'ಇಂಡಿಯಾ ಒಕ್ಕೂಟ'ದ ಭವಿಷ್ಯ ಉಜ್ವಲವಾಗಿಲ್ಲ; ಬಿಜೆಪಿಯಷ್ಟು ಬಲಿಷ್ಠ ರಾಜಕೀಯ ಪಕ್ಷ ಇನ್ನೊಂದಿಲ್ಲ! Video

ಇಂದಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ, ನನ್ನ ಅನುಭವದ ಪ್ರಕಾರ ಹೇಳುವುದಾದರೇ ಬಿಜೆಪಿ ಬಲಿಷ್ಠ ಸಂಘಟನೆಯಾಗಿದೆ ಎಂದು ಹೇಳುವುದರಲ್ಲಿ ನನಗೆ ಯಾವುದೇ ಹಿಂಜರಿಕೆ ಇಲ್ಲ.
Congress leader P. Chidambaram
ಪಿ. ಚಿದಂಬರಂ
Updated on

ದೆಹಲಿ: ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ಹಳಿತಪ್ಪಿರುವಂತೆ ಕಂಡು ಬರುತ್ತಿದೆ. ಅವುಗಳ ಮಧ್ಯೆ ಒಗ್ಗಟ್ಟಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಹಿರಿಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಿ ಚಿದಂಬರಂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಖುರ್ಷಿದ್ ಮತ್ತು ಮೃತ್ಯುಂಜಯ್ ಸಿಂಗ್ ಯಾದವ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿದಂಬರಂ, 2029ರ ಚುನಾವಣೆ ಇಂಡಿಯಾ ಮೈತ್ರಿಕೂಟಕ್ಕೆ ನಿರ್ಣಾಯಕವಾಗಲಿದೆ. ಸದ್ಯದ ಮಟ್ಟಿಗೆ ನಮ್ಮ ಮೈತ್ರಿಕೂಟವು ಒಡೆದಂತೆ ಕಾಣುತ್ತದೆ ಎಂದು ಚಿದಂಬರಂ ಅಭಿಪ್ರಾಯ ಪಟ್ಟಿದ್ದಾರೆ.

ಇಂದಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ, ನನ್ನ ಅನುಭವದ ಪ್ರಕಾರ ಹೇಳುವುದಾದರೇ ಬಿಜೆಪಿ ಬಲಿಷ್ಠ ಸಂಘಟನೆಯಾಗಿದೆ ಎಂದು ಹೇಳುವುದರಲ್ಲಿ ನನಗೆ ಯಾವುದೇ ಹಿಂಜರಿಕೆ ಇಲ್ಲ. ಅದೇ, ಇನ್ನೊಂದು ಕಡೆ ನಮ್ಮ ಮೈತ್ರಿಕೂಟ ಒಡೆದ ಮನೆಯಂತಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

ಮೃತ್ಯುಂಜಯ್ ಸಿಂಗ್ ಯಾದವ್ ಹೇಳಿದಂತೆ ಇಂಡಿಯಾ ಒಕ್ಕೂಟದ ಭವಿಷ್ಯವು ಅಷ್ಟೊಂದು ಉಜ್ವಲವಾಗಿಲ್ಲ. ಮೈತ್ರಿಕೂಟದಲ್ಲಿ ಇನ್ನೂ ಒಗ್ಗಟ್ಟು ಇದೆ ಎಂದು ಅವರು ಭಾವಿಸುತ್ತಿರುವಂತೆ ತೋರುತ್ತದೆ. ಆದರೆ ಆ ಬಗ್ಗೆ ನನಗೆ ಖಚಿತತೆ ಇಲ್ಲ. ಈ ಬಗ್ಗೆ ಸಲ್ಮಾನ್ ಖುರ್ಷಿದ್ ಅವರು ಮಾತ್ರ ಉತ್ತರಿಸಬಹುದು. ಏಕೆಂದರೆ ಸಲ್ಮಾನ್ ಅವರು ಇಂಡಿಯಾ ಒಕ್ಕೂಟದ ಮಾತುಕತೆ ನಡೆಸಿದ ತಂಡದ ಭಾಗವಾಗಿದ್ದರು.

ಚುನಾವಣಾ ಆಯೋಗದಿಂದ ಹಿಡಿದು ಪೊಲೀಸ್ ಠಾಣೆಯವರೆಗೆ ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಬಿಜೆಪಿಗಿದೆ, ಇದು ವಾಸ್ತವತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುಮತಿಸಬಹುದಾದ ಬಲಿಷ್ಠ ಯಂತ್ರವಿದು. ಸಲ್ಮಾನ್ ಖುರ್ಷಿದ್ ಮತ್ತು ಯಾದವ್ ಅವರ ಪುಸ್ತಕವು, ಕಾಂಗ್ರೆಸ್ ಪಾರ್ಟಿಯ ಪುನಶ್ಚೇತನದ ಬಗ್ಗೆ ಬೆಳಕು ಚೆಲ್ಲುತ್ತದೆ. ನಮ್ಮ ದೇಶದ ಏಕತೆ ಕಾಪಾಡಿಕೊಳ್ಳಲು ವಿರೋಧ ಪಕ್ಷಗಳು ಒಗ್ಗೂಡಿದ್ದವು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಪಿ.ಚಿದಂಬರಂ ಹೇಳಿದ್ದಾರೆ.

ಮೈತ್ರಿಕೂಟ ಸಂಪೂರ್ಣವಾಗಿ ಒಗ್ಗಟ್ಟಿನಿಂದ ಇದ್ದರೆ, ನಾನು ತುಂಬಾ ಸಂತೋಷಪಡುತ್ತೇನೆ. ಆದರೆ ಅಲ್ಲಿ ಒಗ್ಗಟ್ಟು ಇಲ್ಲ ಎಂಬುದು ಕ್ಷಣಾರ್ಧದಲ್ಲಿ ತಿಳಿದು ಬರುತ್ತದೆ ಎಂದು ಚಿದಂಬರಂ ಹೇಳಿದರು.

ಮೈತ್ರಿಕೂಟವನ್ನು ಒಟ್ಟಿಗೆ ಸೇರಿಸಬಹುದು, ಇನ್ನೂ ಅದಕ್ಕೆ ಸಮಯವಿದೆ. ಇಂಡಿಯಾ ಒಕ್ಕೂಟವು ಅಸಾಧಾರಣ ವ್ಯವಸ್ಥೆಯೊಂದರ ವಿರುದ್ಧ ಹೋರಾಡುತ್ತಿದೆ. ಅದನ್ನು ಎದುರಿಸಲು ಎಲ್ಲಾ ರಂಗಗಳಲ್ಲಿಯೂ ಹೋರಾಡಬೇಕು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವರೂ ಆದ ಪಿ. ಚಿದಂಬರಂ ಎಚ್ಚರಿಸಿದರು.

Congress leader P. Chidambaram
Watch | ನಾನು ಒಬ್ಬ ಹೆಮ್ಮೆಯ ಭಾರತೀಯನಾಗಿ ಅಪರೇಷನ್ ಸಿಂಧೂರ್ ಬಗ್ಗೆ ಹೇಳಿಕೆ ನೀಡಿದ್ದೇನೆ...

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com