
ನವದೆಹಲಿ: ಭಯೋತ್ಪಾದನೆ ಮತ್ತು ನಕ್ಸಲ್‌ವಾದದ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಗೆ ತಮ್ಮ ಸರ್ಕಾರದ ಅಚಲ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ, ಈಶಾನ್ಯ ಭಾರತ ರಾಜ್ಯಗಳ ಸಂಪೂರ್ಣ ಸಾಮರ್ಥ್ಯವನ್ನು ತೋರಿಸಲು ಶಾಂತಿ ಮತ್ತು ಭದ್ರತೆ ಅತ್ಯಗತ್ಯ ಎಂದು ಒತ್ತಿ ಹೇಳಿದರು.
'ರೈಸಿಂಗ್ ನಾರ್ತ್ ಈಸ್ಟ್ ಇನ್ವೆಸ್ಟರ್ಸ್ ಸಮ್ಮಿತ್ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಒಂದು ಕಾಲದಲ್ಲಿ ಹಿಂಸಾಚಾರದಿಂದ ಬಳಲುತ್ತಿದ್ದ ಈ ಪ್ರದೇಶವು ಈಗ ಪರಿವರ್ತನೆ ಮತ್ತು ತ್ವರಿತ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಹೇಳಿದರು.
ಕಳೆದೊಂದು ದಶಕದಲ್ಲಿ ಈಶಾನ್ಯ ಭಾಗದ 10,000 ಕ್ಕೂ ಹೆಚ್ಚು ಯುವಕರು ಹಿಂಸಾಚಾರವನ್ನು ತ್ಯಜಿಸಿದ್ದಾರೆ ಎಂದು ಅವರು ಹೇಳಿದರು, ಇದು ಬದಲಾವಣೆ ಮತ್ತು ಸ್ಥಿರತೆಯ ಪ್ರಬಲ ಸಂಕೇತವಾಗಿದೆ ಎಂದು ಶ್ಲಾಘಿಸಿದರು.
ಈಶಾನ್ಯ ಭಾರತ ದೇಶದ ಬೆಳವಣಿಗೆಯ ಹೊಸ ಕೇಂದ್ರಬಿಂದು. ಈಶಾನ್ಯ ಭಾಗವನ್ನು ಕೇವಲ ಗಡಿಭಾಗ ಎಂದು ಕರೆಯುತ್ತಿದ್ದ ಕಾಲವಿತ್ತು. ಈಗ ಅದು ಬೆಳವಣಿಗೆಯ ಮುಂಚೂಣಿಯಲ್ಲಿದೆ ಎಂದರು.
EAST ಎಂದರೆ ಸಬಲೀಕರಣ, ಕಾರ್ಯ, ಬಲವರ್ಧನೆ ಮತ್ತು ಪರಿವರ್ತನೆ, ಇದು ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರೀಕೃತ ಕಾರ್ಯಸೂಚಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದಿನ ಶೃಂಗಸಭೆಯಲ್ಲಿ ಉನ್ನತ ಮಟ್ಟದ ಉದ್ಯಮ ನಾಯಕರಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ಅನಿಲ್ ಅಗರ್ವಾಲ್ ಇತರರು ಭಾಗವಹಿಸಿದ್ದರು.
Advertisement