ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ, F-16 ಪೈಲಟ್ ವಶಕ್ಕೆ!

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚೀನಾ ನಿರ್ಮಿತ ಪಿಎಲ್-15 ಸಕ್ರಿಯ ರಾಡಾರ್-ಮಾರ್ಗಸೂಚಿತ ವಾಯುವಿನಿಂದ ವಾಯುವಿಗೆ (AAM) ದೀರ್ಘ-ಶ್ರೇಣಿಯ ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ. ಈ ಕ್ಷಿಪಣಿಯನ್ನು ಜೆಎಫ್-17 ನಿಂದ ಹಾರಿಸಲಾಗಿದೆ.
Pakistani F-16
ಯುದ್ಧ ವಿಮಾನ
Updated on

ನವದೆಹಲಿ: ಭಾರತ- ಪಾಕಿಸ್ತಾನ ನಡುವಿನ ತೀವ್ರ ಉದ್ವಿಗ್ನತೆಯ ನಡುವೆ, ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯಿಂದ ಹಾರಾಟ ನಡೆಸಿದ ಫೈಟರ್ ಜೆಟ್ ನ್ನು ಭಾರತೀಯ ಮೇಲ್ಮೈ ವಾಯು ಕ್ಷಿಪಣಿ (SAM) ವ್ಯವಸ್ಥೆಯು ಹೊಡೆದುರುಳಿಸಿದ ನಂತರ ಪಾಕಿಸ್ತಾನದ F-16 ಪೈಲಟ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ನೇಪಾಳದ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸುತ್ತಿರುವ 'ಆಪರೇಷನ್ ಸಿಂದೂರ್' ಕಾರ್ಯಾಚರಣೆ ಮಧ್ಯೆ, ಪಾಕಿಸ್ತಾನದ ಜೆಎಫ್-17 - ನಾಲ್ಕನೇ ತಲೆಮಾರಿನ, ಹಗುರವಾದ, ಏಕ-ಎಂಜಿನ್, ಬಹುಪಾತ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ದೃಢಪಡಿಸದ ವರದಿಗಳು ಹೇಳುತ್ತವೆ.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚೀನಾ ನಿರ್ಮಿತ ಪಿಎಲ್-15 ಸಕ್ರಿಯ ರಾಡಾರ್-ಗೈಡೆಡ್ ವಾಯುವಿನಿಂದ ವಾಯುವಿಗೆ (AAM) ದೀರ್ಘ-ಶ್ರೇಣಿಯ ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ. ಈ ಕ್ಷಿಪಣಿಯನ್ನು ಜೆಎಫ್-17 ನಿಂದ ಹಾರಿಸಲಾಗಿದೆ.

Pakistani F-16
India-Pakistan War: 'ಸೇನಾ ಸಂಘರ್ಷ ಕುರಿತು LIVE ವರದಿ ಮಾಡಬೇಡಿ'; ಮಾಧ್ಯಮಗಳಿಗೆ Indian Army, ಕೇಂದ್ರ ಸರ್ಕಾರ ಮನವಿ

ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ (ಐಬಿ) ಗೆ ಸಮೀಪದಲ್ಲಿರುವ ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರದಲ್ಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದಿಂದ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಬೆನ್ನಲ್ಲೇ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ.

"ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳಿಗೆ (SOPs) ಅನುಗುಣವಾಗಿ ಸಾಮರ್ಥ್ಯಗಳನ್ನು ಬಳಸಿಕೊಂಡು ಭಾರತೀಯ ಸಶಸ್ತ್ರ ಪಡೆಗಳು ಬೆದರಿಕೆಗಳನ್ನು ತ್ವರಿತವಾಗಿ ತಟಸ್ಥಗೊಳಿಸಿವೆ. ಯಾವುದೇ ಸಾವುನೋವುಗಳು ಅಥವಾ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಭಾರತವು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಪ್ರಧಾನ ಕಚೇರಿಯ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (HQ IDS) ಮತ್ತು ರಕ್ಷಣಾ ಸಚಿವಾಲಯ (MoD) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com