'ಊಹಿಸಲಾಗದ ನಿಖರತೆ'ಯೊಂದಿಗೆ ಆಪರೇಷನ್ ಸಿಂಧೂರ್: ಭಾರತೀಯ ಸೇನೆಗೆ ರಾಜನಾಥ್ ಸಿಂಗ್ ಅಭಿನಂದನೆ

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಿರ್ವಹಿಸಿದ ನಿಖರತೆಯು "ಊಹಿಸಲಾಗದು" ಎಂದು ರಕ್ಷಣಾ ಸಚಿವರು ತಿಳಿಸಿದರು.
Rajnath Singh
ರಾಜನಾಥ್ ಸಿಂಗ್
Updated on

ನವದೆಹಲಿ: 'ಊಹಿಸಲಾಗದ ನಿಖರತೆ'ಯೊಂದಿಗೆ 'ಆಪರೇಷನ್ ಸಿಂಧೂರ್' ಅನ್ನು ಕಾರ್ಯಗತಗೊಳಿಸಿದ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಶೌರ್ಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಶ್ಲಾಘಿಸಿದ್ದಾರೆ.

ಇಂದು ರಾಷ್ಟ್ರೀಯ ಗುಣಮಟ್ಟ ಸಮಾವೇಶದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, "ನಿನ್ನೆ ತೆಗೆದುಕೊಂಡ ಕ್ರಮ ಮತ್ತು ಅವರು ತೋರಿದ ಧೈರ್ಯ ಹಾಗೂ ಶೌರ್ಯಕ್ಕಾಗಿ ನಾನು ಸಶಸ್ತ್ರ ಪಡೆಗಳನ್ನು ಅಭಿನಂದಿಸುತ್ತೇನೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ತಟಸ್ಥಗೊಳಿಸಲಾಗಿದೆ, ಇದು ನಮಗೆ ಹೆಮ್ಮೆಯ ವಿಷಯ" ಎಂದು ಹೇಳಿದರು.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಿರ್ವಹಿಸಿದ ನಿಖರತೆಯು "ಊಹಿಸಲಾಗದು" ಎಂದು ರಕ್ಷಣಾ ಸಚಿವರು ತಿಳಿಸಿದರು.

Rajnath Singh
'ಆಪರೇಷನ್ ಸಿಂಧೂರ್': 100 ಉಗ್ರರ ಹತ್ಯೆ, ಪಾಕಿಸ್ತಾನ ದಾಳಿ ಮಾಡಿದರೆ ಸುಮ್ಮನೆ ಬಿಡಲ್ಲ; ಸರ್ವಪಕ್ಷ ಸಭೆಯಲ್ಲಿ ರಾಜನಾಥ್ ಸಿಂಗ್

"ಆಪರೇಷನ್ ಸಿಂಧೂರ್ ನಿರ್ವಹಿಸಿದ ನಿಖರತೆಯು ಊಹಿಸಲಾಗದು, ಇದು ಅತ್ಯಂತ ಪ್ರಶಂಸನೀಯ. ಇದರಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಯಿತು ಮತ್ತು ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಹತ್ಯೆ ಮಾಡಲಾಯಿತು. ಈ ವೇಳೆ ಯಾವುದೇ ಅಮಾಯಕರಿಗೆ ಹಾನಿಯಾಗದಂತೆ ಈ ಕಾರ್ಯಾಚರಣೆಯನ್ನು ನಡೆಸಲಾಯಿತು..." ಎಂದು ರಕ್ಷಣಾ ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com