
ಪಾಕಿಸ್ತಾನಕ್ಕೆ ಆರ್ಥಿಕ ನೆರವು ಘೋಷಿಸಿರುವ IMF ವಿರುದ್ಧ ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನ್ನು International Militant Fund (ಅಂತಾರಾಷ್ಟ್ರೀಯ ಭಯೋತ್ಪಾದಕ ನಿಧಿ) ಎಂದು ಓವೈಸಿ ಟೀಕಾಪ್ರಹಾರ ನಡೆಸಿದ್ದಾರೆ.
ಪಾಕಿಸ್ತಾನ ಆರ್ಥಿಕ ನೆರವನ್ನು ದುರುಪಯೋಗಪಡಿಸಿಕೊಳ್ಳಲಿದೆ ಮತ್ತು ಐಎಂಎಫ್ ಪಾಕ್ ಗೆ ಆರ್ಥಿಕ ನೆರವು ನೀಡುವ ಮೂಲಕ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಓವೈಸಿ ಟೀಕಿಸಿದ್ದಾರೆ.
ಇದೇ ವೇಳೆ ಪಾಕ್ ವಿರುದ್ಧದ ಹೋರಾಟದ ಸಮಯದಲ್ಲಿ ಏಕೀಕೃತ ಭಾರತಕ್ಕೆ ಭಾರತೀಯ ಮುಸ್ಲಿಮರ ಬದ್ಧತೆಯನ್ನು ಓವೈಸಿ ಪುನರುಚ್ಚರಿಸಿದ್ದಾರೆ.
ಪಾಕಿಸ್ತಾನಕ್ಕೆ ಇತ್ತೀಚೆಗೆ $1 ಬಿಲಿಯನ್ IMF ಬೇಲ್ಔಟ್ ಪ್ಯಾಕೇಜ್ ಕುರಿತು ಪ್ರತಿಕ್ರಿಯೆ ನೀಡಿರುವ ಓವೈಸಿ ಇದು ಅಧಿಕೃತ ಭಿಕ್ಷೆ ಎಂದು ವ್ಯಂಗ್ಯವಾಡಿದ್ದಾರೆ. USA, ಜರ್ಮನಿ ಮತ್ತು ಜಪಾನ್ ಪಾಕ್ ಗೆ ನೆರವು ನೀಡಲು ಹೇಗೆ ಒಪ್ಪಿಕೊಂಡವು?..." ಎಂದು ಓವೈಸಿ ಪ್ರಶ್ನಿಸಿದ್ದಾರೆ.
"ನಾಯಕತ್ವವನ್ನು ಮರೆತುಬಿಡಿ, ಅವರಿಗೆ (ಪಾಕಿಸ್ತಾನ) ಆರ್ಥಿಕತೆಯನ್ನು ಹೇಗೆ ನಡೆಸಬೇಕೆಂದು ತಿಳಿದಿಲ್ಲ. ನೀವು ಅಲ್ಲಿ ಕುಳಿತು ಇಸ್ಲಾಂ ಎಂದರೇನು ಎಂದು ನಮಗೆ ಹೇಳುತ್ತಿದ್ದೀರಿ, ಆದರೆ ನಿಮ್ಮಲ್ಲಿರುವ ಎಲ್ಲವೂ ಇಲ್ಲಿನ ಶಾಂತಿಯನ್ನು ಹಾಳುಮಾಡಲು ಮತ್ತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಸಂಘರ್ಷವನ್ನು ಸೃಷ್ಟಿಸುವ ತಪ್ಪು ನೀತಿಗಳಾಗಿವೆ" ಎಂದು ಓವೈಸಿ ಪಾಕ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
Advertisement