ಮಧ್ಯಪ್ರದೇಶ: ಟ್ರಯಲ್ ರೂಮ್​ನಲ್ಲಿ ಹಿಡನ್ ಕ್ಯಾಮೆರಾ ಪತ್ತೆ; ಬಟ್ಟೆ ಅಂಗಡಿ ಮಾಲೀಕ, ಆತನ ಪುತ್ರನ ಬಂಧನ

ಕೆಲವು ವಿಡಿಯೋಗಳನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದ ಬಂಧಿತ ವ್ಯಕ್ತಿಯ ಅಪ್ರಾಪ್ತ ಮಗನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಶಹದೋಲ್: ಮಧ್ಯ ಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಬಟ್ಟೆ ಅಂಗಡಿಯ ಮಾಲೀಕನೊಬ್ಬ ತನ್ನ ಅಂಗಡಿಯ ಮಹಿಳೆಯರ ಟ್ರಯಲ್ ರೂಮ್​ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಕೆಲವು ವಿಡಿಯೋಗಳನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದ ಬಂಧಿತ ವ್ಯಕ್ತಿಯ ಅಪ್ರಾಪ್ತ ಮಗನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲವು ಸ್ಥಳೀಯ ಮಹಿಳೆಯರ ವಿಡಿಯೋಗಳು ಶುಕ್ರವಾರ ವೈರಲ್ ಆಗುತ್ತಿದ್ದಂತೆ ಈ ವಿಷಯ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ದೇವೋಲಂದ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಧ್ವಾ ಪಟ್ಟಣದ ನಾರಾಯಣ ಗುಪ್ತಾ ಒಡೆತನದ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಗುಪ್ತ ಕ್ಯಾಮೆರಾ ಇದೆ ಎಂದು ಆರೋಪಿಸಿ ಕೃಷ್ಣಪಾಲ್ ಸಿಂಗ್ ಬೈಸ್ ಎಂಬುವವರು ಶನಿವಾರ ಬೆಳಗ್ಗೆ ದೂರು ನೀಡಿದ್ದರು.

ಸಾಂದರ್ಭಿಕ ಚಿತ್ರ
ಸ್ಮೃತಿ ಇರಾನಿ ಟ್ರಯಲ್ ರೂಮ್ ಪ್ರಕರಣ: ಫ್ಯಾಬ್ ಇಂಡಿಯಾ ಎಂ.ಡಿ, ಸಿಇಒ ವಿಚಾರಣೆ

ಪೊಲೀಸರು ಅಂಗಡಿಯ ಮೇಲೆ ದಾಳಿ ನಡೆಸಿದಾಗ ಕ್ಯಾಮೆರಾ ಪತ್ತೆಯಾಗಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಸುಭಾಷ್ ದುಬೆ ತಿಳಿಸಿದ್ದಾರೆ.

ಮಾಲೀಕ ನಾರಾಯಣ ಗುಪ್ತಾ ಸ್ವತಃ ಕ್ಯಾಮೆರಾ ಅಳವಡಿಸಿದ್ದು, ಮಹಿಳೆಯರು ಬಟ್ಟೆ ಬದಲಾಯಿಸುವ ವಿಡಿಯೋಗಳನ್ನು ತನ್ನ ಕಂಪ್ಯೂಟರ್‌ನಲ್ಲಿ ವೀಕ್ಷಿಸುತ್ತಿದ್ದ ಎಂದು ಇನ್ಸ್‌ಪೆಕ್ಟರ್ ದುಬೆ ಪಿಟಿಐಗೆ ತಿಳಿಸಿದ್ದಾರೆ.

ಮಾಲೀಕ, ಅವರ 14 ವರ್ಷದ ಮಗ ಈ ವಿಡಿಯೋಗಳನ್ನು ಪತ್ತೆ ಮಾಡಿ, ಅವುಗಳಲ್ಲಿ ಕೆಲವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com