
ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಯುಎಸ್ ಪಡೆಗಳ ಒಸಾಮಾ ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆ ಜೊತೆಗೆ ಆಪರೇಷನ್ ಸಿಂಧೂರ್ ವನ್ನು ಹೋಲಿಸಿದ್ದಾರೆ.
ಇಲ್ಲಿನ ಜೈಪುರಿಯ ಇನ್ಸಿಟಿಟ್ಯೂಟ್ ನಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಧಂಖರ್, ಪಾಕಿಸ್ತಾನದ ಒಂಬತ್ತು ಭಯೋತ್ಪಾದಕರ ನೆಲೆಗಳ ಮೇಲಿನ ದಾಳಿಯನ್ನು ಭಾರತದ ಗಮನಾರ್ಹವಾದ ಗಡಿಯಾಚೆಗಿನ ದಾಳಿ" ಎಂದು ವಿವರಿಸಿದರು. ಸೆಪ್ಟೆಂಬರ್ 11, 2001 ರಂದು ಅಮೆರಿಕದ ಭದ್ರತಾ ಪಡೆಗಳು ನಡೆಸಿದ ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಂಡರು.
ಸೆಪ್ಟೆಂಬರ್ 11ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಬಿನ್ ಲಾಡೆನ್ ನನ್ನು ಮೇ 2, 2011 ರಂದು ಅಮೆರಿಕದ ಭದ್ರತಾ ಪಡೆಗಳು ಯೋಜಿಸಿ ಹತ್ಯೆ ಮಾಡಿದ್ದವು. ಅದೇ ರೀತಿಯಲ್ಲಿ ಭಾರತ ಮಾಡಿದೆ. ಪ್ರಪಂಚಕ್ಕೆ ನವ ಭಾರತದ ಸಾಮರ್ಥ್ಯವನ್ನು ತೋರಿಸಿದೆ. ಶಾಂತಿಯ ಮನೋಭಾವವನ್ನು ಉಳಿಸಿಕೊಂಡು, ಭಯೋತ್ಪಾದನೆಯನ್ನು ಹೊಡೆದುರುಳಿಸುವುದು ಇದರ ಉದ್ದೇಶವಾಗಿತ್ತು ಎಂದರು.
ಮೊದಲ ಬಾರಿಗೆ, ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಭದ್ರಕೋಟೆಗಳ ಮೇಲೆ ಅಂತಾರಾಷ್ಟ್ರೀಯ ಗಡಿಯಾದ್ಯಂತ ದಾಳಿ ನಡೆಸಲಾಯಿತು. ದಾಳಿಗಳು ಎಷ್ಟು ನಿಖರವಾಗಿವೆ ಎಂದರೆ ಕೇವಲ ಭಯೋತ್ಪಾದಕರಿಗೆ ಮಾತ್ರ ಹಾನಿಯಾಗಿದೆ ಎಂದು ಅವರು ಹೇಳಿದರು
ಜಗತ್ತು ನಮ್ಮ ‘ಆಕಾಶ್’ಅದರ ಸಾಮರ್ಥ್ಯ, ಅದರ ಪರಿಣಾಮಕಾರಿತ್ವವನ್ನು ತಿಳಿದುಕೊಂಡಿದೆ. ನಮ್ಮ ‘ಬ್ರಹ್ಮೋಸ್’ಗುರುತಿಸಲು ಮುಂದಾಗಿದೆ. ಈ ದೇಶಕ್ಕೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಿಗೆ ಶೋಧನೆ ಮತ್ತು ಆಳವಾದ ಚಿಂತನೆಯ ಅಗತ್ಯವಿರುತ್ತದೆ ಎಂದು ತಿಳಿಸಿದರು.
Advertisement