ಗೋಲ್ಡನ್ ಟೆಂಪಲ್ ಗುರಿಯಾಗಿಸಿ ಪಾಕ್ ಕ್ಷಿಪಣಿ, ಡ್ರೋನ್ ದಾಳಿ! ಹೊಡೆದುರುಳಿಸಿದ್ದು ಹೇಗೆ? ಭಾರತೀಯ ಸೇನೆಯ ಪ್ರಾತ್ಯಕ್ಷಿಕೆ! Video

ಸೇನಾ ವಾಯು ರಕ್ಷಣಾ ಗನ್ನರ್‌ಗಳು ಗೋಲ್ಡನ್ ಟೆಂಪಲ್ ಗುರಿಯಾಗಿಸಿಕೊಂಡಿದ್ದ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದವು ಎಂದು15 ನೇ ಪದಾತಿ ದಳ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಸೋಮವಾರ ಬಹಿರಂಗಪಡಿಸಿದ್ದಾರೆ.
Golden Temple
ಗೋಲ್ಡನ್ ಟೆಂಪಲ್
Updated on

ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಡಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಒಂಬತ್ತು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಬಳಿಕ ಪಾಕಿಸ್ತಾನ ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್ ಅನ್ನು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಗುರಿಯನ್ನಾಗಿಸಿಕೊಂಡಿತ್ತು.

ಸೇನಾ ವಾಯು ರಕ್ಷಣಾ ಗನ್ನರ್‌ಗಳು ಗೋಲ್ಡನ್ ಟೆಂಪಲ್ ಗುರಿಯಾಗಿಸಿಕೊಂಡಿದ್ದ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದವು ಎಂದು15 ನೇ ಪದಾತಿ ದಳ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಸೋಮವಾರ ಬಹಿರಂಗಪಡಿಸಿದ್ದಾರೆ.

ಗೋಲ್ಡನ್ ಟೆಂಪಲ್‌ನಂತಹ ಧಾರ್ಮಿಕ ಸ್ಥಳಗಳು ಸೇರಿದಂತೆ ನಾಗರಿಕ ಹಾಗೂ ಮಿಲಿಟರಿ ಕಟ್ಟಡಗಳನ್ನು ಗುರಿಯಾಗಿಸುವ ಪಾಕಿಸ್ತಾನದ ನಡೆಯನ್ನು ಭಾರತೀಯ ಸೇನೆಯು ನಿರೀಕ್ಷಿಸಿತ್ತು. ಇವುಗಳಲ್ಲಿ ಗೋಲ್ಡನ್ ಟೆಂಪಲ್ ಪ್ರಮುಖವಾಗಿತ್ತು. ಗೋಲ್ಡನ್ ಟೆಂಪಲ್ ರಕ್ಷಿಸಲು ಹೆಚ್ಚುವರಿ ಆಧುನಿಕ ವಾಯು ರಕ್ಷಣಾ ವ್ಯವಸ್ಥೆ ಮಾಡಲಾಗಿತ್ತು. ಪಾಕಿಸ್ತಾನ ಮೇ 8 ರಂದು ಮಾನವ ರಹಿತ ವೈಮಾನಿಕ ಡ್ರೋನ್ ಗಳು ಹಾಗೂ ಕ್ಷಿಪಣಿಗಳೊಂದಿಗೆ ಬೃಹತ್ ವಾಯುದಾಳಿ ನಡೆಸಿತು ನಾವು ಇದನ್ನು ನಿರೀಕ್ಷಿಸಿದ್ದರಿಂದ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವು ಎಂದು ಅವರು ತಿಳಿಸಿದರು.

ನಮ್ಮ ಸೇನಾ ವಾಯು ರಕ್ಷಣಾ ಗನ್ನರ್‌ಗಳು ಪಾಕಿಸ್ತಾನದ ಸೇನೆಯ ಹೀನಕೃತ್ಯವನ್ನು ವಿಫಲಗೊಳಿಸಿದವು. ಗೋಲ್ಡನ್ ಟೆಂಪಲ್ ಗುರಿಯಾಗಿಸಿಕೊಂಡ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದವು. ಹೀಗಾಗಿ ನಮ್ಮ ಪವಿತ್ರ ಗೋಲ್ಡನ್ ಟೆಂಪಲ್‌ಗೆ ಒಂದು ಗೀರು ಕೂಡ ಬರಲು ಅವಕಾಶ ನೀಡಲಿಲ್ಲ ಎಂದು ಅವರು ಹೇಳಿದರು.

ಆಕಾಶ್ ಕ್ಷಿಪಣಿ ವ್ಯವಸ್ಥೆ, ಎಲ್-70 ಏರ್ ಡಿಫೆನ್ಸ್ ಗನ್‌ಗಳು ಸೇರಿದಂತೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಗೋಲ್ಡನ್ ಟೆಂಪಲ್ ಮತ್ತು ಪಂಜಾಬ್ ನಗರಗಳನ್ನು ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ಹೇಗೆ ರಕ್ಷಿಸಿದವು ಎಂಬುದರ ಪ್ರಾತ್ಯಕ್ಷಿಕೆಯನ್ನು ಸೇನೆ ಸೋಮವಾರ ತೋರಿಸಿತು. ಇದಲ್ಲದೆ, ಸಿಂಧೂರ್ ಕಾರ್ಯಾಚರಣೆಯ ಸಮಯದಲ್ಲಿ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವು ಸ್ಥಳಗಳನ್ನು "ಸಂಪೂರ್ಣ ನಿಖರತೆ" ಯೊಂದಿಗೆ ದಾಳಿ ಮಾಡಿದವು. ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಛೇರಿಯನ್ನು ಹೊಂದಿರುವ ಮುರಿಡ್ಕೆ ಮತ್ತು ಬಹವಾಲ್‌ಪುರದಂತಹ ಪ್ರದೇಶಗಳನ್ನು ಹೊಡೆದವು ಎಂದು ಮೇಜರ್ ಜನರಲ್ ಹೇಳಿದರು.

ಭಾರತದ ಅನೇಕ ನಗರಗಳ ಮೇಲೆ ಪಾಕಿಸ್ತಾನ ಕ್ಷಿಪಣಿಗಳು ಮತ್ತು ಡ್ರೋನ್‌ ದಾಳಿ ನಡೆಸಿದಾಗ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ತಮ್ಮ ಪರಾಕ್ರಮವನ್ನು ಸಾಬೀತುಪಡಿಸಿದವು. ಭಾರತಕ್ಕೆ ಕನಿಷ್ಠ ಹಾನಿಯನ್ನುಂಟುಮಾಡಿತು. ಕದನ ವಿರಾಮವನ್ನು ಒಪ್ಪಿಕೊಳ್ಳುವ ಮೊದಲು ನಾಲ್ಕು ದಿನಗಳ ಕಾಲ ನಡೆದ ಸೇನಾ ಸಂಘರ್ಷದಲ್ಲಿ ವಾಯು ರಕ್ಷಣಾ ವ್ಯವಸ್ಥೆಯು ಹಲವಾರು ಡ್ರೋನ್‌ಗಳು, ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದರು.

Golden Temple
'ಸಿಂಧೂರ ಅಳಿಸಿದವರಿಗೆ ತಕ್ಕ ಪಾಠ, IAF ಭಾರತ ಹೆಮ್ಮೆಪಡುವಂತೆ ಮಾಡಿದೆ': ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಮೋದಿ; Video

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com