Operation Sindoor: ಪಾಕಿಸ್ತಾನದ 8 ವಾಯು ನೆಲೆಗಳು ಧ್ವಂಸ ! Video ಸಾಕ್ಷಿ ಸಮೇತ ಮಾಹಿತಿ ನೀಡಿದ ಏರ್ ಮಾರ್ಷಲ್ ಎಕೆ ಭಾರ್ತಿ

ಪಾಕಿಸ್ತಾನದ ರಫೀಕಿ, ಮುರಿದ್, ಚಕ್ಲಾಲಾ, ರಹೀಂ ಯಾರ್ ಖಾನ್, ಸರ್ಗೋಧಾ ಸೇರಿದಂತೆ 8 ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿರುವುದಾಗಿ ತಿಳಿಸಿದರು.
Air Marshal AK Bharti
ಏರ್ ಮಾರ್ಷಲ್ ಎಕೆ ಭಾರ್ತಿ
Updated on

ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ, ಪಾಕಿಸ್ತಾನಕ್ಕೆ ನುಗ್ಗಿ 8 ವಾಯುನೆಲೆಗಳನ್ನು ಧ್ವಂಸಗೊಳಿಸಿದೆ..

ಈ ಕುರಿತು ಭಾನುವಾರ ಡಿಜಿಎಂಒ (DGMO) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾಕ್ಷಿ ಸಮೇತ ಮಾಹಿತಿ ನೀಡಿದ ವಾಯು ಪಡೆ ಮುಖ್ಯಸ್ಥ ಎಕೆ ಭಾರ್ತಿ, ಪಾಕಿಸ್ತಾನದ ರಫೀಕಿ, ಮುರಿದ್, ಚಕ್ಲಾಲಾ, ರಹೀಂ ಯಾರ್ ಖಾನ್, ಸರ್ಗೋಧಾ ಸೇರಿದಂತೆ 8 ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿರುವುದಾಗಿ ತಿಳಿಸಿದರು.

ಭಾರತದ ದಾಳಿಗೆ ಧ್ವಂಸಗೊಂಡ ಪಾಕಿಸ್ತಾನದ ವಾಯು ನೆಲೆಗಳು

1. ಚುನಿಯನ್ ಏರ್ ಡಿಫೆನ್ಸ್ ರಾಡಾರ್ ಕೇಂದ್ರ (Chunian Air Defense Radar site) ಪಂಜಾಬ್ ಪ್ರಾಂತ್ಯದಲ್ಲಿರುವ ಈ ಏರ್ ಬೇಸ್, ಲಾಹೋರ್ ನಿಂದ ಸುಮಾರು 70 ಕಿ. ಮೀ ದೂರದಲ್ಲಿದೆ. ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಲ್ಲಿ ಇದು ಒಂದಾಗಿದೆ.

2. Arifwala Air Defense Radar: ಭಾರತವು ನಾಶಪಡಿಸಿದ ವಾಯು ರಕ್ಷಣಾ ರಾಡಾರ್‌ಗಳಲ್ಲಿ ಆರಿಫ್ವಾಲಾ ಏರ್ ಡಿಫೆನ್ಸ್ ರಾಡಾರ್ ಕೂಡ ಸೇರಿದೆ.

3. ಸರ್ಗೋಧಾ ಏರ್ ಫೀಲ್ಡ್ (Sargodha Air Field)ಭಾರತ ದಾಳಿ ನಡೆಸಿದ ಪಾಕಿಸ್ತಾನದ ವಾಯು ನೆಲೆಗಳಲ್ಲಿ ಸರ್ಗೋಧಾ ಏರ್ ಫೀಲ್ಡ್ ಒಂದಾಗಿದೆ

4. ರಹೀಂ ಯಾರ್ ಖಾನ್ (Rahim Yar Khan Air Field) ವಾಯುನೆಲೆ: ಇದು ಪಂಜಾಬ್‌ನಲ್ಲಿರುವ ಮತ್ತೊಂದು ಏರ್‌ಬೇಸ್‌. ಇದು ರಾಜಸ್ಥಾನಕ್ಕೆ ಸಮೀಪ ಇರುವ ವಾಯುನೆಲೆ. ಪಾಕಿಸ್ತಾನದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಯಾವುದೇ ದಾಳಿ ಎದುರಿಸಲು ಈ ಏರ್‌ಬೇಸ್‌ ಸ್ಥಾಪಿಸಲಾಗಿದೆ.

5. ಚಕ್ಲಾಲಾ ವಾಯನೆಲೆ (Chaklala Air Field)ರಾವಲ್ಪಿಂಡಿಯ ಚಕ್ಲಲಾದಲ್ಲಿರುವ ಈ ವಾಯುನೆಲೆ ಈ ಹಿಂದೆ PAF ಬೇಸ್‌ ಎಂದೇ ಕರೆಯಲಾಗುತ್ತಿತ್ತು. ಇದು ಪಾಕಿಸ್ತಾನದ ಏರ್‌ಮೊಬಿಲಿಟಿ ಕಮಾಂಡ್‌ನ ಮುಖ್ಯ ಕೇಂದ್ರವಾಗಿದೆ. ಒಂದು ರೀತಿಯಲ್ಲಿ ಪಾಕಿಸ್ತಾನದ ವೈಮಾನಿಕ ಶಕ್ತಿಯ ಮುಖ್ಯನಾಡಿಯಾಗಿದೆ.

6.ಸುಕ್ಕೂರ್ ಏರ್‌ಫೀಲ್ಡ್ ( Sukkur Airfield)ಸಿಂಧ್‌ ಪ್ರಾಂತ್ಯದಲ್ಲಿರುವ ಏರ್‌ಬೇಸ್‌. ಈ ಅತ್ಯಾಧುನಿಕ ಏರ್‌ಬೇಸ್‌ ಅನ್ನು ಇತ್ತೀಚೆಗಷ್ಟೇ ಉದ್ಘಾಟಿಸಲಾಗಿದ್ದು, ಎಫ್‌-16ಎ, 15ಎಡಿಎಫ್‌ ವಿಮಾನಗಳನ್ನು ಇಲ್ಲಿ ನೆಲೆಗೊಳಿಸಲಾಗಿದೆ.

Air Marshal AK Bharti
ಭಾರತದ ದಾಳಿಯಲ್ಲಿ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಗೆ ಹಾನಿ: Satellite image!

7. ಭೋಲಾರಿ ಏರ್ ಫೀಲ್ಡ್ (Bholari Airfield)ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಮ್‌ಶೋರೊ ಜಿಲ್ಲೆಯ ಭೋಲಾರಿ ಪಟ್ಟಣದ ಸಮೀಪವಿರುವ ಪಾಕಿಸ್ತಾನ್ ವಾಯುನೆಲೆಯಾಗಿದೆ.

8.ಜಾಕೋಬಾಬಾದ್ ಏರ್‌ಫೀಲ್ಡ್ (Jacobabad Airfield)ಇದು ಕರಾಚಿಯಿಂದ ಈಶಾನ್ಯಕ್ಕೆ ಸರಿಸುಮಾರು 500 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಸಿಂಧ್‌ನ ಜಾಕೋಬಾಬಾದ್‌ನಲ್ಲಿರುವ ಹಾಬಾಜ್ ವಾಯುನೆಲೆಯಾಗಿದೆ

ಭಾರತವು ಯಾವುದೇ ಎದುರಾಳಿ ವ್ಯವಸ್ಥೆಯನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಆದರೆ ಸಂಯಮದಿಂದ ಕಾರ್ಯನಿರ್ವಹಿಸುತ್ತದೆ ಎಂದು DGMO ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com