ಆನೆಗಳಿಗೆ ರೈಲು ಡಿಕ್ಕಿ ಹೊಡೆಯುವುದನ್ನು ತಡೆಯಲು AI ಬಳಕೆ

ಈ ವ್ಯವಸ್ಥೆಯು ಹಳಿಗಳ ಮೇಲೆ ಅಥವಾ ಹತ್ತಿರದಲ್ಲಿ ಆನೆಗಳ ಚಲನೆಯ ಬಗ್ಗೆ ಲೋಕೋ ಪೈಲಟ್‌ಗಳು, ಸ್ಟೇಷನ್ ಮಾಸ್ಟರ್‌ಗಳು ಮತ್ತು ನಿಯಂತ್ರಣ ಕೊಠಡಿಗೆ ಏಕಕಾಲದಲ್ಲಿ ಮಾಹಿತಿ ರವಾನಿಸುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತೀಯ ರೈಲ್ವೆ ಈಗ ವಿವಿಧ ಪ್ರದೇಶಗಳಲ್ಲಿ ರೈಲ್ವೆ ಹಳಿಗೆ ವನ್ಯಜೀವಿಗಳು, ವಿಶೇಷವಾಗಿ ಆನೆಗಳು ನುಗ್ಗುವುದನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ(AI) ಆಧಾರಿತ ಡಿಸ್ಟ್ರಿಬ್ಯೂಟೆಡ್ ಅಕೌಸ್ಟಿಕ್ ಸೆನ್ಸಿಂಗ್(DAS) ವ್ಯವಸ್ಥೆಯನ್ನು ಬಳಸುತ್ತಿದೆ.

ಈ ವ್ಯವಸ್ಥೆಯು ಹಳಿಗಳ ಮೇಲೆ ಅಥವಾ ಹತ್ತಿರದಲ್ಲಿ ಆನೆಗಳ ಚಲನೆಯ ಬಗ್ಗೆ ಲೋಕೋ ಪೈಲಟ್‌ಗಳು, ಸ್ಟೇಷನ್ ಮಾಸ್ಟರ್‌ಗಳು ಮತ್ತು ನಿಯಂತ್ರಣ ಕೊಠಡಿಗೆ ಏಕಕಾಲದಲ್ಲಿ ಮಾಹಿತಿ ರವಾನಿಸುತ್ತದೆ. ಈ ಮೂಲಕ ರೈಲು ಆನೆಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಪ್ರಸ್ತುತ, ರೈಲ್ವೆ ಸಚಿವಾಲಯದ ಅಧಿಕೃತ ಮೂಲದ ಪ್ರಕಾರ, ಈಶಾನ್ಯ ಗಡಿನಾಡು ರೈಲ್ವೆ ಅಡಿಯಲ್ಲಿ ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟ ನಿರ್ಣಾಯಕ ಮತ್ತು ದುರ್ಬಲ ಸ್ಥಳಗಳಲ್ಲಿ 141 ರೂಟ್ ಕಿಲೋಮೀಟರ್‌ಗಳಲ್ಲಿ DAS ಅನ್ನು ಅಳವಡಿಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ
ಹಳಿ ದಾಟುತ್ತಿದ್ದ ಆನೆಗಳಿಗೆ ಗೂಡ್ಸ್ ರೈಲು ಡಿಕ್ಕಿ: ಮರಿ ಸೇರಿ ಮೂರು ಆನೆಗಳ ಸಾವು

ಈ AI-ಆಧಾರಿತ DAS ತಂತ್ರಜ್ಞಾನದ ಪರಿಣಾಮವಾಗಿ, ರೈಲುಗಳ ಡಿಕ್ಕಿಯಿಂದ ಉಂಟಾದ ಆನೆಗಳ ಸಾವಿನ ಸಂಖ್ಯೆ 2013 ರಲ್ಲಿ 26 ರಿಂದ 2024 ರಲ್ಲಿ ಕೇವಲ 12 ಕ್ಕೆ ಇಳಿದಿದೆ ಎಂದು ಸಚಿವಾಲಯ ಗುರುವಾರ ತಿಳಿಸಿದೆ.

NFR, ECOR, SR, NR, SER, NER, WR ಮತ್ತು ECR ರೈಲ್ವೆ ವಲಯಗಳ ಅಡಿಯಲ್ಲಿ ಒಟ್ಟು 208 ಕೋಟಿ ರೂ. ವೆಚ್ಚದಲ್ಲಿ ಒಟ್ಟು 1,158 ಕಿಲೋಮೀಟರ್ ಉದ್ದವನ್ನು ಒಳಗೊಂಡಿರುವ ಗುರುತಿಸಲಾದ ಕಾರಿಡಾರ್‌ಗಳಿಗೆ ಈ AI-ಆಧಾರಿತ DAS ಅಳವಡಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com