ಭಾರತೀಯ ಸೇನೆಯ ಏಟಿಗೆ ಪಾಕ್ ವಾಯುನೆಲೆಗಳು ಉಡೀಸ್! ವ್ಯಾಪಕ ಹಾನಿ ತೋರಿಸುವ high-quality Satellite pics!

ಕಾಲು ಕೆರೆದು ಜಗಳಕ್ಕೆ ಬರಬಾರದು ಅಂತಹ ಭಾರಿ ಹೊಡೆತವನ್ನೇ ನೀಡಲಾಗಿದೆ. ಭಾರತೀಯ ಸೇನೆಯ ಏಟಿಗೆ ಪಾಕ್ ವಾಯುನೆಲೆಗಳು, ರಕ್ಷಣಾ ಘಟಕಗಳು ಉಡೀಸ್ ಆಗಿದ್ದು, ವ್ಯಾಪಕವಾದ ಹಾನಿಯಾಗಿದೆ.
NUR KHAN AIR BASE
ನೂರ್ ಖಾನ್ ಏರ್ ಬೇಸ್

ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ operation sindoor ಹೆಸರಿನಲ್ಲಿ ಭಾರತೀಯ ಸೇನಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮುಂದೆಂದೂ ಭಾರತದ ಪರ

ಕಾಲು ಕೆರೆದು ಜಗಳಕ್ಕೆ ಬರಬಾರದು ಅಂತಹ ಭಾರಿ ಹೊಡೆತವನ್ನೇ ನೀಡಲಾಗಿದೆ. ಭಾರತೀಯ ಸೇನೆಯ ಏಟಿಗೆ ಪಾಕ್ ವಾಯುನೆಲೆಗಳು, ರಕ್ಷಣಾ ಘಟಕಗಳು ಉಡೀಸ್ ಆಗಿದ್ದು, ವ್ಯಾಪಕವಾದ ಹಾನಿಯಾಗಿದೆ. ಈ ಹಾನಿಯನ್ನು ತೋರಿಸುವ ಇತ್ತೀಚಿನ ಅತ್ಯುತ್ತಮ ಗುಣಮಟ್ಟದ ಉಪ ಗ್ರಹ ಚಿತ್ರಗಳನ್ನು ಖಾಸಗಿ ಸ್ಯಾಟಲೈಟ್ ಕಂಪನಿ ಮಾಕ್ಸರ್ ಬಿಡುಗಡೆ ಮಾಡಿದೆ.

ಸುಕ್ಕೂರ್ ವಾಯುನೆಲೆ

ಪಾಕಿಸ್ತಾನದ ವಾಯುಪಡೆಯ ಮುಂಚೂಣಿ ಕಾರ್ಯಾಚರಣಾ ನೆಲೆಯಾಗಿದೆ. ಇದು ಬೇಗಂ ನುಸ್ರತ್ ಭುಟ್ಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಸಿಂಧ್‌ನ ಎರಡನೇ ಪ್ರಮುಖ ನಾಗರಿಕ ವಿಮಾನ ನಿಲ್ದಾಣವಾಗಿದೆ. ಈಗ ಬಿಡುಗಡೆಯಾಗಿರುವ ಮೊದಲ ಸ್ಯಾಟ ಲೈಟ್ ಚಿತ್ರದಲ್ಲಿ ಭಾರತದ ದಾಳಿಗೂ ಮುನ್ನಾ ಇದ್ದ ವಾಯುನೆಲೆ ತೋರಿಸಲಾಗಿದೆ. ಎರಡನೇ ಫೋಟೋದಲ್ಲಿ ಭಾರತದ ದಾಳಿ ನಂತರದ ವಾಯುನೆಲೆಯನ್ನು ಸ್ಪಷ್ಟವಾಗಿ ತೋರಿಸಲಾಗಿದೆ.

ನೂರ್ ಖಾನ್ ಏರ್ ಬೇಸ್

ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನೆಯ ಪ್ರಧಾನ ಕಛೇರಿಯಿಂದ (ಜನರಲ್ ಹೆಡ್‌ಕ್ವಾರ್ಟರ್ಸ್, GHQ) 10 ಕಿಮೀ ದೂರದಲ್ಲಿದೆ. ಇದು ಪಾಕಿಸ್ತಾನದ ವಾಯುನೆಲೆಗಳಲ್ಲಿ ಅತ್ಯಂತ ಪ್ರಮುಖವಾಗಿದೆ ಮತ್ತು ಪಾಕಿಸ್ತಾನದ ಪ್ರಮುಖ ವಿಮಾನ ಸಂಚಾರದ ನೆಲೆಯಾಗಿದೆ ಮತ್ತು ಇದನ್ನು ಲಾಜಿಸ್ಟಿಕಲ್ ಮತ್ತು ಕಾರ್ಯತಂತ್ರದ ಏರ್‌ಲಿಫ್ಟ್ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. C-130 ಹರ್ಕ್ಯುಲಸ್ ಮತ್ತು ಸಾಬ್ 2000 ರಂತಹ ಸಾರಿಗೆ ವಿಮಾನಗಳು, ಮತ್ತು VIP ಕರೆದೊಯ್ಯುವ ವಿಮಾನದ ಜೊತೆಗೆ ಹಾರಾಟದ ಮಧ್ಯ ಇಂಧನ ತುಂಬಿಸುವ IL-78 ವಿಮಾನವೂ ಇದೆ. ಇದರಲ್ಲಿಯೂ ಮೊದಲ ಫೋಟೋದಲ್ಲಿ ಭಾರತದ ದಾಳಿಗೂ ಮುನ್ನಾ ಇದ್ದ ವಾಯುನೆಲೆ ತೋರಿಸಿದ್ದರೆ 2ನೇ ಫೋಟೋದಲ್ಲಿ ದಾಳಿ ನಂತರದ ಹಾನಿಯನ್ನು ತೋರಿಸಲಾಗಿದೆ.

ಸರ್ಗೋಧಾ ಮುಶಾಫ್ ವಾಯುನೆಲೆ

ಭಾರತೀಯ ಕ್ಷಿಪಣಿ ದಾಳಿಯಿಂದ ಮುಶಾಫ್ ಏರ್‌ಬೇಸ್‌ನ ರನ್‌ವೇಯಲ್ಲಿ ಎರಡು ದೊಡ್ಡ ಕುಳಿಗಳಾಗಿವೆ. ಕೆಲವು ಸಾರಿಗೆ ವಾಹನಗಳಿಗೂ ಹಾನಿಯಾಗಿರುವುದನ್ನು ಕಾಣಬಹುದು.

ಭೋಲಾರಿ ವಾಯುನೆಲೆ

ಇದು ಸಿಂಧ್ ಪ್ರಾಂತ್ಯದ ಜಿಮ್ ಶೋರೋ ಜಿಲ್ಲೆಯಲ್ಲಿರುವ ವಾಯುನೆಲೆಯಾಗಿದೆ. ಈ ನೆಲೆಯು ಪಾಕಿಸ್ತಾನದ ದಕ್ಷಿಣ ವಾಯು ಕಾರ್ಯಾಚರಣೆಗಳಿಗೆ ನಿರ್ಣಾಯಕವಾಗಿರುವ ಅಮೆರಿಕ ನಿರ್ಮಿತ ಎಫ್-16 ಮತ್ತು ಚೀನೀ ಜೆಎಫ್ -17 ಫೈಟರ್ ಜೆಟ್‌ಗಳನ್ನು ಹೊಂದಿದೆ. ಮೊದಲ ಫೋಟೋದಲ್ಲಿ ದಾಳಿಗೂ ಮುನ್ನಾ ಇದ್ದ ವಾಯುನೆಲೆಯನ್ನು ತೋರಿಸಲಾಗಿದೆ.2ನೇ ಫೋಟೋದಲ್ಲಿ ಭಾರತದ ದಾಳಿ ನಂತರದ ಹಾನಿ ತೋರಿಸಲಾಗಿದೆ. ವಿಮಾನದ ಹ್ಯಾಂಗರ್ ಹಾನಿಯಾಗಿರುವುದನ್ನು ಸೂಚಿಸುತ್ತದೆ. ಭೋಲಾರಿ ವಾಯುನೆಲೆಯಲ್ಲಿ ಕೆಲವು ವಿಮಾನಗಳು ಹಾನಿಗೊಳಗಾದ ಸಾಧ್ಯತೆಯಿದೆ.

ಪಿಎಎಫ್ ಶಹಬಾಜ್, ಜಾಕೋಬಾಬಾದ್

ಇದು ರಾಜಸ್ಥಾನದ ಎದುರು ಉತ್ತರ ಸಿಂಧ್‌ನಲ್ಲಿದೆ. 1971 ರಲ್ಲಿ ನಿರ್ಣಾಯಕ ಮತ್ತು ಪಾಲಿಸಬೇಕಾದ ಯುದ್ಧದ ಸ್ಥಳವಾದ ಲೌಂಗೆವಾಲಾದಿಂದ ಸುಮಾರು 170 ಕಿಮೀ ಪಶ್ಚಿಮಕ್ಕೆ ಇದೆ. ಪಾಕಿಸ್ತಾನದ ವಾಯುಪಡೆಯ ಕೆಲವು ಅತ್ಯಾಧುನಿಕ ತಂತ್ರಜ್ಞಾನಗಳು, ಹೆಲಿಕಾಪ್ಟರ್ ಗಳು ಇಲ್ಲಿದ್ದು, ಭಾರತದ ದಾಳಿ ನಂತರದ ಆದ ಹಾನಿಯನ್ನು ಸ್ಟಾಟಲೈಟ್ ಚಿತ್ರಗಳು ತೋರಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com