Uttarakhand: ಆರು ತಿಂಗಳ ಬಳಿಕ ಬದರಿನಾಥ ದೇಗುಲ ಬಾಗಿಲು ಓಪನ್: 15 ಟನ್ ಹೂವುಗಳಿಂದ ಅಲಂಕಾರ

ವಿಷ್ಣು ದೇವರಿಗೆ ಸಮರ್ಪಿತವಾದ ದೇವಾಲಯದ ಬಾಗಿಲುಗಳನ್ನು ವೇದ ಮಂತ್ರಗಳ ನಡುವೆ ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು.
Badrinath open
ಬದರಿನಾಥ ದೇವಾಲಯ
Updated on

ಚಮೋಲಿ: ಆರು ತಿಂಗಳಿಂದ ಬಂದ್ ಆಗಿದ್ದ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಹಿಂದೂಗಳ ಪವಿತ್ರ ಕ್ಷೇತ್ರ ಬದರಿನಾಥ ದೇವಾಲಯದ ಬಾಗಿಲುಗಳನ್ನು ಭಾನುವಾರ ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ.

ವಿಷ್ಣು ದೇವರಿಗೆ ಸಮರ್ಪಿತವಾದ ದೇವಾಲಯದ ಬಾಗಿಲುಗಳನ್ನು ವೇದ ಮಂತ್ರಗಳ ನಡುವೆ ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು. ವಿವಿಧ ಬಗೆಯ 15 ಟೈನ್ ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಭಾರತೀಯ ಸೇನೆ ದೇವಾಲಯದ ಮುಂದೆ ಭಕ್ತಿಗೀತೆ ನುಡಿಸಿತು.

ಮೊದಲಿಗೆ ಬದರಿನಾಥ ಧಾಮದ ಪ್ರಧಾನ ಅರ್ಚಕ ರಾವಲ್, ಧರ್ಮಾಧಿಕಾರಿ ಮತ್ತು ವೇದಪಾಠಿಗಳು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಭಟ್ ಮತ್ತು ತೆಹ್ರಿ ಶಾಸಕ ಕಿಶೋರ್ ಉಪಾಧ್ಯಾಯ ಉಪಸ್ಥಿತರಿದ್ದರು.

ಸುಮಾರು 10 ನಿಮಿಷಗಳ ಕಾಲ ಹೆಲಿಕಾಪ್ಟರ್‌ನಿಂದ ಭಕ್ತರ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಮಾನಾ ಮತ್ತು ಬೆಮ್ನಿ ಗ್ರಾಮದ ಮಹಿಳೆಯರು ದೇವಾಲಯದ ಆವರಣದಲ್ಲಿ ಜುಮೈಲೋ ನೃತ್ಯವನ್ನು ಪ್ರದರ್ಶಿಸಿದರು ಮತ್ತು ಇತರ ರಾಜ್ಯಗಳ ಭಕ್ತರು 'ಭಜನೆ' ಹಾಡಿದರು.

Badrinath open
ಕೇದಾರನಾಥ ಬಾಗಿಲು ಓಪನ್; ಭಕ್ತರ ಸ್ವಾಗತಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ

ಸುರಕ್ಷಿತ ಮತ್ತು ಸುಗಮ ಚರ್ ದಾಮ ಯಾತ್ರೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರ ಮಾಡಿದೆ. ಹಸಿರು ಮತ್ತು ಸ್ವಚ್ಛ ಯಾತ್ರೆಯನ್ನಾಗಿ ಮಾಡುವ ಸರ್ಕಾರದ ಪ್ರಯತ್ನಗಳಿಗೆ ಭಕ್ತರು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com