
ರಜೌರಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ 9,500 ಬಂಕರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅಟಲ್ ಡುಲ್ಲೋ ಹೇಳಿದ್ದಾರೆ.
ಮಂಗಳವಾರ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶೆಲ್ ದಾಳಿಗೆ ಒಳಗಾದ ಜನರನ್ನು ಭೇಟಿಯಾದ ಅವರು, ಗಡಿ ನಿವಾಸಿಗಳ ಸುರಕ್ಷತೆಗಾಗಿ ಹೆಚ್ಚಿನ ಬಂಕರ್‌ಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಪಾಕಿಸ್ತಾನವು ನಾಗರಿಕ ಪ್ರದೇಶಗಳಲ್ಲಿ ಶೆಲ್ ದಾಳಿ ನಡೆಸಿದ್ದು, ಜಾನುವಾರು ಮತ್ತು ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿದೆ. ಗಡಿರೇಖೆಯುದ್ದಕ್ಕೂ ಇನ್ನೂ ಹೆಚ್ಚಿನ ಬಂಕರ್‌ಗಳ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.
ಜಮ್ಮು-ಕಾಶ್ಮೀರದ ಗಡಿರೇಖೆಯ ಉದ್ದಕ್ಕೂ 9,500 ಬಂಕರ್‌ಗಳಿವೆ.ಇನ್ನೂ ಹೆಚ್ಚಿನ ಬಂಕರ್ ಗಳ ಸ್ಥಾಪನೆಗೆ ಬೇಡಿಕೆಯಿದ್ದು, ಬಂಕರ್‌ಗಳ ಕೊರತೆಯಾಗುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚಿನ ಗಡಿಯಾಚೆಗಿನ ಶೆಲ್ ದಾಳಿಯಿಂದಾಗಿ ಕೆಲವು ಮನೆಗಳಿಗೆ ಹಾನಿಯಾಗಿರುವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಇರುವ ನೌಶೇರಾ ತಹಸಿಲ್‌ನಲ್ಲಿರುವ ಕಲ್ಸಿಯನ್ ಪಂಚಾಯತ್‌ಗೆ ಮುಖ್ಯ ಕಾರ್ಯದರ್ಶಿ ಭೇಟಿ ನೀಡಿದರು.
ನೆಲದ ಪರಿಸ್ಥಿತಿಯನ್ನು ನಿರ್ಣಯಿಸಲು ರಾಜೌರಿ ಮತ್ತು ನೌಶೇರಾ ಸೆಕ್ಟರ್‌ಗಳಿಗೆ ಬಂದಿದ್ದೇನೆ. ಗಡಿಯಾಚೆಯಿಂದ ನಡೆದ ಶೆಲ್ ದಾಳಿಯು ನಾಗರಿಕ ಪ್ರದೇಶಗಳಿಗೆ ಅಪ್ಪಳಿಸಿರುವುದಾಗಿ ಅವರು ಹೇಳಿದರು.
Advertisement