ಪಾಕಿಸ್ತಾನ ಕದನವಿರಾಮ ಉಲ್ಲಂಘನೆ: ಜಮ್ಮು-ಕಾಶ್ಮೀರ, ಪಂಜಾಬ್ ನಲ್ಲಿ ಪರಿಸ್ಥಿತಿ ಶಾಂತ, ಅಮೃತಸರದಲ್ಲಿ ಬಿಗಿಭದ್ರತೆ

ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮವನ್ನು ಆಚರಿಸಲು ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದದ ನಂತರ ಶಾಂತ ಸ್ಥಿತಿ ನಿರ್ಮಾಣವಾಯಿತು.
Officials confirmed that "there was no ceasefire violation reported from any sector along the Line of Control (LoC) in Kashmir after 11 PM on Saturday."
ಕಾಶ್ಮೀರದ ನಿಯಂತ್ರಣ ರೇಖೆಯ (LoC) ಯಾವುದೇ ವಲಯದಿಂದ ಕದನ ವಿರಾಮ ಉಲ್ಲಂಘನೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
Updated on

ಸುಮಾರು ಒಂದು ವಾರದ ತೀವ್ರ ಕದನ ನಂತರ, ಕಳೆದ ರಾತ್ರಿ ಕಾಶ್ಮೀರ ಕಣಿವೆ ಸಾಮಾನ್ಯ ಸ್ಥಿತಿಗೆ ಮರಳಿದೆ. ಆರು ದಿನಗಳಲ್ಲಿ ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಶಬ್ದ, ಸಪ್ಪಳ ಕೇಳಿಸಿದ್ದ ಕಣಿವೆ ರಾಜ್ಯದ ನಿವಾಸಿಗಳು ಮೊದಲ ರಾತ್ರಿಯನ್ನು ಶಾಂತವಾಗಿ ಕಳೆದರು.

ನಿನ್ನೆ ರಾತ್ರಿ 11 ಗಂಟೆ ನಂತರ ಕಾಶ್ಮೀರದ ನಿಯಂತ್ರಣ ರೇಖೆಯ (LoC) ಯಾವುದೇ ವಲಯದಿಂದ ಕದನ ವಿರಾಮ ಉಲ್ಲಂಘನೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದರು. ಜಮ್ಮು ಪ್ರದೇಶದಾದ್ಯಂತ ರಾತ್ರಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇದರಲ್ಲಿ ಪೂಂಚ್ ಮತ್ತು ರಾಜೌರಿ ಸೇರಿದಂತೆ ಹೆಚ್ಚು ಹಾನಿಗೊಳಗಾದ ಗಡಿ ಜಿಲ್ಲೆಗಳು ಸೇರಿವೆ, ಇಂದು ಬೆಳಗ್ಗೆ ಜನರು ತಮ್ಮ ಎಂದಿನ ಚಟುವಟಿಕೆ ಪುನರಾರಂಭಿಸಿದರು.

ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮವನ್ನು ಆಚರಿಸಲು ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದದ ನಂತರ ಶಾಂತ ಸ್ಥಿತಿ ನಿರ್ಮಾಣವಾಯಿತು. ನಿನ್ನೆ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಒಪ್ಪಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಘೋಷಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿಕೆ ನೀಡಿದ ಸ್ವಲ್ಪ ಸಮಯದ ನಂತರ ಈ ಘೋಷಣೆ ಹೊರಬಿದ್ದಿದೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸಶಸ್ತ್ರ ಪಡೆಗಳು ಕಳೆದ ವಾರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ತೀವ್ರವಾಗಿ ಹೆಚ್ಚಿತ್ತು. ಈ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು.

Officials confirmed that "there was no ceasefire violation reported from any sector along the Line of Control (LoC) in Kashmir after 11 PM on Saturday."
ಕದನವಿರಾಮ ಒಪ್ಪಿಕೊಂಡ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಉಲ್ಲಂಘಿಸಿದ್ದು ಹೇಗೆ? ಇದು ಏನು ಸಂದೇಶ ಸಾರುತ್ತದೆ?

ಮೇ 7 ರಂದು ಪ್ರಾರಂಭವಾದ ಪ್ರತೀಕಾರ ಮತ್ತು ಗಡಿಯಾಚೆಗಿನ ಘರ್ಷಣೆಯಲ್ಲಿ, ಪಾಕಿಸ್ತಾನದ ಕಡೆಯಿಂದ ತೀವ್ರವಾದ ಶೆಲ್ ದಾಳಿ ಮತ್ತು ಡ್ರೋನ್ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 27 ಜನರು ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.

ಕದನ ವಿರಾಮ ಒಪ್ಪಂದದ ಹೊರತಾಗಿಯೂ, ಶನಿವಾರ ಸಂಜೆ ಕಾಶ್ಮೀರ ಕಣಿವೆಯ ಮೇಲೆ ಒಪ್ಪಂದವನ್ನು ಉಲ್ಲಂಘಿಸಿ ಡಜನ್ಗಟ್ಟಲೆ ಡ್ರೋನ್‌ಗಳು ಹಾರುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಆದಾಗ್ಯೂ, ರಾತ್ರಿಯಿಡೀ ಯಾವುದೇ ಡ್ರೋನ್ ಚಟುವಟಿಕೆ ವರದಿಯಾಗಿಲ್ಲ.

ಇಂದು ಬೆಳಗ್ಗೆ ಪಂಜಾಬ್‌ನಾದ್ಯಂತ, ವಿಶೇಷವಾಗಿ ಕದನ ವಿರಾಮ ಘೋಷಣೆಯ ನಂತರ ಗಡಿ ಪ್ರದೇಶಗಳಲ್ಲಿ ಶಾಂತತೆ ನೆಲೆಸಿತ್ತು. ಪಾಕಿಸ್ತಾನದೊಂದಿಗೆ 553 ಕಿಮೀ ಗಡಿಯನ್ನು ಹಂಚಿಕೊಳ್ಳುವ ಪಂಜಾಬ್, ಅಮೃತಸರ, ಪಠಾಣ್‌ಕೋಟ್ ಮತ್ತು ಫಿರೋಜ್‌ಪುರದಂತಹ ಗಡಿ ಜಿಲ್ಲೆಗಳಲ್ಲಿ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com