Madhya Pradesh: ಸರ್ಕಾರದ ಹಣಕ್ಕಾಗಿ ಹಾವು ಕಡಿತವೆಂದು ಹೇಳಿ 58 ಬಾರಿ ಸತ್ತ ಇಬ್ಬರು ಚಾಲಾಕಿಗಳು!

ರಾಜ್ಯ ಸರ್ಕಾರದಿಂದ ಪರಿಹಾರ, ಆರ್ಥಿಕ ನೆರವು ಪಡೆಯಲು ಸರ್ಕಾರಿ ದಾಖಲೆಗಳಲ್ಲಿ ಹಾವು ಕಡಿತ, ಮುಳುಗುವಿಕೆ ಮತ್ತು ಸಿಡಿಲು ಸಂಬಂಧಿತ ನಕಲಿ ಸಾವಿಗೆ ಸಂಬಂಧಿಸಿದಂತೆ ರೂ.11.26 ಕೋಟಿ ಮೊತ್ತದ ಹಗರಣ ಸಿಯೋನಿಯಲ್ಲಿ ಬೆಳಕಿಗೆ ಬಂದಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಭೋಪಾಲ್: ಸರ್ಕಾರದ ಹಣಕ್ಕಾಗಿ ಹಾವು ಕಡಿತವೆಂದು ಹೇಳಿ ಇಬ್ಬರು 58 ಸಾವನ್ನಪ್ಪಿರುವುದಾಗಿ ನಾಟಕವಾಡಿರುವ ಘಟನೆ ಮಧ್ಯ ಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು 29 ಬಾರಿ ಸರ್ಕಾರಿ ನೌಕರರೊಂದಿಗೆ ಅಪವಿತ್ರ ಸಂಬಂಧಕ್ಕೆ ಕೋಟಿಗಟ್ಟಲೆ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

ರಾಜ್ಯ ಸರ್ಕಾರದಿಂದ ಪರಿಹಾರ, ಆರ್ಥಿಕ ನೆರವು ಪಡೆಯಲು ಸರ್ಕಾರಿ ದಾಖಲೆಗಳಲ್ಲಿ ಹಾವು ಕಡಿತ, ಮುಳುಗುವಿಕೆ ಮತ್ತು ಸಿಡಿಲು ಸಂಬಂಧಿತ ನಕಲಿ ಸಾವಿಗೆ ಸಂಬಂಧಿಸಿದಂತೆ ರೂ.11.26 ಕೋಟಿ ಮೊತ್ತದ ಹಗರಣ ಸಿಯೋನಿಯಲ್ಲಿ ಬೆಳಕಿಗೆ ಬಂದಿದೆ. ಕಿಯೋಲಾರಿ ತಹಸಿಲ್ ನ ಪರಿಶೀಲನೆಯೊಂದಿಗೆ ಹಣಕಾಸು ಇಲಾಖೆ ನಡೆಸಿದ ತನಿಖೆ ವೇಳೆ ಈ ಹಗರಣ ಬೆಳಕಿಗೆ ತಂದಿದೆ.

ತನಿಖೆ ನಂತರ ರೂ. 11. 26 ಕೋಟಿ ಮೊತ್ತದ ಹಗರಣ ಮುನ್ನೆಲೆಗೆ ಬಂದಿದೆ. ವಂಚಿಸಲಾದ ರೂ.11.26 ಕೋಟಿ ಹಣವನ್ನು 47 ಜನರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ವರ್ಷವಿಡೀ ತನಿಖೆಯ ನೇತೃತ್ವ ವಹಿಸಿದ್ದ ಜಂಟಿ ನಿರ್ದೇಶಕ (ಹಣಕಾಸು) ರೋಹಿತ್ ಕೌಶಲ್ ಬುಧವಾರ ಹೇಳಿದ್ದಾರೆ.

ಹಗರಣದ ಕಿಂಗ್‌ಪಿನ್, ಸಹಾಯಕ ಗ್ರೇಡ್ III ಸಚಿನ್ ದಹಾಯಕ್, ಹಣವನ್ನು ತನ್ನ ಕುಟುಂಬ, ಸ್ನೇಹಿತರು ಮತ್ತು ಪರಿಚಯಸ್ಥರ ಖಾತೆಗಳಿಗೆ ವರ್ಗಾಯಿಸಿದ್ದಾನೆ. ಫಲಾನುಭವಿ ಖಾತೆಗಳಿಗೆ ಬದಲಾಗಿ ವೈಯಕ್ತಿಕ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿದೆ.

2018-19 ಮತ್ತು 2021-22ರ ನಡುವೆ ನಡೆದಿರುವ ಈ ಹಗರಣದಲ್ಲಿ ಹಾವು ಕಡಿತ, ನೀರಿನಲ್ಲಿ ಮುಳುಗುವಿಕೆ ಮತ್ತು ಸಿಡಿಲು ಬಡಿತದಿಂದ ಸಾವನ್ನಪ್ಪಿದವರು ಎಂದು ಸರ್ಕಾರಿ ದಾಖಲೆಗಳಲ್ಲಿ ತೋರಿಸಲಾಗಿದೆ. ಕೆಯೊಲಾರಿ ತಹಸಿಲ್‌ನ ಬಿಲ್‌ಗಳು/ದಾಖಲೆಗಳಲ್ಲಿ ರಮೇಶ್ ಎಂಬ ವ್ಯಕ್ತಿ 30 ಬಾರಿ ಸಾವನ್ನಪ್ಪಿದ್ದರೆ, ದ್ವಾರಿಕಾ ಬಾಯಿ 29 ಬಾರಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.

ರಾಮ್ ಕುಮಾರ್ ಎಂಬಾತ 28 ಬಾರಿ ಹಾವು ಕಡಿತದಿಂದ ಮೃತಪಟ್ಟಿರುವುದಾಗಿ ತೋರಿಸಲಾಗಿದೆ. ಹಾವು ಕಡಿತ, ನೀರಿನಲ್ಲಿ ಮುಳುಗುವಿಕೆ ಮತ್ತು ಸಿಡಿಲು ಬಡಿತ ಮುಂತಾದ ನೈಸರ್ಗಿಕ ವಿಕೋಪಗಳಿಂದ ಸಾವನ್ನಪ್ಪುವವರ ಕುಟುಂಬಗಳಿಗೆ ಗರಿಷ್ಠ ರೂ. 4 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ.

ಹಾವು ಕಡಿತದಂತಹ ನೈಸರ್ಗಿಕ ವಿಕೋಪಗಳಿಗೆ ನೀಡಿದ ಆರ್ಥಿಕ ನೆರವಿಗೆ ಸಂಬಂಧಿಸಿದ ಎಲ್ಲಾ ಬಿಲ್‌ಗಳನ್ನು ಪರಿಶೀಲಿಸಿದ್ದೇವೆ. 11.26 ಕೋಟಿ ಅವ್ಯವಹಾರ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಕಿಯೋಲಾರಿ ತಹಸಿಲ್‌ನ ದಾಖಲೆಗಳಲ್ಲಿ ಸತ್ತವರ ಮರಣ ಪ್ರಮಾಣಪತ್ರಗಳು ಮತ್ತು ಶವಪರೀಕ್ಷೆ ವರದಿಗಳಿಗೆ ಪದೇ ಪದೇ ಮನವಿ ಮಾಡಿದರೂ ಲಭ್ಯವಾಗಲಿಲ್ಲ ಎಂದು ಜಂಟಿ ನಿರ್ದೇಶಕ (ಹಣಕಾಸು) ರೋಹಿತ್ ಕೌಶಲ್ ಹೇಳಿದ್ದಾರೆ.

Casual Images
ಮಧ್ಯ ಪ್ರದೇಶ: 'ಅಲ್ಲಾಹು, ಪಾಕ್ ಸೈನಿಕರನ್ನು ಸುರಕ್ಷಿತವಾಗಿಡು' ಎಂಬ ವಿಡಿಯೋ ಹಂಚಿಕೊಂಡ ಸರ್ಕಾರಿ ಶಾಲೆ ಶಿಕ್ಷಕಿ ಅಮಾನತು!

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com