ಶ್ರೀನಗರ: 45 ವರ್ಷದ ಮಹಿಳೆ ಮೇಲೆ ಗ್ಯಾಂಗ್ ರೇಪ್, ಕೊಲೆ: ಕಣಿವೆಯಲ್ಲಿ ವ್ಯಾಪಕ ಆಕ್ರೋಶ!

ವಾಟರ್ ವರ್ಕ್ಸ್ ರಸ್ತೆಯ ನಿಶಾತ್ ಬಳಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
Casual Images
ಸಾಂದರ್ಭಿಕ ಚಿತ್ರ
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಹೊರವಲಯ ನಿಶಾತ್ ಪ್ರದೇಶದಲ್ಲಿ 45 ವರ್ಷದ ಅಲೆಮಾರಿ ಮಹಿಳೆಯ ಮೇಲೆ ನಾಲ್ವರು ಪುರುಷರು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಘಟನೆಯು ಕಣಿವೆಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ತ್ವರಿತ ಕ್ರಮಕ್ಕೆ ಬೇಡಿಕೆಗಳು ಹೆಚ್ಚಾಗುತ್ತಿವೆ.

ವಾಟರ್ ವರ್ಕ್ಸ್ ರಸ್ತೆಯ ನಿಶಾತ್ ಬಳಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ, ”ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಮಹಿಳೆ ಅಲೆಮಾರಿ ಬಕರ್ವಾಲ್ ಸಮುದಾಯಕ್ಕೆ ಸೇರಿದ್ದು, ಆಕೆ ಸಮುದಾಯದ ಇತರ ಸದಸ್ಯರೊಂದಿಗೆ ಒಂದು ವಾರದ ಹಿಂದೆ ತಮ್ಮ ಜಾನುವಾರುಗಳೊಂದಿಗೆ ರಿಯಾಸಿ ಜಿಲ್ಲೆಯಿಂದ ವಲಸೆ ಬಂದಿದ್ದರು. ನಾವು ಬೇಸಿಗೆ ಮತ್ತು ಚಳಿಗಾಲದಲ್ಲಿ ಈ ಸ್ಥಳಕ್ಕೆ ವಲಸೆ ಹೋಗಿ ನಂತರ ವಾಪಸ್ಸಾಗುತ್ತೇವೆ ಎಂದು ಅವರ ಮಗ ಹೇಳಿದರು.

ಸಮುದಾಯದ ಸದಸ್ಯರು ಹೇಳುವಂತೆ, ಮಹಿಳೆಯು ತನ್ನ ಡೇರೆಯಿಂದ ಸಂಜೆ 5 ಗಂಟೆಗೆ ಹತ್ತಿರದ ಪ್ರದೇಶದಲ್ಲಿ ಜಾನುವಾರು ಮೇಯಿಸಲು ಹೋಗಿದ್ದರು. ನಂತರ ಹಿಂತಿರುಗದಿದ್ದಾಗ ಹುಡುಕಾಡುತ್ತಿದ್ದಾಗ ಗಾಯಗೊಂಡ ಮಹಿಳೆ ಬಳಿ ಕೆಲವು ವ್ಯಕ್ತಿಗಳು ಕಂಡುಬಂದರು. ಶೋಧ ಕಾರ್ಯಾಚರಣೆ ವೇಳೆ ಅವರಿಗೆ ಒಬ್ಬ ವ್ಯಕ್ತಿಯೊಬ್ಬ ಹುಡುಕುತ್ತಿದ್ದರೆ ಇತರರು ಓಡಿ ಹೋದರು. ಸಿಕ್ಕಿಬಿದ್ದ ಒಬ್ಬ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಗಾಯಗೊಂಡ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಇರಲಿಲ್ಲ. ಬಳಿಕ ಮಹಿಳೆಯನ್ನು ಶ್ರೀನಗರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ರಕ್ತ ಮೆತ್ತಿಕೊಂಡಿದ್ದ ಓರ್ವ ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದೇವು ಎಂದು ಮೃತ ಮಹಿಳೆಯ ಮಗ ಹೇಳಿದ್ದಾನೆ.

Casual Images
ಭುವನೇಶ್ವರ: ಮನೆ ಮಾಲಕಿ, ಆಕೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ; ಮನೆಕೆಲಸದಾಳು ಬಂಧನ

ಈ ಘಟನೆ ಕಣಿವೆ ಪ್ರದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು PDP ಶಾಸಕ ರಫೀಕ್ ನಾಯಕ್ ಒತ್ತಾಯಿಸಿದ್ದಾರೆ. ಬುಡಕಟ್ಟು ಮಹಿಳೆ ಮೇಲೆ ಬರ್ಬರ ಕೃತ್ಯವೆಸಗಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಶಾಸಕ ಸಜ್ಜಾದ್ ಘನಿ ಲೋನ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com