File image
ಸಂಗ್ರಹ ಚಿತ್ರ

ʻಆಪರೇಷನ್‌ ಸಿಂಧೂರ್‌ʼ ಹೆಸರಿಟ್ಟಿದ್ದೇಕೆ?: ಶತ್ರುರಾಷ್ಟ್ರಕ್ಕೆ ನೀಡಿದ ವಿರೋಚಿತ ಸಂದೇಶವೇನು? ಹೇಗಿತ್ತು 12 ದಿನಗಳ ಪ್ಲ್ಯಾನ್!

ಇನ್ನು ಪ್ರಮುಖ ವಿಚಾರ ಎಂದರೆ ಯುದ್ಧಕ್ಕೆ ಹೊರಡುವ ಯೋಧರು ಹಣೆಗೆ ಸಿಂಧೂರ ತಿಲಕವನ್ನು ಇಡುವುದು ವಾಡಿಕೆ. ಹೀಗಾಗಿ ಈ ಆಪರೇಷನ್‌ಗೆ ಸಿಂಧೂರ ಎಂದು ಹೆಸರಿಡಲಾಗಿದೆ. ಇನ್ನು ಆಪರೇಷನ್‌ ಸಿಂಧೂರ್‌ ಎಂಬ ಹೆಸರಿನಲ್ಲಿ ಭಾವನಾತ್ಮಕ ಮತ್ತು ವೀರೋಚಿತ ಸಂದೇಶವಿದೆ.
Published on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆಯು ಮಂಗಳವಾರ ತಡರಾತ್ರಿ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಭಾರತದ ಈ ಪ್ರತೀಕಾರದ ಕ್ರಮಕ್ಕೆ ‘ಆಪರೇಷನ್ ಸಿಂಧೂರ್' ಎಂದು ಹೆಸರಿಡಲಾಗಿದೆ.

ಪಹಲ್ಗಾಮ್‌ ದಾಳಿಗೆ ಸೇಡು ತೀರಿಸಿಕೊಂಡಿರುವ ಭಾರತ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಆಪರೇಷನ್‌ ಸಿಂಧೂರ್‌ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ ಭಾರತ ಉಗ್ರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಯಾವುದೇ ಸೂಚನೆ ಇಲ್ಲದೆ ಸುಮಾರು 20 ನಿಮಿಷಗಳ ಕಾಲ ನಡೆದ ಈ ದಾಳಿಯಿಂದ ಪಾಕ್‌ ಪತರುಗುಟ್ಟಿ ಹೋಗಿದೆ.

ಸಿಂಧೂರ ಸಾಂಪ್ರದಾಯಿಕವಾಗಿ ಹಿಂದೂ ಮಹಿಳೆಯರ ಮುತ್ತೈದೆತನದ ಸಂಕೇತ. ಏಪ್ರಿಲ್ 22ರಂದು ಧರ್ಮದ ಆಧಾರದ ಮೇಲೆ ಪುರುಷರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಅನೇಕ ಮಹಿಳೆಯರ ಮುತೈದೆತನಕ್ಕೆ ಕೈ ಹಾಕುವ ದುಸ್ಸಾಹಸ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಡೆಡ್ಲಿ ಅಟ್ಯಾಕ್‌ ನಡೆಸಿದ್ದು, ಈ ಆಪರೇಷನ್‌ಗೆ ಈ ಹೆಸರು ಅತ್ಯಂತ ಸೂಕ್ತವಾಗಿದೆ.

ಸಿಂಧೂರ ಸಾಂಪ್ರದಾಯಿಕವಾಗಿ ಹಿಂದೂ ಮಹಿಳೆಯರ ಮುತ್ತೈದೆತನದ ಸಂಕೇತ. ಏಪ್ರಿಲ್ 22ರಂದು ಧರ್ಮದ ಆಧಾರದ ಮೇಲೆ ಪುರುಷರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಅನೇಕ ಮಹಿಳೆಯರ ಮುತೈದೆತನಕ್ಕೆ ಕೈ ಹಾಕುವ ದುಸ್ಸಾಹಸ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಡೆಡ್ಲಿ ಅಟ್ಯಾಕ್‌ ನಡೆಸಿದ್ದು, ಈ ಆಪರೇಷನ್‌ಗೆ ಈ ಹೆಸರು ಅತ್ಯಂತ ಸೂಕ್ತವಾಗಿದೆ.

ಇನ್ನು ಪ್ರಮುಖ ವಿಚಾರ ಎಂದರೆ ಯುದ್ಧಕ್ಕೆ ಹೊರಡುವ ಯೋಧರು ಹಣೆಗೆ ಸಿಂಧೂರ ತಿಲಕವನ್ನು ಇಡುವುದು ವಾಡಿಕೆ. ಹೀಗಾಗಿ ಈ ಆಪರೇಷನ್‌ಗೆ ಸಿಂಧೂರ ಎಂದು ಹೆಸರಿಡಲಾಗಿದೆ. ಇನ್ನು ಆಪರೇಷನ್‌ ಸಿಂಧೂರ್‌ ಎಂಬ ಹೆಸರಿನಲ್ಲಿ ಭಾವನಾತ್ಮಕ ಮತ್ತು ವೀರೋಚಿತ ಸಂದೇಶವಿದೆ.

ಆಪರೇಷನ್ ಸಿಂಧೂರ್ ರೂಪಿಸಲು ಸುಮಾರು 8–9 ದಿನಗಳು ಬೇಕಾಯಿತು, ಹೆಚ್ಚುವರಿಯಾಗಿ ಮೂರರಿಂದ ನಾಲ್ಕು ದಿನಗಳನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕ ಘಟಕಗಳು ಮತ್ತು ಶಿಬಿರಗಳನ್ನು ಗುರಿಯಾಗಿಸಿಕೊಂಡು ವಿವೇಚನೆಯಿಂದ ತಂತ್ರ ರೂಪಿಸಿದರು.

ಶತ್ರುಗಳು ಮತ್ತು ಅದರ ಗುಪ್ತಚರ ಜಾಲಗಳನ್ನು ಸಂಪೂರ್ಣ ಗೊಂದಲದ ಸ್ಥಿತಿಯಲ್ಲಿಡಲು ಭಾರತವು ತನ್ನ ಕಾರ್ಯತಂತ್ರವನ್ನು ನಿರಂತರವಾಗಿ ಮುಂದುವರಿಸಿದೆ. ಉರಿಯಲ್ಲಿ ಸೇನೆ ಮೇಲೆ ದಾಳಿಯಾದ 12 ದಿನಗಳ ನಂತರ, ಪುಲ್ವಾಮಾ ದಾಳಿಯ 12 ದಿನಗಳ ನಂತರ ಮತ್ತು ಪಹಲ್ಗಾಮ್ ಘಟನೆಯ 13 ದಿನಗಳ ನಂತರ ಭಾರತವು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಂಡಿರುವುದು ಗಮನಾರ್ಹ.

ಎರಡು ವಾರಗಳ ಹಿಂದೆ, ಏಪ್ರಿಲ್ 22 ರಂದು, ತನ್ನ ಪತಿಯ ನಿರ್ಜೀವ ದೇಹದ ಪಕ್ಕದಲ್ಲಿ ಮೌನವಾಗಿ ಆಘಾತದಿಂದ ಕುಳಿತಿರುವ ಹಿಂದೂ ಮಹಿಳೆಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿತು, ಇದು ಜಮ್ಮು ಮತ್ತು ಕಾಶ್ಮೀರದಲ್ಲಿ 26 ನಾಗರಿಕರ ಜೀವಗಳನ್ನು ಬಲಿತೆಗೆದುಕೊಂಡ ವಿನಾಶಕಾರಿ ಉಗ್ರಗಾಮಿ ದಾಳಿಯ ಪ್ರಬಲ ಸಂಕೇತವಾಯಿತು.

File image
ಅಪರೇಷನ್ ಸಿಂಧೂರ್: ಉಗ್ರರ ಅಡಗುತಾಣಗಳು ಢಮಾರ್; ಶತ್ರುವನ್ನು ಹೇಗೆ ಎದುರಿಸಬೇಕೆಂದು ಚೆನ್ನಾಗಿ ಗೊತ್ತಿದೆ- Pak PM

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com