
ಅಮೃತಸರ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಖ್ಖರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ಆವರಣದಲ್ಲಿ air defence guns ಮತ್ತಿತರ ಯಾವುದೇ ವಾಯು ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿರಲಿಲ್ಲ ಎಂದು ಭಾರತೀಯ ಸೇನೆ ಮಂಗಳವಾರ ಹೇಳಿದೆ.
ಪಾಕಿಸ್ತಾನದಿಂದ ಸಂಭಾವ್ಯ ಡ್ರೋನ್ ಮತ್ತು ಕ್ಷಿಪಣಿ ಬೆದರಿಕೆಗಳನ್ನು ಎದುರಿಸಲು ದೇಗುಲದೊಳಗೆ air defence guns ಅಳವಡಿಕೆಗೆ ಗೋಲ್ಡನ್ ಟೆಂಪಲ್ ಆಡಳಿತವು ಸೇನೆಗೆ ಅನುಮತಿ ನೀಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ.
ಗೋಲ್ಡನ್ ಟೆಂಪಲ್‌ನಲ್ಲಿ ವಾಯು ರಕ್ಷಣಾ ಗನ್‌ಗಳ ಅಳವಡಿಕಿಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಶ್ರೀ ದರ್ಬಾರ್ ಸಾಹಿಬ್ ಅಮೃತಸರ (ಗೋಲ್ಡನ್ ಟೆಂಪಲ್) ಆವರಣದಲ್ಲಿ ಯಾವುದೇ AD ಗನ್ ಅಥವಾ ಯಾವುದೇ ವಾಯು ರಕ್ಷಣಾ ಸಂಪನ್ಮೂಲ ಅಳವಡಿಕೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೂ ಮುನ್ನಾ ದೇವಾಲಯ ಆವರಣದಲ್ಲಿ ಯಾವುದೇ ವಾಯು ರಕ್ಷಣಾ ಗನ್ ಅಳವಡಿಸಿಕೆ ಭಾರತೀಯ ಸೇನೆಗೆ ಅನುಮತಿ ನೀಡಿಲ್ಲ ಎಂದು ದೇವಾಲಯದ ಹೆಚ್ಚುವರಿ ಮುಖ್ಯ ಆರ್ಚಕರು ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಹೇಳಿತ್ತು. ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನತೆ ಸಂದರ್ಭದಲ್ಲಿ ಬ್ಲ್ಯಾಕ್ ಔಟ್ ವೇಳೆಯಲ್ಲಿ ಲೈಟ್ ಸ್ವಿಚ್ ಆಫ್ ಮಾಡಲು ಮಾತ್ರ ಹೇಳಲಾಗಿತ್ತು ಎಂದು SGPC ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಹೇಳಿದ್ದಾರೆ.
ದೇವಾಲಯ ಆವರಣದಲ್ಲಿ ಯಾವುದೇ ವಾಯು ರಕ್ಷಣ ಗನ್ ಅಳವಡಿಕೆಗೆ ಸಂಬಂಧಿಸಿದಂತೆ ಯಾವುದೇ ಸೇನೆ ಅಧಿಕಾರಿಗಳು ಸಂಪರ್ಕಿಸಿಲ್ಲ. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಧಾಮಿ ಒತ್ತಾಯಿಸಿದ್ದಾರೆ.
Advertisement