ಭಾರತ-ಪಾಕ್ ನಾಯಕರು ಬುದ್ಧಿವಂತಿಕೆ ತೋರಿಸಿದ್ದಾರೆ, ವ್ಯಾಪಾರ-ವಹಿವಾಟು ಹೆಚ್ಚಿಸುತ್ತೇವೆ: ಡೊನಾಲ್ಡ್ ಟ್ರಂಪ್

ಪಾಕಿಸ್ತಾನವು ಕದನ ವಿರಾಮವನ್ನು ತೀವ್ರವಾಗಿ ಉಲ್ಲಂಘಿಸುತ್ತಿದೆ ಎಂದು ಭಾರತ ಆರೋಪಿಸಿದ ನಂತರ ಟ್ರಂಪ್ ಅವರ ಈ ಹೇಳಿಕೆ ಬಂದಿದೆ.
Donald Trump and Narendra Modi(File photo)
ಶ್ವೇತಭವನದಲ್ಲಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್(ಸಂಗ್ರಹ ಚಿತ್ರ)
Updated on

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಸಹಾಯ ಮಾಡಲು ತಯಾರಿರುವುದಾಗಿಯೂ ಹೇಳಿದ್ದಾರೆ.

ಪಾಕಿಸ್ತಾನವು ಕದನ ವಿರಾಮವನ್ನು ತೀವ್ರವಾಗಿ ಉಲ್ಲಂಘಿಸುತ್ತಿದೆ ಎಂದು ಭಾರತ ಆರೋಪಿಸಿದ ನಂತರ ಟ್ರಂಪ್ ಅವರ ಈ ಹೇಳಿಕೆ ಬಂದಿದೆ. ಕದನವಿರಾಮ ನಿನ್ನೆ ಶನಿವಾರ ಸಂಜೆ 5 ಗಂಟೆಯಿಂದ ಜಾರಿಗೆ ಬಂದಿದೆ.

ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ 'ಟ್ರುತ್ ಸೋಷಿಯಲ್' ಮೂಲಕ ಹೊಸ ಪೋಸ್ಟ್‌ನಲ್ಲಿ, ಟ್ರಂಪ್ ಅವರು ಪ್ರಸ್ತುತ ಆಕ್ರಮಣವನ್ನು ನಿಲ್ಲಿಸುವ ಸಮಯ ಎಂದು ಅರ್ಥಮಾಡಿಕೊಂಡಿದ್ದಕ್ಕಾಗಿ ಭಾರತ ಮತ್ತು ಪಾಕಿಸ್ತಾನ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಧೈರ್ಯಶಾಲಿ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಶ್ಲಾಘಿಸಿದ್ದಾರೆ.

Donald Trump and Narendra Modi(File photo)
ಈ ಕ್ಷಣದಿಂದಲೇ ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಸಮ್ಮತಿ ಸೂಚಿಸಿವೆ: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್!

ಹಲವರ ಸಾವು ಮತ್ತು ವಿನಾಶಕ್ಕೆ ಕಾರಣವಾಗಬಹುದಾದ ಪ್ರಸ್ತುತ ಆಕ್ರಮಣವನ್ನು ನಿಲ್ಲಿಸುವ ಸಮಯ ಬಂದಿದೆ ಎಂದು ಸಂಪೂರ್ಣವಾಗಿ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಭಾರತ ಮತ್ತು ಪಾಕಿಸ್ತಾನದ ಬಲವಾದ ಮತ್ತು ಅಚಲವಾದ ಶಕ್ತಿಶಾಲಿ ನಾಯಕತ್ವದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಲಕ್ಷಾಂತರ ಮುಗ್ಧ ಜನರು ಸಾಯಬಹುದಿತ್ತು! ನಿಮ್ಮ ಧೈರ್ಯಶಾಲಿ ಕ್ರಮಗಳಿಂದ ನಿಮ್ಮ ಪರಂಪರೆ ಬಹಳವಾಗಿ ವೃದ್ಧಿಯಾಗಿದೆ" ಎಂದು ಟ್ರಂಪ್ ಬರೆದಿದ್ದಾರೆ.

ಮಧ್ಯಸ್ಥಿಕೆ ವಹಿಸುವಲ್ಲಿ ಅಮೆರಿಕದ ಪಾತ್ರವನ್ನು ಉಲ್ಲೇಖಿಸಿದ ಟ್ರಂಪ್, ನಮ್ಮ ಆಡಳಿತವು ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಸುಂಕಗಳನ್ನು ವಿಧಿಸುತ್ತಲೇ ಇದ್ದರೂ, ಎರಡೂ ದೇಶಗಳೊಂದಿಗೆ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com