"ನೀರು- ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ": ಪ್ರಧಾನಿ ಮೋದಿ ಭಾಷಣದ ಸಾಲನ್ನು ಜಾಹಿರಾತಿಗೆ ಬಳಸಿದ ಮೂತ್ರಶಾಸ್ತ್ರಜ್ಞನಿಗೆ ಈಗ ಪ್ಯಾಂಟ್ ಒದ್ದೆ!

"ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ" ಎಂಬ ಸಾಲನ್ನು ಶಿವೇಂದ್ರ ಸಿಂಗ್ ತಿವಾರಿ ತಮ್ಮ ಜಾಹಿರಾತಿಗೆ ಎರವಲು ಪಡೆದಿದ್ದರು.
PM Modi's Speech- doctor's advertisement
ಪ್ರಧಾನಿ ನರೇಂದ್ರ ಮೋದಿ ಭಾಷಣ- ವೈದ್ಯರ ಜಾಹಿರಾತು ಪೋಸ್ಟರ್online desk
Updated on

ರಾಯ್ಪುರ: ಆಪರೇಷನ್ ಸಿಂಧೂರ್ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಸಾಲನ್ನು ಬಳಸಿಕೊಂಡು ತಮ್ಮ ವೃತ್ತಿಪರ ಸೇವೆಗಳನ್ನು ಪ್ರಚಾರ ಮಾಡಲು ಪ್ರಯತ್ನಿಸಿದ ಭಿಲಾಯಿ ಮೂಲದ ಮೂತ್ರಶಾಸ್ತ್ರಜ್ಞರೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಕೃತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ಶ್ರೀ ಶಂಕರಾಚಾರ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಶಿವೇಂದ್ರ ಸಿಂಗ್ ತಿವಾರಿ ಅವರನ್ನು ಶಿಸ್ತು ಕ್ರಮದ ಆಧಾರದ ಮೇಲೆ 15 ದಿನಗಳ ಕಾಲ ಅಮಾನತುಗೊಳಿಸಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಆಡಳಿತ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಪ್ರಧಾನಿ ಮೋದಿ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸುಳಿವು ನೀಡಲು ಬಳಸಿದ್ದ "ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ" ಎಂಬ ಸಾಲನ್ನು ಶಿವೇಂದ್ರ ಸಿಂಗ್ ತಿವಾರಿ ಎರವಲು ಪಡೆದಿದ್ದರು.

ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಒಪ್ಪಂದವನ್ನು ಸ್ಥಗಿತಗೊಳಿಸಲಾಯಿತು. ತರುವಾಯ ಭಾರತ ಪಿಒಕೆ ಮತ್ತು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ದಾಳಿಗಳನ್ನು ನಡೆಸಿತು.

ವೈದ್ಯರು ಮತ್ತಷ್ಟು ಹೇಳಿದರು, "ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ" ಆದ್ದರಿಂದ ನೀವು ನಿಮ್ಮ ಮೂತ್ರದಲ್ಲಿ ರಕ್ತವನ್ನು ನೋಡಿದರೆ, ತಕ್ಷಣ ಮೂತ್ರಶಾಸ್ತ್ರಜ್ಞರನ್ನು ಸಂಪರ್ಕಿಸಿ. ಅದು ಗಂಭೀರವಾಗಿರಬಹುದು." ಎಂಬ ಜಾಹಿರಾತು ಪ್ರಕಟಿಸಿದ್ದರು.

ರೋಗಿಗಳಿಗೆ ವೃತ್ತಿಪರ ಆರೈಕೆಯನ್ನು ಒದಗಿಸಲು ಮತ್ತು ದೊಡ್ಡ ಸಾರ್ವಜನಿಕ ಆರೋಗ್ಯ ಉದ್ದೇಶಗಳಿಗಾಗಿ ಸೇವೆ ಸಲ್ಲಿಸಲು ವೈದ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಬಹುದು ಆದರೆ ಸ್ವಯಂ ಪ್ರಚಾರಕ್ಕಾಗಿ ಅದೇ ಸಾಧನವನ್ನು ಬಳಸುವುದು ನ್ಯಾಯಸಮ್ಮತವಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

PM Modi's Speech- doctor's advertisement
'ಇಡೀ ದೇಶ, ಸೇನೆ ಮತ್ತು ಯೋಧರು ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸುತ್ತಾರೆ': ಮಧ್ಯಪ್ರದೇಶ DCM ಜಗದೀಶ್ ದೇವ್ಡಾ ಹೇಳಿಕೆ, Video!

ಏತನ್ಮಧ್ಯೆ, ಸಂಸ್ಥೆಯ ಡೀನ್ ಅಧಿಕೃತ ಆದೇಶವನ್ನು ಹೊರಡಿಸಿದ್ದು, "ವಾಟ್ಸಾಪ್, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ನಿಮ್ಮ ಜಾಹೀರಾತು ಅನಗತ್ಯ ಮತ್ತು ಜವಾಬ್ದಾರಿಯುತ ವೈದ್ಯಕೀಯ ಸಿಬ್ಬಂದಿಯಾಗಿ ನಿಮ್ಮ ಕಡೆಯಿಂದ ಅವಮಾನಕರವಾಗಿದೆ. ಆದ್ದರಿಂದ ಆಡಳಿತ ಮಂಡಳಿಯು ನಿಮ್ಮ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ನಿಮ್ಮನ್ನು 15 ದಿನಗಳ ಅವಧಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ" ಎಂದು ಹೇಳಿದ್ದಾರೆ. ಅಮಾನತುಗೊಂಡಿರುವ ಬಗ್ಗೆ ಡಾ. ತಿವಾರಿ ಅವರು ಪ್ರತಿಕ್ರಿಯೆಗೆ ಲಭ್ಯವಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com