Masood Azhars brother Abdul Rauf Azhar
ಮಸೂದ್ ಅಜಾರ್ ಹಾಗೂ ಆತನ ಸಹೋದರ ರವೂಫ್ ಅಜರ್

Operation Sindoor:'IC-814 ವಿಮಾನ ಹೈಜಾಕ್ ಮಾಸ್ಟರ್ ಮೈಂಡ್ ರವೂಫ್ ಅಜರ್ ಫಿನಿಶ್!

ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿರುವ ಅಬ್ದುಲ್ ರವೂಫ್ ಜೈಷ್-ಇ ಮೊಹಮ್ಮದ್ (ಜೆಇಎಂ) ನ ಕಾರ್ಯಾಚರಣೆ ಮುಖ್ಯಸ್ಥ ಮತ್ತು ಅಂತಾರಾಷ್ಟ್ರೀಯ ಜಿಹಾದಿಗಳ ನೆಟ್‌ವರ್ಕ್‌ಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾನೆ.
Published on

ನವದೆಹಲಿ: ಭಾರತೀಯ ಸೇನಾಪಡೆಗಳು ನಡೆಸಿದ 'ಆಪರೇಷನ್ ಸಿಂದೂರ್' ನಲ್ಲಿ ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ನಿಷೇಧಿತ ಜೈಷ್-ಇ-ಮೊಹಮ್ಮದ್ (JeM) ಉಗ್ರ ಸಂಘಟನೆ ಸ್ಥಾಪಕ ಮಸೂದ್ ಅಜಾರ್ ಸಹೋದರ ಹಾಗೂ IC-814 ವಿಮಾನ ಹೈಜಾಕ್ ಮಾಸ್ಟರ್ ಮೈಂಡ್ ಅಬ್ದುಲ್ ರವೂಫ್ ಅಜರ್ ಆಲಿಯಸ್ ಮುಫ್ತಿ ಅಬ್ದುಲ್ ರವೂಫ್ ಅಜರ್ ಹತ್ಯೆಯಾಗಿರುವುದಾಗಿ ಭಾರತೀಯ ಏಜೆನ್ಸಿಗಳು ಗುರುವಾರ ಖಚಿತಪಡಿಸಿವೆ.

ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿರುವ ಅಬ್ದುಲ್ ರವೂಫ್ ಜೈಷ್-ಇ ಮೊಹಮ್ಮದ್ (ಜೆಇಎಂ) ನ ಕಾರ್ಯಾಚರಣೆ ಮುಖ್ಯಸ್ಥ ಮತ್ತು ಅಂತಾರಾಷ್ಟ್ರೀಯ ಜಿಹಾದಿಗಳ ನೆಟ್‌ವರ್ಕ್‌ಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾನೆ. ಇದು ಭಾರತಕ್ಕೆ ಸಿಕ್ಕ ಭಾರಿ ಯಶಸ್ಸು ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ಸೇನಾಪಡೆಗಳು ಪಂಜಾಬ್ ಪ್ರಾಂತ್ಯದ ಜೆಎಂನ ಬಹವಾಲ್ಪುರ್ ನ ಪ್ರಮುಖ ಕೇಂದ್ರ ಮತ್ತು ಲಷ್ಕರ್-ಎ-ತೊಯ್ಬಾದ ಪ್ರಧಾನ ಕಛೇರಿ ಮುರಿಡ್ಕೆಯಲ್ಲಿ ವೈಮಾನಿಕ ದಾಳಿ ನಡೆಸಿ, ಅವುಗಳನ್ನು ನಾಶಪಡಿಸಿತ್ತು. ಧೀರ್ಘಕಾಲದಿಂದ ಇಲ್ಲಿಂದಲೇ ಉಗ್ರರಿಗೆ ತರಬೇತಿ ನೀಡುವ ಮೂಲಕ ಭಾರತದ ಮೇಲೆ ದಾಳಿ ನಡೆಸಲಾಗುತಿತ್ತು.

ಬುಧವಾರ ಬಹವಾಲ್ಪುರದಲ್ಲಿ ನಡೆದ ದಾಳಿಯಲ್ಲಿ ಮಸೂದ್ ಅಜರ್ ಅವರ ಸಹೋದರಿ ಮತ್ತು ಸೋದರ ಮಾವ ಸೇರಿದಂತೆ 10 ಕುಟುಂಬ ಸದಸ್ಯರು ಹತ್ಯೆಯಾಗಿದ್ದಾರೆ. ಈ ಸಂಬಂಧ ಜೆಎಂ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಆದರೆ ರವೂಫ್ ಅಜರ್ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಸೂದ್ ಅವರ ಕುಟುಂಬದ 10 ಸದಸ್ಯರು, ನಾಲ್ವರು ಸಹಚರರೊಂದಿಗೆ ರವೂಫ್ ದಾಳಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ಪಾಕಿಸ್ತಾನದ ನಮ್ಮ ಮೂಲಗಳಿಂದ ದೃಢಪಡಿಸಲಾಗಿದೆ ಎಂದು ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಲ್ ಸ್ಟ್ರೀಟ್ ಜರ್ನಲ್‌ನ ಅಮೇರಿಕನ್-ಯಹೂದಿ ಪತ್ರಕರ್ತ ಡೇನಿಯಲ್ ಪರ್ಲ್ ಅವರನ್ನು ಅಪಹರಿಸಿ ಹತ್ಯೆ ಮಾಡಲು ಹೋಗಿದ್ದ ಆಲ್ ಕೈದಾ ಉಗ್ರ ಓಮರ್ ಸಯೀದ್ ಶೇಖ್ ಬಿಡುಗಡೆಗೆ ಕಂದಹಾರ್ ನಲ್ಲಿ IC-814 ವಿಮಾನ ಅಪಹರಣ ಮಾಡುವಲ್ಲಿ ರವೂಫ್ ಅಜರ್ ಪ್ರಮುಖ ಪಾತ್ರ ವಹಿಸಿದ್ದ. ಇದು ಪಾಕ್ ರಕ್ಷಿತ ಭಯೋತ್ಪಾದಕ ಜಾಲಗಳಿಂದ ಜಾಗತಿಕ ಬೆದರಿಕೆಗೆ ಒಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Masood Azhars brother Abdul Rauf Azhar
ಪಹಲ್ಗಾಮ್ ಉಗ್ರ ದಾಳಿಗೆ ಭಾರತ ಪ್ರತಿಕ್ರಿಯೆ ನೀಡಿದೆಯಷ್ಟೇ; ಪ್ರತಿಯೊಂದು ದುಸ್ಸಾಹಕ್ಕೂ ಪಾಕಿಸ್ತಾನವೇ ಹೊಣೆ!

1999 ರಲ್ಲಿ ಡಿಸೆಂಬರ್‌ನಲ್ಲಿ ಕಠ್ಮಂಡುವಿನಿಂದ ದೆಹಲಿಗೆ ತೆರಳುತ್ತಿದ್ದ IC-814 ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಹರ್ಕತ್-ಉಲ್-ಮುಜಾಹಿದ್ದೀನ್‌ನ ಐವರು ಭಯೋತ್ಪಾದಕರು ಹೈಜಾಕ್ ಮಾಡಿ, ತಾಲಿಬಾನ್-ನಿಯಂತ್ರಿತ ಅಫ್ಘಾನಿಸ್ತಾನಕ್ಕೆ ಕೊಂಡೊಯ್ಯಲಾಗಿತ್ತು. ವಿಮಾನದಲ್ಲಿ ಪ್ರಯಾಣಿಕರನ್ನು ವಿನಿಮಯ ಮಾಡಿಕೊಳ್ಳುವ ಭಾಗವಾಗಿ ಮಸೂದ್ ಅಜರ್‌ನನ್ನು ಜಮ್ಮು ಮತ್ತು ಕಾಶ್ಮೀರ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ತದನಂತರ ಮಸೂದ್ ಅಜರ್ ಜೈಷ್-ಇ-ಮೊಹಮ್ಮದ್ (JeM) ಉಗ್ರ ಸಂಘಟನೆ ಸ್ಥಾಪಿಸಿದ್ದ. ಇದು 2001 ರ ಸಂಸತ್ ದಾಳಿ ಸೇರಿದಂತೆ ಭಾರತದ ನೆಲದಲ್ಲಿ ಹಲವಾರು ದಾಳಿಗಳನ್ನು ನಡೆಸಿತು. ಭಾರತ ಸರ್ಕಾರ JeM ನಿಷೇಧಿತ್ತು. ಆದರೆ ಅದು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com