ಬಿಜೆಪಿ ಭಾರತೀಯ ಸೇನೆಯನ್ನು ಮತಕ್ಕೆ ಬಳಸಿಕೊಳ್ಳುತ್ತಿದೆ: ಉತ್ತರಾಖಂಡ್ ಕಾಂಗ್ರೆಸ್ ಟೀಕೆ

ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುವ ಮತ್ತು ಸಂಪೂರ್ಣ ರಾಷ್ಟ್ರೀಯ ಬೆಂಬಲವನ್ನು ಪ್ರದರ್ಶಿಸುವ ಗುರಿಯನ್ನು ಮಾತ್ರ ಅಂತಹ ಯಾತ್ರೆಗಳು ಹೊಂದಿವೆ ಎಂದರು.
Suryakant Dhasmana
ಸೂರ್ಯಕಾಂತ್ ಧಸ್ಮಣ
Updated on

ಡೆಹ್ರಾಡೂನ್: ಆರಂಭದಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಸೇನೆಯನ್ನು ಶ್ಲಾಘಿಸಿದ್ದ ಕಾಂಗ್ರೆಸ್, ಇದೀಗ ಬಿಜೆಪಿ ಸರ್ಕಾರ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಉತ್ತರಾಖಂಡ್ ಕಾಂಗ್ರೆಸ್ ಟೀಕಿಸಿದೆ.

ಈ ವಿಷಯದ ಬಗ್ಗೆ ಮೂರು ದಿನಗಳ ಮೌನದ ನಂತರ ಪಕ್ಷದ ನಿಲುವು ಬದಲಾಗಿದೆ. ಆಪರೇಷನ್ ಸಿಂದೂರ್ ಹೆಸರಿನಲ್ಲಿ ಬಿಜೆಪಿಯ 'ತಿರಂಗ ಯಾತ್ರೆ'ಗೆ ಪ್ರತಿಕ್ರಿಯಿಸಿದ ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ್ ಧಸ್ಮಣ, ಗಡಿಯಲ್ಲಿ ಮತ್ತು ಗಡಿಯಾಚೆಗಿನ ಶತ್ರುಗಳ ವಿರುದ್ಧ ಸೇನೆಯು ಸಕ್ರಿಯವಾಗಿ ಹೋರಾಡುತ್ತಿದ್ದಾಗ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಮೊದಲು ದೇಶಾದ್ಯಂತ ತಿರಂಗ ಯಾತ್ರೆಗಳನ್ನು ನಡೆಸಿತ್ತು ಎಂದು ಹೇಳಿದ್ದಾರೆ.

ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುವ ಮತ್ತು ಸಂಪೂರ್ಣ ರಾಷ್ಟ್ರೀಯ ಬೆಂಬಲವನ್ನು ಪ್ರದರ್ಶಿಸುವ ಗುರಿಯನ್ನು ಮಾತ್ರ ಅಂತಹ ಯಾತ್ರೆಗಳು ಹೊಂದಿವೆ ಎಂದರು.

ರಾಜ್ಯ ರಾಜಧಾನಿ ಡೆಹ್ರಾಡೂನ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂತಹ ತಿರಂಗಾ ಜೈ ಹಿಂದ್ ಯಾತ್ರೆಗಳನ್ನು ನಡೆಸುವ ಮೂಲಕ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕರ್ತವ್ಯವನ್ನು ಪೂರೈಸಿದ್ದಾರೆ ಎಂದರು.

ಜನರ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಗೆ ಬಿಜೆಪಿ ಮತ್ತು ದೇಶದ ಪ್ರಧಾನ ಮಂತ್ರಿ ಉತ್ತರಿಸಬೇಕು: ಭಾರತದ ಭದ್ರತೆ, ಸ್ವರಕ್ಷಣೆ ಮತ್ತು ಸಾರ್ವಭೌಮತ್ವವನ್ನು ನಿರ್ಧರಿಸುವ ಹಕ್ಕನ್ನು ಅಮೆರಿಕಕ್ಕೆ ಯಾರು ನೀಡಿದರು ಎಂದು ಅವರು ಕೇಳಿದರು.

ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಘೋಷಣೆ, ಕಾಶ್ಮೀರ ವಿಷಯದ ಬಗ್ಗೆ ಮಧ್ಯಸ್ಥಿಕೆ ವಹಿಸಲು ಅವರು ತೋರಿಸುತ್ತಿರುವ ಒಲವನ್ನು ಪ್ರಶ್ನೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com