Fazlur Rahman with Chief Adviser of Bangladesh's interim government Muhammad Yunus.
ಅತಿಯಾಗಿ ಬಾಲ ಬಿಚ್ಚಿದರೆ ದೇಶ ಬಿಟ್ಟು ಓಡಿಹೋಗಲು 5 ನಿಮಿಷ ಸಹ ಕೊಡಲ್ಲ: ಯೂನಸ್‌ಗೆ ಇಸ್ಲಾಮಿಕ್ ಪಕ್ಷಗಳ ಎಚ್ಚರಿಕೆ!

ಬಾಂಗ್ಲಾದೇಶ ರೈಫಲ್ಸ್‌ನ (ಈಗ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ) ಮಾಜಿ ಮುಖ್ಯಸ್ಥ ರೆಹಮಾನ್, ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಆಪ್ತ ಎಂದು ಪರಿಗಣಿಸಲಾಗಿದೆ, ಅವರು ಈ ಘಾತುಕ ಕಲ್ಪನೆಯನ್ನು ಸಾಧಿಸಲು ಚೀನಾದೊಂದಿಗೆ ಸಹಕರಿಸಬೇಕೆಂದು ಕರೆ ನೀಡಿದ್ದಾರೆ.

"ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಆಕ್ರಮಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಚೀನಾದೊಂದಿಗೆ ಜಂಟಿ ಮಿಲಿಟರಿ ವ್ಯವಸ್ಥೆ ಕುರಿತು ಚರ್ಚೆಗಳನ್ನು ಪ್ರಾರಂಭಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ" ಎಂದು ರಾಷ್ಟ್ರೀಯ ಸ್ವತಂತ್ರ ಆಯೋಗದ ಅಧ್ಯಕ್ಷ ರೆಹಮಾನ್ ಫೇಸ್‌ಬುಕ್‌ನಲ್ಲಿ ಬಂಗಾಳಿ ಭಾಷೆಯಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com