
ಜೈಪುರ: ರಾಜಸ್ಥಾನ ಹಾಗೂ ಪಂಜಾಬಿನ ಗಡಿ ಪ್ರದೇಶಗಳಲ್ಲಿ ಭಾನುವಾರ ರಾತ್ರಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಬ್ಲ್ಯಾಕ್ ಔಟ್ ಮಾಡಲಾಯಿತು.
ಭಾರತ- ಪಾಕಿಸ್ತಾನ ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಶನಿವಾರ ರಾತ್ರಿಯೂ ಪಾಕಿಸ್ತಾನ ದಾಳಿ ನಡೆಸಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ರಾತ್ರಿ ರಾಜಸ್ಥಾನದ ಬಾರ್ಮರ್ ನಲ್ಲಿ ರಾತ್ರಿ 8-45 ರಲ್ಲಿ ಬ್ಲ್ಯಾಕ್ ಔಟ್ ಮಾಡಲಾಯಿತು.
ಜೈಸಲ್ಮೇರ್ ನಲ್ಲಿ ರಾತ್ರಿ 7-30 ರಿಂದ ಹಾಗೂ ಬಾಡಮೇರ್ ನಲ್ಲಿ ರಾತ್ರಿ 8 ರಿಂದ ಕತ್ತಲು ಆವರಿಸಿತ್ತು.
ಬಾಡಮೇರ್ ಪ್ರದೇಶದಲ್ಲಿ ಕೆಂಪು ಬಣ್ಣದ ವಸ್ತುವೊಂದು ಗೋಚರಿಸಿದ್ದು, ಅದು ಡ್ರೋನ್ ಇರಬಹುದು ಎಂದು ಅನುಮಾನ ವ್ಯಕ್ತವಾಯಿತು. ಆದರೆ ಅದನ್ನು ಯಾರೂ ದೃಢಪಡಿಸಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಪಂಜಾಬಿನ ಪಠಾಣ್ ಕೋಟ್ ಮತ್ತು ಹೋಶಿಯಾರ್ಪುರ್ ದಲ್ಲಿಯೂ ರಾತ್ರಿ 9 ರಿಂದ ಕತ್ತಲು ಆವರಿಸಿತು. ಸೈರನ್ ಸದ್ದು ಕೂಡಾ ಕೇಳಿಬಂದಿತು.
Advertisement