
ಮುಂಬೈ: ಪಾಕ್ ಪ್ರಯೋಜಿತ ಭಯೋತ್ಪಾದನೆ ವಿರುದ್ಧ ತನ್ನ ನಿಲುವನ್ನು ವಿವರಿಸಲು ವಿದೇಶಕ್ಕೆ ತೆರಳುತ್ತಿರುವ ಸರ್ವಪಕ್ಷ ನಿಯೋಗವನ್ನು ಬಹಿಷ್ಕರಿಸಲು ನಿನ್ನೆಯಷ್ಟೇ ಕರೆ ನೀಡಿದ್ದ ಶಿವಸೇನಾ ಯುಬಿಟಿ ಮಂಗಳವಾರ ಉಲ್ಟಾ ಹೊಡೆದಿದೆ.
ರಾಷ್ಟ್ರೀಯ ಹಿತಾಸಕ್ತಿಯಿಂದ ವಿದೇಶಕ್ಕೆ ತೆರಳಲಿರುವ ಭಾರತದ ಸರ್ವಪಕ್ಷ ನಿಯೋಗವನ್ನು ಬೆಂಬಲಿಸುವುದಾಗಿ ಹೇಳಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಉದ್ಧವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.
ಅವ್ಯವಸ್ಥೆ ಮತ್ತು ಅಸಮರ್ಪಕ ನಿರ್ವಹಣೆ ತಪ್ಪಿಸಲು ಈ ನಿಯೋಗಗಳ ಬಗ್ಗೆ ಪಕ್ಷಗಳಿಗೆ ತಿಳಿಸುವ 'ಶಿಷ್ಟಾಚಾರ'ವನ್ನು ಕೇಂದ್ರ ಸರ್ಕಾರ ಅನುಸರಿಸಬೇಕು ಎಂದು ಸೇನಾ-ಯುಬಿಟಿ ಹೇಳಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಶಿವಸೇನಾ- ಯುಬಿಟಿ, ವಿವಿಧ ದೇಶಗಳಿಗೆ ತೆರಳುತ್ತಿರುವ ಸರ್ವ ಪಕ್ಷ ನಿಯೋಗದಲ್ಲಿ ತಮ್ಮ ಪಕ್ಷ ಭಾಗಿ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು, ಉದ್ಧವ್ ಠಾಕ್ರೆ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿರುವುದಾಗಿ ತಿಳಿಸಿದೆ.
ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ವಿವರಿಸಲು ವಿದೇಶಕ್ಕೆ ಸರ್ವ ಪಕ್ಷ ತೆರಳುತ್ತಿದ್ದು, ರಾಜಕಾರಣಕ್ಕೆ ಅಲ್ಲ ಎಂಬುದಾಗಿ ಸ್ಪಷ್ಪಪಡಿಸಲಾಗಿದೆ.
ಈ ನಿಯೋಗದ ಮೂಲಕ ನಮ್ಮ ದೇಶಕ್ಕೆ ಯಾವುದು ಸರಿ ಮತ್ತು ಏನು ಬೇಕೋ ಅದನ್ನು ಮಾಡುತ್ತೇವೆ ಎಂದು ನಾವು ಸರ್ಕಾರಕ್ಕೆ ಭರವಸೆ ನೀಡಿದ್ದೇವೆ. ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಇತರ ಸಂಸದರ ನಿಯೋಗದಲ್ಲಿರುವವರು ಎಂದು ಶಿವಸೇನಾ ಯುಬಿಟಿ ಹೇಳಿದೆ.
Advertisement